ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಟ ಶಶಿಕುಮಾರ್ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಶಶಿಕುಮಾರ್ ಹೊಸದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಈ ಬಾರಿ ಬಿ.ಜಿ.ಗೋವಿಂದಪ್ಪರಿಗೆ ಟಿಕೆಟ್ ನೀಡಿದೆ. ಇದ್ರಿಂದ ಅಸಮಾಧಾನಗೊಂಡಿದ್ದ ಶಶಿಕುಮಾರ್ ಕಾಂಗ್ರೆಸ್ ತೊರೆದು ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಸೇರಿದ್ದಾರೆ.
ಜೆಡಿಎಸ್ ನಾಯಕರು ಶಶಿಕುಮಾರ್ ಅವರಿಗೆ ಹೊಸದುರ್ಗ ಕ್ಷೇತ್ರದಿಂದಲೇ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಇತ್ತೀಚೆಗೆ ನಟಿ ಅಮೂಲ್ಯ ಜಗದೀಶ್ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು.
2013ರಲ್ಲಿ ನಡೆದ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಬಿ.ಜಿ.ಗೋವಿಂದಪ್ಪ ಸ್ಪರ್ಧಿಸಿ ಗೆಲುವನ್ನು ಕಂಡಿದ್ದರು. ಒಟ್ಟು ಮೂರು ಬಾರಿ ಹೊಸದುರ್ಗ ಕ್ಷೇತ್ರದಿಂದ ಶಾಸಕರಾಗಿರುವ ಬಿ.ಜಿ.ಗೋವಿಂದಪ್ಪ 2008ರಲ್ಲಿ ಪಕ್ಷೇತರ ಅಭ್ಯರ್ಥಿ ಎದರು ಒಂದು ಸಾರಿ ಸೋಲು ಅನುಭವಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ಜಿ.ಗೋವಿಂದಪ್ಪ 58,010 ಮತಗಳನ್ನು ಪಡೆದಿದ್ರೆ, ಎದುರಾಳಿ ಪಕ್ಷೇತರ ಅಭ್ಯರ್ಥಿ ಶೇಕರ್ ಗೂಳಿಹಟ್ಟಿ ಅವರು 37,993 ಮತಗಳನ್ನು ಗಳಿಸಿದ್ರು.
Comments are closed.