ರಾಷ್ಟ್ರೀಯ

ಮ್ಯಾಟ್ರಿಮೋನಿಯಲ್‌ನಲ್ಲಿ ಮಹಾಮೋಸ: 15 ಲಕ್ಷ ರೂ. ಪಂಗನಾಮ ಆ್ಯಂಕರ್‌

Pinterest LinkedIn Tumblr


ಹೊಸದಿಲ್ಲಿ: ಜನ ಎಷ್ಟೋ ಬುದ್ವಂತರಾದರೂ ಈ ನೈಜೀರಿಯನ್‌ ಕ್ರಿಮಿನಲ್‌ಗಳು ಹೇಗಾದರೂ ಯಾಮಾರಿಸುತ್ತಲೇ ಇರುತ್ತಾರೆ! ಅವರ ಲೇಟೆಸ್ಟ್‌ ವಂಚನೆಯ ಕಥೆ ಇಲ್ಲಿದೆ. ಇದು ಮದುವೆ ಪ್ರಸ್ತಾಪದ ಬೆನ್ನು ಹತ್ತಿದ ಮಹಿಳೆಯೊಬ್ಬರಿಗೆ 15 ಲಕ್ಷ ರೂ. ವಂಚಿಸಿದ ಸ್ಟೋರಿ.

ದಿಲ್ಲಿಯ ಮೋತಿಯಾ ಖಾನ್‌ ಪ್ರದೇಶದ ವ್ಯಕ್ತಿಯೊಬ್ಬರ ಮಗಳಿಗೆ ವರ ಹುಡುಕ್ತಾ ಇದ್ದರು. ಮ್ಯಾಟ್ರಿಮೋನಿಯಲ್‌ ಸೈಟ್‌ ಒಂದು ವಿನೋದ್‌ ಅಭಿಷೇಕ್‌ ಎಂಬ ವ್ಯಕ್ತಿ ನಿಮಗೆ ಸೂಕ್ತ ಎಂದು ಸಲಹೆ ನೀಡಿತು. ಯುವತಿಯ ತಾಯಿ ವೆಬ್‌ಸೈಟ್‌ ಮೂಲಕವೇ ಆತನನ್ನು ಸಂಪರ್ಕಿಸಿ ಪರಸ್ಪರ ಫೋನ್‌ ನಂಬರ್‌ ವಿನಿಮಯ ಮಾಡಿಕೊಂಡರು. 2017ರ ಸೆಪ್ಟೆಂಬರ್‌ 19ರಂದು ಮೊದಲ ಬಾರಿಗೆ ಫೋನ್‌ನಲ್ಲಿ ಮಾತನಾಡಿಕೊಂಡರು.

ಅಕ್ಟೋಬರ್‌ನಲ್ಲಿ ಮಹಿಳೆಗೆ ಕರೆ ಮಾಡಿದ ಅಭಿಷೇಕ್‌ ತಾನು ಹಡಗಿನಲ್ಲಿ ಕರ್ತವ್ಯ ನಿರತನಾಗಿದ್ದು ಅ.20ರಂದು ಮುಂಬಯಿ ತಲುಪುವುದಾಗಿ ತಿಳಿಸಿದ. ಅಕ್ಟೋಬರ್‌ 21ರಂದು ಮನೆಗೆ ಬಂದು ಕುಟುಂಬವನ್ನು ಭೇಟಿ ಮಾಡುವುದಾಗಿ ಹೇಳಿದ.
ಕೆಲವೇ ದಿನಗಳಲ್ಲಿ ಮರಳಿ ಫೋನ್‌ ಮಾಡಿದ ಆತ, ‘‘ನಮ್ಮ ಹಡಗಿನ ಮೇಲೆ ಸೋಮಾಲಿಯಾದ ಕಡಲುಗಳ್ಳರು ದಾಳಿ ಮಾಡಿದ್ದಾರೆ. ನಾನು ನನ್ನ ವೈಯಕ್ತಿಕ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅವುಗಳನ್ನು ನಿಮ್ಮ ವಿಳಾಸಕ್ಕೆ ಕಳುಹಿಸಿದ್ದೇನೆ ಎಂದು ಹೇಳಿದ. ವಿಮಾನದ ಸರಕು ಸಾಗಾಟದ ಮೊತ್ತವನ್ನು ನಾನು ಭರಿಸಿದ್ದೇನೆ. ಉಳಿದ ಮೊತ್ತವನ್ನು 1,450 ಅಮೆರಿಕನ್‌ ಡಾಲರ್‌ ನೀವು ಕೊಡಬೇಕಾದೀತು,’’ ಎಂದು ಹೇಳಿದ.

ಬಳಿಕ ಆತ ಕಳುಹಿಸಿದ ವಸ್ತುಗಳು ಮುಂಬಯಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿವೆ ಎಂಬ ಸಂದೇಶ ಬಂತು. ಜತೆಗೆ ಆದಾಯ ವಿಲೇವಾರಿ, ವಿಶ್ವಸಂಸ್ಥೆ ಅನುಮತಿ, ಅಮೆರಿಕ ಸರಕಾರಕ್ಕೆ ಪಾವತಿಸಬೇಕಾದ ವಲಸೆ ಶುಲ್ಕದ ಹೆಸರಿನಲ್ಲಿ 1,92,083 ರೂ. 4,96,700 ರೂ., 7.50 ಲಕ್ಷ ರೂ. ಮತ್ತು 1 ಲಕ್ಷ ರೂ. ಕಟ್ಟಬೇಕು ಎಂದು ಸೂಚಿಸಲಾಯಿತು. ಅಂತೆಯೇ ಮಹಿಳೆ ಅದೆಲ್ಲವನ್ನೂ ಪಾವತಿಸಿದರು.
ಇಷ್ಟೆಲ್ಲ ಆದ ಮೇಲೆ ಮಹಿಳೆ ಮತ್ತು ಕುಟುಂಬದವರಿಗೆ ತಾವು ಮೋಸ ಹೋಗಿರುವುದಾಗಿ ತಿಳಿಯಿತು. ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದರು.

ಪೊಲೀಸರು ದೂರು ಮತ್ತು ಹಣ ಪಾವತಿಯ ಬೆನ್ನು ಹತ್ತಿ ಹೋದಾಗ ಇದೆಲ್ಲವೂ ನೈಜೀರಿಯಾ ಮೂಲಕ ಒಬೋ ಟೋನಿ ಮತ್ತು ಆತನ ಪತ್ನಿ ರೋಸಿ ನೊರೋನ್ಹಾ ಮಾಡಿದ ವಂಚನೆಯ ಪ್ಲ್ಯಾನ್‌ ಇದು ಎಂಬುದು ಬಯಲಾಯಿತು. ದಿಲ್ಲಿಯ ಮಯೂರ್‌ ವಿಹಾರ್‌ನಲ್ಲಿ ಅವರಿಬ್ಬರನ್ನು ಬಂಸಲಾಗಿದೆ.

Comments are closed.