ಕರ್ನಾಟಕ

ಸಿ-ಫೋರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಮತ್ತೆ ಅಧಿಕಾರ

Pinterest LinkedIn Tumblr


ಬೆಂಗಳೂರು: ಮೂರೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಮತ್ತೊಮ್ಮೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿರುವ ಸಿ-ಪೋರ್ ಕಾಂಗ್ರೆಸ್ ಬಹುಮತ ಗಳಿಸಿಲಿದೆ ಎಂದು ಹೇಳಿದೆ. ಈ ಮಕೊದಲು ಮಾಡಿದ್ದ ಸಮೀಕ್ಷೆಯಲ್ಲೂ ಕಾಂಗ್ರೆಸ್ ಗದ್ದುಗೆಗೆ ಏರಲಿದೆ ಎಂದು ಸಿ-ಪೋರ್ ಹೇಳಿತ್ತು.
ಈ ಸಮೀಕಕ್ಷೆಯಲ್ಲಿ, ಕಾಂಗ್ರೆದ್ 118-120 ಸ್ಥಾನ , ಬಿಜೆಪಿ 63-73, ಜೆಡಿಎಸ್ 29-36 ಸ್ಥಾನ, ಹಾಗೂ ಇತರರು 2-7 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಎಮದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಇನ್ನು ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷ ಶೇ. 45, ಬಿಜೆಪಿ ಶೇ. 32 ಮತ್ತು ಜೆಡಿಎಸ್ ಶೇ. 18 ಮತಗಳನ್ನು ಪಡೆಯಬಹುದು ಎಂದು ಅಂದಾಜು ಮಾಡಲಾಗಿದೆ. ಕಳೆದ ಬಾರಿಗಿಂತ ಬಿಜೆಪಿಯ ಮತಪ್ರಮಾಣ ಈ ಬಾರಿ ಶೇ. 12ರಷ್ಟು ಹೆಚ್ಚಳವಾಗಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಕಾಂಗ್ರೆಸ್ ಮತಪ್ರಮಾಣ ಕೂಡ ಶೇ. 8ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಜೆಡಿಎಸ್ ಮತಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.

ಕಾಂಗ್ರೆಸ್: 118-128
ಬಿಜೆಪಿ: 63-73
ಜೆಡಿಎಸ್: 29-36
ಇತರೆ: 2-7

ಮತಗಳಿಕೆ ಪ್ರಮಾಣ
ಕಾಂಗ್ರೆಸ್: 45%
ಬಿಜೆಪಿ: 32%
ಜೆಡಿಎಸ್: 18%
ಇತರೆ: 5%

Comments are closed.