ಕರಾವಳಿ

ಕೃಷ್ಣನಗರಿ ಉಡುಪಿಗೆ ಇಂದು ನರೇಂದ್ರ ಮೋದಿ ಆಗಮನ!

Pinterest LinkedIn Tumblr

ಉಡುಪಿ: ಇಂದು ಪ್ರಧಾನಿ‌ ನರೇಂದ್ರ ಮೋದಿ‌ ಉಡುಪಿ ಭೇಟಿ ಹಿನ್ನಲೆಯಲ್ಲಿ ಸಿದ್ದತಾ ಕಾರ್ಯಗಳು ಸಂಪೂರ್ಣವಾಗಿದ್ದು ಮೋದಿ ಸ್ವಾಗತಕ್ಕೆ ವೇದಿಕೆ ಸಜ್ಜಾಗಿದೆ.

ಎಂಜಿಎಂ ಮೈದಾನದಲ್ಲಿ‌ ನಡೆಯಲಿರುವ ಚುನಾವಣಾ ಪ್ರಚಾರದ ಕಾರ್ಯಕ್ರಮ ನಡೆಯಲಿದ್ದು ಸುಮಾರು ಒಂದು‌ ಲಕ್ಷಕ್ಕೂ ಅಧಿಕ ಮಂದಿ ಈ‌ ಪ್ರಧಾನಿ ಕಾರ್ಯಕ್ರಮದಲ್ಲಿ‌ ಭಾಗವಹಿಸಲಿದ್ದಾರೆ. ಈಗಾಗಲೇ ಆಸನದ ವ್ಯವಸ್ಥೆಗಾಗಿ‌ ಕುರ್ಚಿಗಳನ್ನ ಮೈದಾನದಲ್ಲಿ ತಂದಿರಿಸಲಾಗಿದೆ.ಕಾರ್ಮಿಕರು ಹಗಲು ರಾತ್ರಿಯೆನ್ನದೆ ಕೆಲಸ ತಯಾರಿ ಕಾರ್ಯದಲ್ಲಿ ತೊಡಗಿದ್ದರು.

ಎಂಜಿಎಂ ಮೈದಾನದ ದಕ್ಷಿಣ ಭಾಗದಲ್ಲಿ ವಿಶಾಲವಾದ ವೇದಿಕೆಯ‌ ನಿರ್ಮಾಣ ಮಾಡಿದ್ದು, ಇದೇ ವೇದಿಕೆಯಲ್ಲಿ‌ ಪ್ರಧಾನಿ ಕಾರ್ಯಕರ್ತರನ್ನ‌ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನೂ ಆದಿ ಉಡುಪಿ‌ ಹೆಲಿಪ್ಯಾಡನ್ನು‌ ಕೂಡ ಸಜ್ಜುಗೊಳಿಸಲಾಗಿದ್ದು, ವಿಶೇಷ ಹೆಲಕಾಪ್ಟರ್ ಮೂಲಕ ಉಡುಪಿಗೆ ಪ್ರಧಾನಿ ಆಗಮಿಸಲಿದ್ದಾರೆ.

ಉಡುಪಿ ನಗರದೆಲ್ಲೆಡೆ ಖಾಕಿ ಕಣ್ಗಾವಲು ಇರಿಸಿದ್ದು, ಮೋದಿ ಅಗಮನದ ಹಿನ್ನಲೆಯಲ್ಲಿ‌ ಉಡುಪಿ ನಗರದಾದ್ಯಾಂತ ಬಿಗಿ ಪೊಲೀಸ್ ಬಂದೂ ಬಸ್ತ್ ಮಾಡಲಾಗಿದೆ. ಸುಮಾರು ೧,೦೦೦ ಕ್ಕೂ ಹೆಚ್ಚು ಪೊಲೀಸ್ ಸಿಬಂದಿ‌‌ ,ಅರೆ ಸೇನಾ ಪಡೆಗಳನ್ನು‌ ಬಂದೂ ಬಸ್ತ್ ಗಾಗಿ ಏರ್ಪಡಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ನಗರದಾದ್ಯಂತ ಸಿಸಿಟಿವಿ ಅಳವಡಿಸಲಾಗಿದೆ.

ಪ್ರಧಾನಿ ಪ್ರಯಾಣಿಸುವ ದಾರಿಯಲ್ಲಿ ಜಿರೋ ಟ್ರಾಫಿಕ್ ವ್ಯವಸ್ಥೆಯನ್ನು‌ ಕೂಡ ಮಾಡಲಾಗಿದೆ. ಮುಂಜಾನೆಯಿಂದ ಪ್ರಧಾನಿ ವಾಪಸ್ಸು ತೆರಳುವವರೆಗೂ ಈ ಭಾಗದಲ್ಲಿ ಎಲ್ಲಾ ವಾಹನಗಳಿಗೆ ಸಂಚಾರವನ್ನು ನಿಷೇಧಿಸಿದೆ. ಇನ್ನೂ ಪ್ರಧಾನಿ ನರೇಂದ್ರ‌ಮೋದಿ ಕೃಷ್ಣ ಮಠಕ್ಕೆ ಭೇಟಿ‌ ಕೊಡೊದು ಅನುಮಾನ ಅನ್ನೋ‌ ಮಾತುಗಳು ಕೂಡ ಕೇಳಿ ಬರ್ತಾ ಇದೆ. ಉಡುಪಿ ಕಾರ್ಯ ಕ್ರಮದ ನಂತರ ಬೇರೊಂದು‌ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕಾರಣ ಮಠ‌ ಭೇಟಿ ರದ್ದು ಪಡಿಸುವ ಸಾಧ್ಯತೆಗಳು‌ ಕೂಡ ಇದೆ ಎನ್ನಲಾಗಿದೆ.

Comments are closed.