ಶೇಂಗಾ ಎಂದರೆ ಬಹಳಷ್ಟು ಮಂದಿಗೆ ಇಷ್ಟ. ಕೆಲವರು ಇವನ್ನು ಹಾಗೆಯೇ ನೇರವಾಗಿ ತಿನ್ನುತ್ತಾರೆ. ಇನ್ನೂ ಕೆಲವರು ಉಪ್ಪು, ಖಾರ ಹಾಕಿ ರೋಸ್ಟ್ ಮಾಡಿಕೊಂಡು ತಿನ್ನುತ್ತಾರೆ. ಹೇಗೇ ತಿಂದರೂ ಇವು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಇವುಗಳಿಂದ ನಮ್ಮ ದೇಹಕ್ಕೆ ಬೇಕಾದ ಮುಖ್ಯ ಪೋಷಕಾಂಶಗಳು ಲಭ್ಯವಾಗುತ್ತವೆ. ಆದರೆ ಶೇಂಗಾ ತಿಂದ ಕೂಡಲೆ ನೀರನ್ನು ಮಾತ್ರ ಕುಡಿಯಬಾರದು. ಯಾಕೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
ನೆಲಗಡಲೆ ತಿಂದ ಕೂಡಲೆ ನೀರನ್ನು ಯಾಕೆ ಕುಡಿಯಬಾರದು ಎಂದರೆ… ಇವುಗಳಲ್ಲಿ ಎಣ್ಣೆ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಶೇಂಗಾ ತಿಂದ ಕೂಡಲೆ ನೀರನ್ನು ಕುಡಿದರೆ ಅದು ಶೇಂಗಾದಲ್ಲಿರುವ ಆಯಿಲ್ ಜತೆಗೆ ಬೆರೆತು ಆಹಾರ ನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ. ಇನ್ನು ಇದರ ಹಿಂದಿರುವ ಇನ್ನೊಂದು ಕಾರಣ ಏನೆಂದರೆ… ಶೇಂಗಾ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಅಂತಹ ಸಂದರ್ಭದಲ್ಲಿ ಇವನ್ನು ತಿಂದ ಕೂಡಲೆ ನೀರು ಕುಡಿದರೆ ಅವು ತಣ್ಣಗಿರುವ ಕಾರಣ ಒಳಗೆ ಬೆಚ್ಚಗಿನ ಪದಾರ್ಥ ಇದು ಒಂದಕ್ಕೊಂದು ತಾಳೆಯಾಗಲ್ಲ.
ಶೇಂಗಾ ತಿಂದ ಕೂಡಲೆ ನೀರು ಕುಡಿದರೆ ಕೆಮ್ಮು, ನೆಗಡಿ, ಶ್ವಾಸಕೋಶ ಸಮಸ್ಯೆಗಳು ಬರುತ್ತವೆ. ಇನ್ನು ಕೊನೆಯದಾಗಿ ಇನ್ನೊಂದು ಕಾರಣ ಏನೆಂದರೆ.. ಶೇಂಗಾ ತಿಂದ ಕೂಡಲೆ ನೀರನ್ನು ಕುಡಿದರೆ ಅವು ಶೀಘ್ರವಾಗಿ ಜೀರ್ಣವಾಗಲ್ಲ. ಇದರಿಂದ ಗ್ಯಾಸ್, ಅಜೀರ್ಣದಿಂದ ತೊಂದರೆ ಅನುಭವಿಸಬೇಕು. ಆದಕಾರಣ ಶೇಂಗಾ ತಿಂದ ಬಳಿಕ ಕನಿಷ್ಠ 15 ರಿಂದ 20 ನಿಮಿಷ ಬಿಟ್ಟು ನೀರು ಕುಡಿಯುವುದು ಉತ್ತಮ. ಆಗಲೂ ಅಷ್ಟೇ ಉಗುರು ಬೆಚ್ಚಗಿನ ಬಿಸಿ ನೀರು ಕುಡಿಯಬೇಕು. ಇದರಿಂದ ತಿಂದ ಆಹಾರ ಶೀಘ್ರವಾಗಿ, ಯಾವುದೇ ತೊಂದರೆ ಇಲ್ಲದಂತೆ ಜೀರ್ಣವಾಗುತ್ತದೆ.
Comments are closed.