ಕರಾವಳಿ

ಬದಲಾವಣೆಯ ಕಾಲಘಟ್ಟದಲ್ಲಿ ನಾವಿದ್ದೇವೆ – ಯೋಚಿಸಿ ಮತ ನೀಡಿ : ಕೆ.ಪಿ.ಶೆಟ್ಟಿ ಬೇಡೆಮಾರ್

Pinterest LinkedIn Tumblr

ಮಂಗಳೂರು : ಮಂಗಳೂರಿನ 25 ವಾರ್ಡ್ ಗಳ ಚುನಾವಣಾ ಪ್ರಚಾರ ಕಾರ್ಯಕರ್ತರುಗಳ ಸಭೆ ಶ್ರೀಕರ್ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ.ಪಿ ಶೆಟ್ಟಿ ಬೇಡೆ ಮಾರ್ ಅವರ ಅಧ್ಯಕ್ಷತೆಯಲ್ಲಿ ಶ್ರೀಕರ್ ಪ್ರಭು ಅವರ ಚುನಾವಣಾ ಕಚೇರಿಯಲ್ಲಿ ನಡೆಯಿತು.

ಇದು ಬದಲಾವಣೆಯ ಕಾಲ. ಅಜ್ಜನೆಟ್ಟ ಆಲದ ಮರವೆಂದು ಆಮರದಲ್ಲೇನೇಣುಹಾಕಿಕೊಳ್ಳುವಂತಹ ಕಾಲವಲ್ಲ! ಮಂಗಳೂರಿನ ಜನತೆ ಬುದ್ದಿವಂತರೆಂಬುದು ಇಡೀ ದೇಶವೇ ತಿಳಿದಿರುವಸತ್ಯ. ಇಂದು ಚುನಾವಣೆಗೆ ಇಳಿದಿರುವವನ ವ್ಯಕ್ತಿತ್ವವೇ ಮುಖ್ಯ. ಜಾತಿವಾದ, ಕೋಮುವಾದಗಳನ್ನೇ ಬಂಡವಾಳವಾಗಿಸಿ ಯುವಕರ ನಡುವೆ ವಿಷಬೀಜ ಬಿತ್ತಿ ಹೊಡೆದಾಡಿಸಿ, ಕಾಳಗ, ಕೊಲೆಗಳನ್ನು ಪ್ರೋತ್ಸಾಹಿಸುವ, ಜನನಾಯಕ ಜನಪ್ರತಿನಿದಿಗಳೆನಿಸಿಕೊಂಡವರನ್ನು ದೂರವಿಟ್ಟು ಹೊಸಬ್ಬರಿಗೆ ಯುವಕರಿಗೆ ಅವಕಾಶ ನೀಡಬೇಕು ಎಂದು ಈ ಸಂದರ್ಭದಲ್ಲಿ ಕೆ.ಪಿ ಶೆಟ್ಟಿ ಬೇಡೆ ಮಾರ್ ಹೇಳಿದರು.

ಚುನಾವಣೆ ಬಂತೆಂದರೆ, ಎಲ್ಲವನ್ನುಮರೆತಂತೆ ನಟಿಸಿ, ದೇವಸ್ಥಾನ, ಮಸೀದಿ, ಚರ್ಚ್, ಎಲ್ಲೆಂದರಲ್ಲಿಕೈಮುಗಿದು ತೀರ್ಥಸೇವಿಸಿ ಜನರನ್ನು ಮರಳು ಮಾಡುವ ರಾಜಕಾರಣಿಗಳನ್ನು ದೂರವಿಟ್ಟು ಹೊಸಬ್ಬರಿಗೆ ಅವಕಾಶ ನೀಡುವ ಕಾಲಘಟ ಇದು.

ಇಂತಹ ಸಂದರ್ಭದಲ್ಲಿ ಜನಸ್ನೇಹಿ, ಜನಪರ ಕಾಳಜಿಹೊತ್ತು ಜನತಾ ಸೇವೆಜನಾರ್ದನ ಸೇವೆಎಂಬ ದ್ಯೇಯದೊಂದಿಗೆ ದಶಕಗಳಿಗೂ ಮಿಕ್ಕಿ, ತನ್ನಕೈಲಾದಷ್ಟುಸೇವಾಕಾರ್ಯಗಳನ್ನುಮಾಡಿಕೊಂಡು ಬಂದಿರುವ ಶ್ರೀಕರಪ್ರಭುಗ ಸ್ವತಂತ್ರರಾಗಿ ಚುನಾವಣಾ ಕಣದಲ್ಲಿ ಇಳಿದಿರುತ್ತಾರೆ. ಮತದಾರರು ಇಂದಿನ ಪರಿಸ್ಥಿತಿ ಹಾಗು ರಾಜಕೀಯ ವಾತಾವರಣವನ್ನು ಅವಲೋಕಿಸಿ, ಶ್ರೀಕರಪ್ರಭುಗಳ ಗೆಲುವಿಗಾಗಿ ಶ್ರಮಿಸಿ, ಮತನೀಡಿ ಅವರನ್ನು ಆಶೀರ್ವದಿಸಬೇಕು ಎಂದು ಕೆ.ಪಿ ಶೆಟ್ಟಿ ಬೇಡೆ ಮಾರ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಭ್ಯರ್ಥಿ ಶ್ರೀಕರ್ ಪ್ರಭು, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾ ಶೆಟ್ಟಿ, ಚುನಾವಣಾ ಮಾಧ್ಯಮ ಸಲಹೆಗಾರರಾ ಮಹೇಶ್ ಆರ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Comments are closed.