ಕರಾವಳಿ

ಉಡುಪಿಯಲ್ಲಿ ‘ನಮೋ’ ಹವಾ: ತುಳುವಿನಲ್ಲಿ ಭಾಷಣ ಆರಂಭಿಸಿದ ಮೋದಿ!

Pinterest LinkedIn Tumblr

ಉಡುಪಿ: ಆದಿ ಉಡುಪಿಯಿಂದ ಎಂಜಿಎಂ ಸಭಾಂಗಣಕ್ಕೆ ಬಂದು ತುಳುವಿನಲ್ಲಿ ಮೊದಲು ಭಾಷಣ ಆರಂಭಿಸಿದ ಮೋದಿಯವರು ಪರಶುರಾಮ ಸ್ರಷ್ಟಿ ಪುಣ್ಯಭೂಮಿಯಾದ ಉಡುಪಿಗೆ ಆಗಮಿಸಿದ್ದು ಸಂತಸ ತಂದಿದೆ. ಕೃಷ್ಣನಿಗೆ, ಮಧ್ವರಿಗೆ, ಯತಿಗಳಿಗೆ ನನ್ನ ವಂದನೆಗಳು, ಇಲ್ಲಿನ ಜನತೆಗೆ ನನ್ನ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದರು.

ದಕ್ಷಿಣ ಕನ್ನಡ ಉಡುಪಿ ದೇವನಗರಿಯೆಂಬ ಖ್ಯಾತಿಗೆ ಪಾತ್ರವಾಗಿದೆ. ಗುರು ಹಿರಿಯರ ಪ್ರೇರಣೆ ನಮಗೆ ಆಶಿರ್ವಾದವಿದ್ದಂತೆ. ಪ್ರಕರಿ ರಕ್ಷಣೆ ನಮ್ಮ ಜವಬ್ದಾರಿ. ದೇಶದ ಹಾಗೂ ಸಮಾಜದ ಸುಸ್ಥಿತಿಗೆ ಮಠ ಮಂದಿರಗಳ ಕೊಡುಗೆ ಅಪಾರವಾಗಿದೆ. ಉಡುಪಿ ದೇವಾಲಯಗಳ ಬೀಡು. ದೇಶಕ್ಕೆ ಬ್ಯಾಂಕು ತವರೂ ಕೂಡಾ ಹೌದು. ಹಾಜಿ ಅಬ್ದುಲ್ಲಾ , ಡಾ ಟಿ ಎಂ ಪೈ ಎ ಜಿ ಶೆಟ್ಟಿಯ ಕೊಡುಗೆ ಬ್ಯಾಂಕಿಗ್ ಕ್ಷೇತ್ರದಲ್ಲಿ ದೇಶಕ್ಕೆ ಅತೀ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕಡು ಬಡವರಿಂದ ಹಿಡಿದು ಶ್ರೀಮಂತ ವರ್ಗದ ಜನರು ಬ್ಯಾಂಕಿಗ್ ಸವಲತ್ತು ಪಡೆದುಕೊಂಡಿದ್ದಾರೆ

ಕಾಮನ್ ವೆಲ್ತ್ ಗೇಮ್ನ್ ನಲ್ಲಿ ಬೆಳ್ಳಿ ಪಡೆದ ಗುರುರಾಜ್ ಪೂಜಾರಿಯವರನ್ನು ಈ ಸಂದರ್ಭ ಮೋದಿ ಕೊಂಡಾಡಿದರು.

ಇಲ್ಲಿನ ಜನರ ಮುಖವನ್ನು ನೋಡಿದರೆ ಈ ಭಾಗದ ಜನ ಕಾಂಗ್ರೆಸ್ ಕಿತ್ತೊಗೆಯುವ ನಿರೀಕ್ಷೆಯಲ್ಲಿದ್ದಾರೆ.

Comments are closed.