ಅಂತರಾಷ್ಟ್ರೀಯ

ಪಾಕ್‌ ಜೈಲಿನಿಂದ ಡಾ. ಶಕೀಲ್‌ ಆಫ್ರಿದಿ ಶೀಘ್ರ ಬಿಡುಗಡೆ: ವಕೀಲ

Pinterest LinkedIn Tumblr


ಪೇಶಾವರ: ಅಲ್‌ ಕಾಯಿದಾ ಉಗ್ರ ಸಂಘಟನೆಯ ಮುಖ್ಯಸ್ಥ ಉಸಾಮಾ ಬಿನ್‌ ಲಾಡೆನ್‌ ಇಲ್ಲಿಗೆ ಸಮೀಪದ ಅಬೋಟಾಬಾದ್‌ನಲ್ಲಿ ಅಡಗಿಕೊಂಡಿರುವ ಬಗ್ಗೆ ಅಮೆರಿಕದ ಸಿಐಎಗೆ ಮಾಹಿತಿ ನೀಡಿದ್ದಕ್ಕಾಗಿ 33 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಕ್‌ ವೈದ್ಯ ಡಾ. ಶಕೀಲ್‌ ಆಫ್ರಿದಿಯ ಶಿಕ್ಷೆಯನ್ನು ಅಧಿಕಾರಿಗಳು 10 ವರ್ಷಗಳಿಗೆ ಮಾಫಿ ಮಾಡಿರುವ ಕಾರಣ ಅವರು ಈ ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಪೇಶಾವರ ಸಮೀಪದ ಅಬೋಟಾಬಾದ್‌ನಲ್ಲಿ ನಕಲಿ ಚುಚ್ಚುಮದ್ದು ಕಾರ್ಯಾಚರಣೆ ಮೂಲಕ ಉಸಾಮಾ ಬಿನ್‌ ಲಾಡೆನ್‌ ಅಡಗುದಾಣದ ಮಾಹಿತಿಯನ್ನು ಸಿಎಐಗೆ ನೀಡುವಲ್ಲಿ ನೆರವಾಗಿದ್ದ ಡಾ. ಆಫ್ರಿದಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅಮೆರಿಕ ಪಾಕಿಸ್ಥಾನವನ್ನು ಒತ್ತಾಯಿಸುತ್ತಲೇ ಬಂದಿತ್ತು.

ಜೈಲು ಶಿಕ್ಷೆಯಲ್ಲಿ ಹಲವು ಮಾಫಿಗಳನ್ನು ಪಡೆದಿರುವ ಡಾ. ಆಫ್ರಿದಿ ಅವರು ಈ ತಿಂಗಳಲ್ಲಿ ತಮ್ಮ ಬಾಕಿ ಜೈಲು ಶಿಕ್ಷೆಯನ್ನು ಪೂರೈಸಿ ಹೊರ ಬರಲಿದ್ದಾರೆ ಎಂದು ಅವರ ವಕೀಲ ಕಮರ್‌ನದೀಮ್‌ ಅವರು ಬಿಬಿಸಿ ಉರ್ದು ಸೇವೆಗೆ ತಿಳಿಸಿದ್ದಾರೆ.

-ಉದಯವಾಣಿ

Comments are closed.