ಕರಾವಳಿ

ಮಂಗಳೂರಿನ ಸರ್ವಾಗಿಣ ಏಳಿಗೆಗೆ ಬಿಜೆಪಿಯನ್ನು ಬೆಂಬಲಿಸಲು ದಕ್ಷಿಣ ಅಭ್ಯರ್ಥಿ ವೇದವ್ಯಾಸ್ ಕಾಮತ್ ಮನವಿ

Pinterest LinkedIn Tumblr

ಸುಂದರ – ಸ್ವಚ್ಚ – ಸಮೃದ್ಧ ಮಂಗಳೂರು ನನ್ನ ಕನಸು ’ : ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್

ಮಂಗಳೂರು, ಎಪ್ರಿಲ್ .02: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಸಮಾಜ ಸೇವಕ, ಉತ್ಸಾಹಿ ಯುವ ನಾಯಕ ವೇದವ್ಯಾಸ್ ಕಾಮತ್ ಅವರ ಮನೆ ಮನೆ ಭೇಟಿಯ ಕಾರ್ಯಕ್ರಮ ಬುಧವಾರ ಬಹಳ ಯಶಸ್ವಿಯಾಗಿ ನಡೆಯಿತು.

ಕಾರ್ಯಕರ್ತರು ಬಹಳ ಹುಮ್ಮಸ್ಸಿನಿಂದ ಭಾಗವಹಿಸಿದರು. ನಗರ ಬೋಳೂರ್ ಹಾಗೂ ಎಕ್ಕೂರು ಸದಾಶಿವ ನಗರಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರಿನ ಸರ್ವಾಗಿಣ ಏಳಿಗೆಗೆ ಬಿಜೆಪಿಯನ್ನು ಬೆಂಬಲಿಸಲು ಮತದಾರರಲ್ಲಿ ಮನವಿ ಮಾಡಿದರು. ಮಂಗಳೂರು ನಗರದ ಪ್ರಮುಖ ಅಭಿವೃದ್ಧಿ ಯೋಜನೆಯ ಹಿಂದೆ ಕೆಲಸ ಮಾಡಿರುವುದು ಬಿಜೆಪಿ. ಬಿಜೆಪಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬ ನಾಯಕನನ್ನು ಕೂಡ ಅತ್ಯಂತ ಗೌರವಪೂರ್ಣವಾಗಿ ನಡೆಸಿಕೊಂಡು ಬಂದಿದೆ. ಆದರೆ ಬೇರೆ ಪಕ್ಷಗಳು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು, ದೇಶದ ಸಂವಿಧಾನದ ಶಿಲ್ಪಿಗಳನ್ನು ಹೇಗೆ ನಡೆಸಿಕೊಂಡಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.

“ಬಿರು ಬಿಸಿಲಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ನಮಗೆ ಪ್ರತೀ ಮನೆಗಳಲ್ಲಿಯೂ ಭಾರತೀಯ ಜನತಾ ಪಾರ್ಟಿ ಪರ ತಂಪು ವಾತಾವರಣ ಕಂಡು ಬರುತ್ತಿದೆ. ಇದೊಂದೇ ಸಾಕು ನಮ್ಮ ಉತ್ಸಾಹ ನೂರ್ಮಡಿಯಾಗಲು” ಎಂದು ವೇದವ್ಯಾಸ್ ಕಾಮತ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ವೇದವ್ಯಾಸ್ ಕಾಮತ್ ಸ್ಥಳಕ್ಕೆ ಆಗಮಿಸುವ ಮೊದಲೇ ನೇಶನಲ್ ಬೋಳೂರು ಪರಿಸರದಲ್ಲಿ ಜನರು ಹಾಗೂ ಕಾರ್ಯಕರ್ತರು ಬಹಳ ಸಂಖ್ಯೆಯಲ್ಲಿ ಸೇರಿದ್ದರು. ನೇಶನಲ್ ಬೊಕ್ಕಪಟ್ಣ, ಮಠದಕಣಿ, ಬೋಳೂರು, ಸುಲ್ತಾನ್ ಬತ್ತೇರಿಯ ಸುತ್ತಮುತ್ತ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಸಮಾಲೋಚಣೆ ನಡೆಸಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಬಹಳಷ್ಟು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ಕಿರಣ್ ರೈ, ಭರತ್ ರಾಜ್ ಶೆಟ್ಟಿ, ಸಂದೀಪ್ ಗರೋಡಿ ಉಮೇಶ್ ಜಪ್ಪಿನಮೊಗರು ಸಂಜಯ್ ಉಮೇಶ್ ಎಕ್ಕೂರು, ಭರತ್ ಶೆಟ್ಟಿ, ಸ್ನೇಹಾ, ವೀಣಾ ಮಂಗಲ, ಹೇಮಲತಾ ಶೆಟ್ಟಿ, ಸುಮತಿ ಎಕ್ಕೂರು, ಮುಂತಾದವರು ಉಪಸ್ಥಿತರಿದ್ದರು.

ವಿವಿಧೆಡೆಗಳಲ್ಲಿ ಕಾರ್ಯಕರ್ತರೊಂದಿಗೆ ಮತಪ್ರಚಾರ :

ಮಂಗಳೂರು ನಗರ ದಕ್ಷಿಣದಲ್ಲಿ ಬಿಜೆಪಿ ಬಿರುಸಿನ ಪ್ರಚಾರ ಕೈಗೊಂಡಿದೆ. ಮಂಗಳವಾರ ಬೆಂಗರೆ, ಬಿಜೈ, ಕಾಪಿಕಾಡ್ ನಲ್ಲಿ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ್ ಕಾಮತ್ ಕಾರ್ಯಕರ್ತರೊಂದಿಗೆ ಮತಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಈ ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರಲು ಸುಲಭವಾಗುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ಕಾರ್ಯಕರ್ತ ಕೂಡ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವುದು ಕಂಡುಬರುತ್ತದೆ ಎಂದು ಅವರು ಹೇಳಿದರು.

Comments are closed.