ಕರ್ನಾಟಕ

ನಂದಿಬೆಟ್ಟದಿಂದ ಪ್ರಪಾತಕ್ಕೆ ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಬೆಟ್ಟದಿಂದ ಹಾರಿದ ಪತಿ

Pinterest LinkedIn Tumblr

ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಜಾರಿ ಪ್ರಪಾತಕ್ಕೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ಬೆಟ್ಟದಿಂದ ಕೆಳಗೆ ಹಾರಿದ ಘಟನೆ ಜಿಲ್ಲೆಯ ನಂದಿಬೆಟ್ಟದಲ್ಲಿ ನಡೆದಿದೆ.

ನಂದಿಬೆಟ್ಟಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹಾಸನ ಮೂಲದ ಕುಮಾರ್(50) ಮತ್ತು ಪುನೀತಾ(45) ದಂಪತಿ ಪ್ರಪಾತಕ್ಕೆ ಬಿದ್ದವರು. ಪತ್ನಿ ಪುನೀತಾ ಸುಳಿವು ದೊರೆತಿಲ್ಲ. ಅವರು ಮೃತಪಟ್ಟಿರುವ ಸಾಧ್ಯತೆಗಳಿದ್ದು, ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

ಬೆಟ್ಟದಿಂದ ಹಾರಿದ್ದರಿಂದ ಪತಿ ಕುಮಾರ್ ಅವರಿಗೆ ಕೆಲವು ಕಡೆ ತೀವ್ರವಾಗಿ ತರಚಿದ ಗಾಯಗಳಾಗಿದ್ದು, ಅವರನ್ನು ಪಾರು ಮಾಡಲಾಗಿದೆ. ಈ ಕುರಿತು ನಂದಿಗಿರಿಧಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.