ರಾಷ್ಟ್ರೀಯ

ಮೋದಿಯ ಉಜ್ವಲಾ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಭಾರಿ ಮೆಚ್ಚುಗೆ

Pinterest LinkedIn Tumblr

ನವದೆಹಲಿ: ಬಡ ಕುಟುಂಬದ ಮಹಿಳೆಯರು ಕಟ್ಟಿಗೆ ಬಳಸುವುದನ್ನು ತಡೆಗಟ್ಟಲು ಅನಿಲ ಸಿಲೆಂಡರ್ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಉಜ್ವಲಾ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಡಬ್ಲ್ಯೂ ಹೆಚ್ ಒ ವಾಯುಮಾಲಿನ್ಯದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ವಾಯುಮಾಲಿನ್ಯ ತಡೆಗಟ್ಟಲು ಕೈಗೊಂಡ ವಿವಿಧ ರೀತಿಯ ಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಜ್ವಲಾ ಯೋಜನೆಯನ್ನೂ ಉಲ್ಲೇಖಿಸಿದೆ. “ವಾಯುಮಾಲಿನ್ಯ ತಡೆಗಟ್ಟಲು ರಾಷ್ಟ್ರಗಳು ಕ್ರಮ ಕೈಗೊಳ್ಳುತ್ತಿವೆ. ಉದಾಹರಣೆಗೆ ಭಾರತದ ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ 37 ಮಿಲಿಯನ್ ಮಹಿಳೆಯರಿಗೆ ಉಚಿತವಾಗಿ ಎಲ್ ಪಿಜಿ ಸಂಪರ್ಕ ದೊರೆತಿದ್ದು, ಮನೆಯಲ್ಲಿ ಮಾಲಿನ್ಯವಾಗದೇ ಸ್ವಚ್ಛ ಇಂಧನವನ್ನು ಬಳಕೆ ಮಾಡಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ಬಡ ಕುಟುಂಬಗಳ ಮಹಿಳೆಯರು ಅಡುಗೆಗಾಗಿ ಬಳಸುತ್ತಿದ್ದ ಕಟ್ಟಿಯಿಂದ ಹೊರಬರುತ್ತಿದ್ದ ಹೊಗೆಯಿಂದಾಗಿ ಸಂಕಷ್ಟ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇ.1 2016 ರಂದು ಉತ್ತರ ಪ್ರದೇಶದಲ್ಲಿ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತವಾಗಿ ಎಲ್ ಪಿಜಿ ಸಂಪರ್ಕ ನೀಡಲು ಉಜ್ವಲಾ ಯೋಜನೆಯನ್ನು ಜಾರಿಗೊಳಿಸಿದ್ದರು. 2019 ರ ವೇಳೆಗೆ 5 ಕೋಟಿ ಉಚಿತ ಎಲ್ ಪಿಜಿ ಸಂಪರ್ಕ ನೀಡುವುದು ಯೋಜನೆಯ ಉದ್ದೇಶವಾಗಿದೆ.

Comments are closed.