ಕರಾವಳಿ

ಬಾವಿ ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿತ: ಓರ್ವ ಸಾವು, ಇನ್ನೊಬ್ಬರ ರಕ್ಷಣೆ

Pinterest LinkedIn Tumblr

ಕುಂದಾಪುರ : ಬಾವಿ ಕೆಲಸ ಮಡುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದು ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರ ರಕ್ಷಿಸಿದ ಘಟನೆ ಕುಂದಾಪುರ ತಾಲೂಕು ಆಜ್ರಿ ಗ್ರಾಮ ಜೋಗಿಬೆಟ್ಟು ಎಂಬಲ್ಲಿ ಮಂಗಳವಾರ ನಡೆದಿದೆ.

ಕರ್ಕುಂಜೆ ಗ್ರಾಮ ನೇರಳಕಟ್ಟೆ ನಿವಾಸಿ ವಿಶ್ವನಾಥ (24) ಮೃತಪಟ್ಟವರು. ರಾಜೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾವಿ ಕೆಲಸ ಗುತ್ತೆಗೆ ಪಡೆದ ಶಿವರಾಮ ಮೇಸ್ತ್ರಿ ಹಾಗೂ ಬಾವಿ ಮಾಲೀಕ ಮಂಜುನಾಥ ಬಾಯರಿ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಶ್ವನಾಥ ತಂದೆಗೆ ಮೂವರು ಮಕ್ಕಳಿದ್ದು, ಇಬ್ಬರು ವಿಕಲಾಂಗಚೇತನರಾಗಿದ್ದು, ತಾಯಿ ಹಾಗೂ ಒಡ ಹುಟ್ಟುದವರಿಗೆ ವಿಶ್ವನಾಥ ದಿಕ್ಕಾಗಿದ್ದರು. ವಿಶ್ವಾನಾಥ ನಿಧನಿದಿಂದ ಕುಟುಂಬ ದಿಕ್ಕು ತಪ್ಪಿದ್ದು, ಶಂಕರನಾರಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 ಲಕ್ಷ ಪರಿಹಾರಕ್ಕೆ ಒತ್ತಾಯ :
ಆಜ್ರಿ ಬಾವಿ ದರಂತದಲ್ಲಿ ಮೃತಪಟ್ಟ ವಿಶ್ವಾನಾಥ ಕುಟುಂಬಕಕೆ ೨೦ ಲಕ್ಷ ಪರಿಹಾರ ನೀಡಬೇಕೆಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿ‌ಐಟಿಯು) ಆಗ್ರಹಸಿದೆ. ಮೃತ ಯುವಕನ ಕುಟುಂಬಕ್ಕೆ ಬಾವಿ ಮಾಲೀಕರು, ಗುತ್ತಿಗೆದಾರ ಹಾಗೂ ಸರ್ಕಾರ ಪರಿಹಾರ ನೀಡಬೇಕು. ಯಾವ ಸುರಕ್ಷತಾ ಮುಂಜಾಗರೂಕತೆ ವಹಿಸದ ಬಾವಿ ಮಾಲೀಕ ಹಾಗೂ ಗುತ್ತಿಗೆದಾರರಿಗೆ ಕಠಿಣ ಶಿಕ್ಷೆ ನೀಡುವಂತೆ ಸಂಘ ಒತ್ತಾಯಿಸಿದೆ.

Comments are closed.