ಮಡಿಕೇರಿ: ಜನಾರ್ದನ ರೆಡ್ಡಿ ಅವರು ಪ್ರಚಾರದಲ್ಲಿ ಭಾಗವಹಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಸೂಚಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿಕೆ ಕೊಟ್ಟ ಬೆನ್ನಲ್ಲೇ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಮುಖಂಡ ಅಲ್ಲ. ಬಿಜೆಪಿಯ ಯಾವುದೇ ವೇದಿಕೆಯನ್ನು ಜನಾರ್ದನ ರೆಡ್ಡಿ ಏರಲ್ಲ. ಒಂದು ವೇಳೆ ರೆಡ್ಡಿ ಬಿಜೆಪಿ ವೇದಿಕೆ ಏರಿದ್ರೆ ವಾಟ್ಸಪ್ ಮಾಡಿ ತಿಳಿಸಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಇವರೆಲ್ಲ ಜನಾರ್ದನ ರೆಡ್ಡಿಯಿಂದಾಗಿ ನಾಯಕರಾದವರಲ್ಲ.ಜನಾರ್ದನ ರೆಡ್ಡಿ ನಮ್ಮ ಸ್ಟಾರ್ ಪ್ರಚಾರಕ ಅಲ್ಲ. ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಶ್ರೀರಾಮುಲು ಜೊತೆ ಮಾತ್ರ ರೆಡ್ಡಿ ವೇದಿಕೆ ಹಂಚಿಕೊಂಡಿದ್ದಾರೆ. ಉಳಿದ ನಾಯಕರ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರಾ? ಶ್ರೀರಾಮುಲು, ಸೋಮಶೇಖರ್ ರೆಡ್ಡಿಯನ್ನು ಸಿಎಂ ಸಿದ್ದರಾಮಯ್ಯ ಅವಮಾನಿಸೋದ್ಯಾಕೆ ಎಂದು ರಾವ್ ಪ್ರಶ್ನಿಸಿದ್ದಾರೆ.
-ಉದಯವಾಣಿ
Comments are closed.