ಬಹರೈನ್ ;ಇಲ್ಲಿನ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ “ಬಂಟ್ಸ್ ಬಹರೈನ್” ಇದೇ ಮೇ ತಿಂಗಳ ನಾಲ್ಕನೇ ತಾರೀಖಿನ ಶುಕ್ರವಾರದಂದು ತನ್ನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಸೀಫ್ ಪರಿಸರದಲ್ಲಿರುವ ಪಂಚತಾರಾ ಹೋಟೆಲ್ ಆದ ರಾಮೀ ಗ್ರ್ಯಾಂಡ್ ನಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಕಾರ್ಯಕ್ರಮವು ಬೆಳಗ್ಗೆ 10:30 ಘಂಟೆಗೆ ಸರಿಯಾಗಿ ಆರಂಭವಾಗಲಿರುವುದು .ಈ ಸಂದರ್ಭದಲ್ಲಿ ದ್ವೀಪದ ಬಂಟ ಸಮುದಾಯದ ಪ್ರತಿಭಾವಂತ ಕಲಾವಿದರು ವೈವಿಧ್ಯಮಯವಾದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದು ಕಾರ್ಯಕ್ರಮಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ.
ಮುಂಬಯಿಯ ಖ್ಯಾತ ಉದ್ಯಮಿ ,ಸಮಾಜ ಸೇವಕ ,ಬಂಟ ಸಮುದಾಯದ ಸಾಧಕ ಶ್ರೀ ಕುಸುಮೋದರ್ .ಡಿ .ಶೆಟ್ಟಿಯವರು ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಲಿದ್ದರೆ,ಮುಂಬೈ ಬಂಟ ಸಮುದಾಯದ ಖ್ಯಾತ ಕಲಾ ಸಂಘಟಕ ,ರಂಗಕರ್ಮಿ ,ತುಳು ಕಲೆ,ಸಂಸ್ಕ್ರತಿಗೆ ಅನನ್ಯ ಕೊಡುಗೆ ನೀಡಿರುವ ಕರ್ನೂರು ಮೋಹನ್ ರೈ ಯವರು ಗೌರವ ಅತಿಥಿಗಳಾಗಿ ಸಭೆಯನ್ನು ಅಲಂಕರಿಸಲಿರುವರು .
“ರಂಗಿತರಂಗ ” ಹಾಗು “ರಾಜರಥ “ಕನ್ನಡ ಸಿನಿಮಾಗಳ ಮುಖೇನ ಕನ್ನಡ ಚಲನಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿರುವ ನಟ ನಿರೂಪ್ ಭಂಡಾರಿಯವರ ತಾರಾಕರ್ಷಣೆಯ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದೆ .
ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿ “ರಾಮೀ ಗ್ರ್ಯಾಂಡ್ ಹೋಟೆಲ್ ಅಂಡ್ ಸ್ಪಾ ” ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದರೆ ಉಪಪ್ರಾಯೋಜಕರುಗಳಾಗಿ ಅವ್ಮಾ ಮಿಡ್ಲ್ ಈಸ್ಟ್ (auma) ಸಂಸ್ಥೆಯ ಆಡಳಿತ ನಿರ್ದೇಶಕ ನವೀನ ಶೆಟ್ಟಿ,ಪ್ರುಡೆನ್ಷಿಯಲ್ ಮ್ಯಾನೇಜ್ಮೆಂಟ್ ನ ಆಡಳಿತ ನಿರ್ದೇಶಕ ಸುಧಾಕರ್ ಶೆಟ್ಟಿ ಹಾಗು ಬಿ . ಎಮ್ .ಎಮ್ .ಐ ಸಂಸ್ಥೆಯ ಮಾರಾಟ ಪ್ರಬಂಧಕರಾದ ಶ್ರೀ ರಾಜೀವ್ ಮೆನನ್ ರವರು ಸಹಕರಿಸಲಿದ್ದಾರೆ .
ಈ ಕಾರ್ಯಕ್ರಮಕ್ಕೆ ದ್ವೀಪದ ಅನಿವಾಸಿ ಬಂಟ ಸಮುದಾಯದವರಿಗೆ ಪ್ರವೇಶ ಮುಕ್ತವಾಗಿದ್ದು,ಬಂಟ ಸಮುದಾಯದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಡಬೇಕೆಂದು ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ನಾಗೇಶ್ ಶೆಟ್ಟಿ ಶೆಟ್ಟಿ ಯವರು ಈ ಮೂಲಕ ಆಹ್ವಾನ ನೀಡಿದ್ದಾರೆ.ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಾಗೇಶ್ ಶೆಟ್ಟಿಯವರನ್ನು ಸಂಚಾರಿ ದೂರವಾಣಿ ಸಂಖ್ಯೆ 33622442 ಮುಖೇನ ಸಂಪರ್ಕಿಸಬಹುದು.
ಚಿತ್ರ-ವರದಿ-ಕಮಲಾಕ್ಷ ಅಮೀನ್.
Comments are closed.