ರಾಷ್ಟ್ರೀಯ

ರೈಲಿನಲ್ಲಿನ ಶೌಚಾಲಯದ ನೀರನ್ನೇ ಟೀ, ಕಾಫಿಗೆ ಸೇರಿಸಿ ಮಾರಾಟ ! ಗುತ್ತಿಗೆದಾರನಿಗೆ ಬಿತ್ತು ₹1 ಲಕ್ಷ ದಂಡ

Pinterest LinkedIn Tumblr

ಸಿಕಂದರಾಬಾದ್: ಕಳೆದ ಡಿಸೆಂಬರ್‌ನಲ್ಲಿ ಚೆನ್ನೈ ಸೆಂಟ್ರಲ್ –ಹೈದರಾಬಾದ್ ಚಾರ್ಮೀನಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿನ ಶೌಚಾಲಯದ ನೀರನ್ನು ಟೀ, ಕಾಫಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಗುತ್ತಿಗೆದಾರನಿಗೆ 1 ಲಕ್ಷ ದಂಡ ವಿಧಿಸಲಾಗಿದೆ.

ಗುತ್ತಿಗೆದಾರ ಪಿ. ಶಿವಪ್ರಸಾದ್ ಟೀ ಕಾಫಿಯ ಕ್ಯಾನ್ ಹಿಡಿದು ಶೌಚಾಲಯದಿಂದ ಹೊರಬರುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶಿವಪ್ರಸಾದ್ ಸಿಕಂದರಾಬಾದ್ –ಕಾಜಿಪೇಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈ ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು.

Comments are closed.