ರಾಷ್ಟ್ರೀಯ

ಉದ್ಯಮಿಗೆ ಓಎಲ್‌ಎಕ್ಸ್‌ ಹೆಸರಿನಲ್ಲಿ 15 ಲಕ್ಷ ರೂ. ವಂಚನೆ

Pinterest LinkedIn Tumblr


ಫರೀದಾಬಾದ್: ಗುಜರಾತ್ ಮೂಲದ ಉದ್ಯಮಿಯೋರ್ವರಿಗೆ ಓಎಲ್ಎಕ್ಸ್ ಹೆಸರಿನಲ್ಲಿ ವಂಚಿಸಿ 15 ಲಕ್ಷ ರೂ. ದೋಚಲಾಗಿದೆ. ಪ್ಲಾಸ್ಟಿಕ್ ಸರಕು ಲಭ್ಯವಿರುವುದಾಗಿ ಹೇಳಿದ ದುಷ್ಕರ್ಮಿಗಳು ಉದ್ಯಮಿ ರಾಜ್‌ಕೋಟ್‌ನ ಹಿಮಾಂಶು ಎಂಬವರನ್ನು ಕರೆಸಿಕೊಂಡಿದ್ದರು. ನಂತರ ಗನ್ ತೋರಿಸಿ ಬೆದರಿಕೆ ಒಡ್ಡಿ ಅವರಿಂದ 15 ಲಕ್ಷ ರೂ. ದೋಚಲಾಗಿದೆ. ಈ ಸಂಬಂಧ ಬಾಹೀನ್ ಪೊಲೀಸ್‌ ಠಾಣೆಯಲ್ಲಿ ರೂಪ್‌ನಗರ್‌ ಗ್ರಾಮದ ಇಮ್ರಾನ್ ಅಲಿಯಾಸ್‌ ಡೇಂಜರ್ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದೇ ಮಾದರಿಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕಳೆದ ಏಪ್ರಿಲ್‌ನಲ್ಲಿ ಇಬ್ಬರು ಉದ್ಯಮಿಗಳಿಂದ ತಲಾ 15 ಲಕ್ಷ ರೂ. ದೋಚಲಾಗಿತ್ತು.
ಹಿಮಾಂಶು ಸಹೋದರ ಓಎಲ್‌ಎಕ್ಸ್‌ ಮೂಲಕ ವಂಚನೆ ಮತ್ತು ದರೋಡೆ ಕುರಿತು ದೂರು ದಾಖಲಿಸಿದ್ದಾರೆ.

ಗುರ್ಗಾಂವ್‌ಗೆ ಬರುವಂತೆ ಹಿಮಾಂಶು ಅವರಿಗೆ ಹೇಳಿ, ನಂತರ ಪ್ಲಾಸ್ಟಿಕ್ ಸರಕು ತೋರಿಸಲಾಗಿತ್ತು. ನಂತರ ಡೀಲ್ ಕುದುರಿಸಲು ರೂಪ್‌ನಗರ್‌ ನತಾಲಿ ಥಾಣಾ ಬಾಹಿನ್‌ಗೆ ಕಾರಿನಲ್ಲಿ ಕರೆದೊಯ್ದು 15 ಲಕ್ಷ ರೂ. ಪಡೆದುಕೊಂಡು ಪರಾರಿಯಾಗಿದ್ದಾರೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಓಎಲ್‌ಎಕ್ಸ್ ಮೂಲಕ ಆರೋಪಿಗಳ ಮೊಬೈಲ್ ನಂಬರ್‌ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಕೆಲವು ಶಂಕಿತರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಆನ್‌ಲೈನ್ ಮಾರ್ಕೆಂಟಿಂಗ್ ಮೂಲಕ ವಂಚಿಸುವ ಪ್ರಕರಣ ಕುರಿತು ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಇದೇ ಮಾದರಿಯ 71 ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.