ಅಂತರಾಷ್ಟ್ರೀಯ

ಜಾಗರೂಕನಾಗಿ ಕದಿಯಲು ಹೋಗಿ ಬೆರಳಚ್ಚು ಕೊಟ್ಟ

Pinterest LinkedIn Tumblr


ಮಕ್ಕಳು ಆಟಿಕೆ ಮಣ್ಣಿನಲ್ಲಿ ಆಡುವುದನ್ನು ನೋಡಿದ್ದೇವೆ. ಅಮೆರಿಕದ ಕಳ್ಳನೊಬ್ಬನಿಗೆ ಆ ಆಟಿಕೆ ಮಣ್ಣೇ ಮುಳುವಾಗಿದೆ. ತಾನು ಆಟಿಕೆ ಕ್ಲೇಯಿಂದ ಪೊಲೀಸರ ಅತಿಥಿಯಾಗುತ್ತೇನೆ ಎಂದು ಬಹುಶಃ ಆ ಕಳ್ಳ ಎಂದೂ ಊಹಿಸಿರಲಿಕ್ಕಿಲ್ಲ.

ನಡೆದಿದ್ದಿಷ್ಟು, ಅಂಗಡಿಯೊಂದಕ್ಕೆ ಕನ್ನ ಹಾಕಲು ಬಂದ ಕಳ್ಳನೊಬ್ಬ ಕಳ್ಳತನ ನಿಗ್ರಹ ಅಲರಾಂಗಳನ್ನು ಆಟಿಕೆ ಕ್ಲೇಯಿಂದ ಮುಚ್ಚಲು ಪ್ರಯತ್ನಿಸಿದ. ಆದರೂ ಅಲರಾಂ ಸದ್ದು ಮಾಡಿತು. ಆತ ಹೆದರಿ ಅಂಗಡಿಯಿಂದ ಪೇರಿ ಕಿತ್ತ. ಆತನ ದುರದೃಷ್ಟವೆಂಬಂತೆ, ಆಟಿಕೆ ಮಣ್ಣಿನ ಮೇಲೆ ಆತನ ಬೆರಳಚ್ಚುಗಳು ಮೂಡಿದ್ದವು. ಕಳೆದ ಡಿ.11ರಂದೇ ಈ ಘಟನೆ ನಡೆದಿದೆ. ಆದರೆ ಬುಧವಾರವಷ್ಟೇ ಪೊಲೀಸರು ಕಳ್ಳನನ್ನು ಪತ್ತೆಮಾಡಿ ಬಂಧಿಸಿದ್ದಾರೆ.

-Udayavani

Comments are closed.