ಕರಾವಳಿ

ಯಡಿಯೂರಪ್ಪ ಸಿಎಂ ಆಗೋದೇ ಇಲ್ಲ: ಉಡುಪಿಯಲ್ಲಿ ಡಾ. ವೀರಪ್ಪ ಮೊಯ್ಲಿ

Pinterest LinkedIn Tumblr

ಉಡುಪಿ: ಮನೆಮನೆಗೆ ನೀರು, ಹೊಲ ಹೊಲಕ್ಕೆ ನೀರು- ಇದು ಈ ಬಾರಿಯ ಪ್ರಣಾಳಿಕೆಯಲ್ಲಿ ಅಳವಡಿಸುವ ಕೆಲಸಕಾರ್ಯಗಳನ್ನು ಮಾಡಿದ್ದೇವೆ. ಪಶ್ಚಿಮವಾಹಿನಿ ಯೋಜನೆ ಯಶಸ್ವಿಯಾಗಿದೆ, ಡ್ಯಾಂ ನಲ್ಲಿ ನೀರು ಶೇಖರಣೆಯಾಗಿದೆ ಎಂದು ಉಡುಪಿಯಲ್ಲಿ ಡಾ. ಎಂ ವೀರಪ್ಪ ಮೊಯ್ಲಿ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು.

30 ಜಿಲ್ಲೆಗೆ ವಿಭಿನ್ನ ಪ್ರಣಾಳಿಕೆ ಕೊಟ್ಟಿದ್ದೇವೆ. ಮಟ್ಟುಗುಳ್ಳ, ಮಲ್ಲಿಗೆ ಬೆಳೆಗೆ ವಿಶೇಷ ಬೆಂಬಲ ಕೊಡಲಾಗಿದೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತೇವೆ. ಸ್ಮಾರ್ಟ್ ಫೋನ್- ಲ್ಯಾಪ್‌ಟಾಪ್ ಉಚಿತವಾಗಿ ಹಂಚುತ್ತೇವೆ. ರಾಷ್ಟ್ರದ ಪ್ರಗತಿ ಕುಸಿದಿದೆ ರಾಜ್ಯದ ಪ್ರಗತಿ ಏರಿದೆ. 1 ಕೋಟಿ ಉದ್ಯೋಗ, 50 ಲಕ್ಷ ಮನೆ ಕಟ್ಟುತ್ತೇವೆ ಎಂದರು.

ಬಿಜೆಪಿ ಚುನಾವಣಾ ಪ್ರಣಾಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ರೈತರ ಸಾಲ ಮನ್ನಾ ಮಾಡ್ತಾರಂತೆ. ಯಡಿಯೂರಪ್ಪ ಸಿಎಂ ಆಗೋದೇ ಇಲ್ಲ. ರಾಷ್ಟ್ರದ ಕಾವಲುಗಾರ ವಿದೇಶವ ಪ್ರಯಾಣ ಮಾಡುತ್ತಿದ್ದಾರೆ. ದೇಶದ ಬ್ಯಾಂಕುಗಳು ಲೂಟಿಯಾಗುತ್ತಿದೆ. ನಾವು ಖರ್ಗೆಗೆ ಅತ್ಯುತ್ತಮ ಸ್ಥಾನ ಕೊಟ್ಟಿದ್ದೇವೆ
ಬಿಜೆಪಿಯಲ್ಲಿ ಎಷ್ಟು ದಲಿತ ಸಿಎಂ ಇದ್ದಾರೆ? ಎನ್ ಡಿ ಎ ಯಲ್ಲಿ ಎಷ್ಟು ದಲಿತ ಮಂತ್ರಿ ಇದ್ದಾರೆ? ಎಂದು ಪ್ರಶ್ನಿಸಿದರು.

ಬಿಜೆಪಿ ದೇಶಾದ್ಯಂತ ಸೋಲುತ್ತಿದ್ದೆ. ಕರ್ನಾಟಕ, ರಾಜಸ್ಥಾನ, ಛತ್ತೀಸ್ ಘಡದಲ್ಲಿ ಬಿಜೆಪಿ ಇತೀಶ್ರಿ ಆಗುತ್ತದೆ. ದೇಶದಲ್ಲಿ ದಲಿತ ವಿರೋಧಿ ವಾತಾವರಣ ಇದೆ
ಮಹಿಳೆಯರಿಗೂ ದೇಶದಲ್ಲಿ ರಕ್ಷಣೆಯಿಲ್ಲ. ಬಿಜೆಪಿ ನಾಯಕರೇ ಅತ್ಯಾಚಾರದಲ್ಲಿ ತೊಡಗಿದ್ದಾರೆ. ರೆಡ್ಡಿ ಬ್ರದರ್ಸ್ ಗೂ ಟಿಕೆಟ್ ಕೊಟ್ಟಿದ್ದಾರೆ, ರೆಡ್ಡಿ ಟೀಂ ನ ಕಿಂಗ್ ಪಿನ್ ರಾಮುಲು ಆಗಿದ್ದು ರಾಮುಲುಗೆ ಟಿಕೆಟ್ ಕೊಟ್ಟಿದ್ದಾರೆ. ಆಂತರಿಕ ವಿಪ್ಲವ ಬಿಜೆಪಿಯಲ್ಲೇ ಜಾಸ್ತಿಯಿದೆ ಎಂದರು.

Comments are closed.