ನಾವು ಪ್ರತಿನಿತ್ಯ ಅಷ್ಟೊ ಇಷ್ಟೋ ದೂರ ನಡೆದಾಡುತ್ತಿರುತ್ತೇವೆ. ಆ ಭಾರವೆಲ್ಲಾ ನಮ್ಮ ಪಾದಗಳ ಮೇಲೆ ಬೀಳುತ್ತದೆ. ಒಂದು ದಿನವೆಲ್ಲಾ ನಡೆದಾಡಿದರೆ ನೂರು ಟನ್‌ಗಳ ಭಾರ ನಮ್ಮ ಪಾದಗಳ ಮೇಲೆ ಬಿದ್ದಂತೆ ಇರುತ್ತದೆ. ಹಾಗಿದ್ದರೆ ಇಷ್ಟೆಲ್ಲಾ ಭಾರ ಹೊರುತ್ತಿರುವ ಅವಕ್ಕೆ ವಿಶ್ರಾಂತಿ ಕೊಟ್ಟು, ಅವುಗಳ ರಕ್ತಸಂಚಲನೆ ಸೂಕ್ತವಾಗಿ ಆಗುವಂತೆ ನೋಡಬೇಕು. ಹಾಗಾಗಿ ಚೀನಿಯರು ಮತ್ತು ಈಜಿಪ್ಟಿಯನ್ನರು ಹೆಚ್ಚಾಗಿ ನಡೆದಾಡಿದ ಪಾದಗಳಿಗೆ ಜೀವ ಪ್ರಕ್ರಿಯೆ ಸರಿಯಾಗಿ ನಡೆಯಬೇಕಾರೆ ವಿಶ್ರಾಂತಿ ನೀಡುವುದು ಒಳ್ಳೆಯದೆಂದು ಹೇಳಲಾಗಿದೆ.
ಪ್ರತಿನಿತ್ಯ ಕ್ರಿಯಾಶೀಲವಾಗಿ ಇಡುವ ಸಲುವಾಗಿ ಈ ಟ್ರಿಕ್ ಫಾಲೋ ಆಗಿ.
1. ಕೈಯ ಹೆಬ್ಬರಳಿನಿಂದ:
ಅಂಗಾಲಿನ ಮೇಲೆ ಹೆಬ್ಬೆರಳನ್ನು ಮೇಲೆ ಕೆಳಗೆ ಒತ್ತುತ್ತಾ ಮಸಾಜ್ ಮಾಡಬೇಕು.
2. ಕಾಲಿನ ಬೆರಳುಗಳ ಮೇಲೆ ಮಸಾಜ್:
ಬಹಳ ದೂರ ನಡೆದಾಗ ಬಹಳಷ್ಟು ಮಂದಿಗೆ ಕಾಲಿನ ಪಾದಗಳು ಸೆಳೆಯುವಂತಹ ಸಮಸ್ಯೆಗಳು ಬರುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಕೈ ಬೆರಳಿನ ಮೂಲಕ ಕಾಲಿನ ಬೆರಳುಗಳನ್ನು ನಯವಾಗಿ ಮೇಲೆ ಕೆಳಗ ಮಸಾಜ್ ಮಾಡಬೇಕು.
3. ಕಾಲಿನ ಮೇಲಿನ ಭಾಗವನ್ನು ನಯವಾಗಿ ಒತ್ತುತ್ತಾ ನಿಧಾನಕ್ಕೆ ತಿರುಗಿಸಬೇಕು.
ನಮ್ಮ ನಡಿಗೆ ಹೆಚ್ಚಿನ ಭಾಗ ಕಾಲಿನ ಮುಂದಿನ ಭಾಗದ ಮೇಲೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ಆ ಭಾಗವನ್ನು ಕಾಲಿನ ಹಿಮ್ಮಡಿಯನ್ನು ಅತ್ತಿತ್ತ ತಿರುಗಿಸುತ್ತಾ ಹೆಬ್ಬೆರಳಿನಿಂದ ಒತ್ತುತ್ತಿರಬೇಕು.
4. ಕಾಲಿನ ಮಧ್ಯ ಭಾಗದಲ್ಲಿ:
ಪಾದದ ಕೆಳಗಿನ ಮಧ್ಯಭಾಗ ಇನ್ನೂ ನಯವಾಗಿರುವುದರಿಂದ ನೋವು ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಭಾಗದಲ್ಲಿ ಕೆಳಗಿನಿಂದ ಮೇಲಕ್ಕೆ ಹೆಬ್ಬೆರಳಿನಿಂದ ಗಟ್ಟಿಯಾ ಒತ್ತಿ ಹಿಡಿದು ಮಾಡುತ್ತಿರಬೇಕು. ಈ ವಿಧವಾಗಿ ಮಾಡುವುದು ಪಾದಗಳಲ್ಲಿ ರಕ್ತಸಂಚಲನೆ ಚೆನ್ನಾಗಿ ಆಗುತ್ತದೆ. ಒತ್ತಡ ಕಡಿಮೆಯಾಗುತ್ತದೆ.
ಪಾದಗಳನ್ನು ಮಸಾಜ್ ಮಾಡುವುದರಿಂದ ದೇಹದ ಯಾವ ಯಾವ ಭಾಗಗಳಲ್ಲಿ ಪ್ರಯೋಜನವಾಗುತ್ತದೆ:
ಕಣ್ಣು, ಸೈನಸ್, ಕಿವಿ, ಭುಜದ ನೋವು, ಪಿತ್ತಕೋಶ, ಲಿವರ್, ದೊಡ್ಡಕರುಳು, ಕಿಡ್ನಿ, ಅಪೆಂಡಿಕ್ಸ್, ಮೂಗು, ಬೆನ್ನಿನ ಭಾಗ, ಮಿದುಳು, ಹೃದಯ, ಗುಲ್ಮ, ಮೊಣಕಾಲು, ಪೃಷ್ಠ, ಥೈರಾಯಿಡ್, ಉದರಭಾಗ, ಮೂತ್ರನಾಳ, ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುವ ಗ್ರಂಥಿ ಸಮಸ್ಯೆಗಳು ಪಾದಗಳನ್ನು ಮಸಾಜ್ ಮಾಡುವುದರಿಂದ ದೂರವಾಗುತ್ತವೆ.
Comments are closed.