ಕ್ರೀಡೆ

ಕೋಟಿ ಗಟ್ಟಲೆ ಕೊಟ್ಟು ಖರೀದಿ ಮಾಡಿದ್ದರೂ ಆರ್ ಸಿಬಿ ಪರ ಒಂದೇ ಒಂದು ಪಂದ್ಯ ಆಡದ ಈ ನಾಲ್ಕು ಆಟಗಾರರು ಯಾರು ಗೊತ್ತೇ…?

Pinterest LinkedIn Tumblr

ಬೆಂಗಳೂರು: ರಾಯಲ್ ಚಾಲೆಂಜರ್ಸ್ ತಂಡದ ಪರ ಹರಾಜಾದರೂ ನಾಲ್ಕು ಮಂದಿ ಆಟಗಾರರು ಈ ವರೆಗೂ ತಂಡದ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.

ಬಿಸಿಸಿಐನ ಮಿಲಿಯನ್ ಡಾಲರ್ ಬೇಬಿ ಐಪಿಎಲ್ 2018 ಟೂರ್ನಿ ಇದೀಗ ನಿರ್ಣಾಯಕ ಹಂತ ತಲಪುತ್ತಿದ್ದು, ಸೆಮಿ ಫೈನಲ್ ಗೇರಲು ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡ ಹರಸಾಹಸ ಪಡುತ್ತಿದೆ. ಈ ಹೊತ್ತಿನಲ್ಲಿ ಆರ್ ಸಿಬಿ ಕುರಿತ ಕೆಲ ಸ್ವಾರಸ್ಯಕರ ಸುದ್ದಿ ಹೊರಬಿದ್ದಿದ್ದು, ಆರ್ ಸಿಬಿ ಕೋಟಿ ಗಟ್ಟಲೆ ಖರ್ಚು ಮಾಡಿ ಖರೀದಿ ಮಾಡಿದ್ದ ನಾಲ್ಕು ಪ್ರಮುಖ ಆಟಗಾರರು ಈ ವರೆಗೂ ತಂಡದ ಪರ ಕಣಕ್ಕಿಳಿದೇ ಇಲ್ಲ.

ಅಚ್ಚರಿಯಾದರೂ ಇದು ಸತ್ಯ.. ತಂಡದ ಪರ ಹರಾಜಾಗಿದ್ದ ಪ್ರಮುಖ ನಾಲ್ಕು ಮಂದಿ ಆಟಗಾರರು ಈ ವರೆಗೂ ಕಣಕ್ಕೆ ಇಳಿದೇ ಇಲ್ಲ. ಇಷ್ಟು ಆ ನಾಲ್ಕು ಆಟಗಾರರು ಯಾರು ಗೊತ್ತಾ?

1.ನಥನ್ ಬ್ರಾಕೆನ್
ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ನಥನ್ ಬ್ರಾಕೆನ್ ಐಪಿಎಲ್ ನಲ್ಲಿ ಆರ್ ಸಿಬಿ ಪರ ಹರಾಜಾಗಿದ್ದ ವಿಚಾರ ಬಹುಶಃ ಯಾರಿಗೂ ತಿಳಿದಿಲ್ಲ ಎಂದೆನಿಸುತ್ತದೆ. 2000ದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಮುಖ ವೇಗಿಯಾಗಿದ್ದ ನಥನ್ ಬ್ರಾಕೆನ್ ರನ್ನು ಆರ್ ಸಿಬಿ ಫ್ರಾಂಚೈಸಿಗಳು ಮೊದಲ ಎರಡು ಸೀಸನ್ ಗಳಿಗೆ ಖರೀದಿ ಮಾಡಿದ್ದರು. ದುರಾದೃಷ್ಟವೆಂದರೆ ಆ ಎರಡೂ ಟೂರ್ನಿಗಳಲ್ಲೂ ಗಾಯದ ಸಮಸ್ಯೆಗೆ ತುತ್ತಾಗಿದ್ದ ಬ್ರಾಕೆನ್ ಒಂದೇ ಒಂದು ಪಂದ್ಯವನ್ನೂ ಆಡದೇ ಆಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲ, ಐಪಿಎಲ್ ಕರಿಯರ್ ಗೂ ಗುಡ್ ಬೈ ಹೇಳಿದ್ದರು.

2.ಸುಬ್ರಮಣಿಯನ್ ಬದ್ರಿನಾಥ್
ಬಹುಶಃ ಕ್ರಿಕೆಟ್ ಪ್ರಿಯರಿಗೆ ಸುಬ್ರಮಣಿಯನ್ ಬದ್ರಿನಾಥ್ ಎಂದರೆ ಗುರುತು ಹಿಡಿಯುವುದು ಕಷ್ಟವಾಗಬಹುದು. ಆದರೆ ಎಸ್ ಬದ್ರಿನಾಥ್ ಎಂದರೆ ಖಂಡಿತಾ ಗುರುತು ಹಿಡಿಯುತ್ತಾರೆ. ಭಾರತ ತಂಡದ ಪರ ಕೆಲ ಪಂದ್ಯಗಳಲ್ಲಿ ಬ್ಯಾಟ್ ಹಿಡಿದಿದ್ದ ಬದ್ರಿನಾಥ್ 2015ರ ಐಪಿಎಲ್ ಟೂರ್ನಿಯಲ್ಲಿ ಐಪಿಎಲ್ ಪರ ಹರಾಜಾಗಿದ್ದರು. ತಮ್ಮ ಅದ್ಬುತ ಪವರ್ ಫುಲ್ ಹಿಟ್ಟಿಂಗ್ ನಿಂದಾಗಿ ಆರ್ ಸಿಬಿ ಫ್ರಾಂಚೈಸಿಗಳ ಗಮನ ಸೆಳೆದಿದ್ದ ಬದ್ರಿನಾಥ್ ತಂಡಕ್ಕೆ ಆಯ್ಕೆಯಾಗಿದ್ದರಾದರೂ, ತಂಡದ ಪರ ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ. ಕಾರಣ ಆ ಸಂದರ್ಭದಲ್ಲಿ ಆರ್ ಸಿಬಿಗೆ ಕ್ರಿಸ್ ಗೇಲ್, ಎಬಿ ಡಿ ವಿಲ್ಲಿಯರ್ಸ್, ವಿರಾಟ್ ಕೊಹ್ಲಿ, ರೋಸ್ಸೇವ್ , ಮ್ಯಾಡಿನ್ಸನ್ ರಂತಹ ದೈತ ಬ್ಯಾಟ್ಸಮನ್ ಗಳು ತಮ್ಮ ಅದ್ಬುತ ಪ್ರದರ್ಶನ ತೋರುತ್ತಿದ್ದರು. ಹೀಗಾಗಿ ಬದ್ರಿನಾಥ್ ಆರ್ ಸಿಬಿ ಪರ ಒಂದೇ ಒಂದೂ ಪಂದ್ಯವನ್ನಾಡಲು ಸಾಧ್ಯವಾಗಲಿಲ್ಲ.

3.ಭುವನೇಶ್ವರ್ ಕುಮಾರ್
ಅಚ್ಚರಿಯಾದರೂ ಇದು ಸತ್ಯ…ಟೀಂ ಇಂಡಿಯಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಆರ್ ಸಿಬಿ ಪರ ಆಡಬೇಕಿತ್ತು. ಐಪಿಎಲ್ 2ನೇ ಸೀಸನ್ ನಲ್ಲಿ ಭುವಿ ಆರ್ ಸಿಬಿಗೆ ಆಯ್ಕೆಯಾಗಿದ್ದರು. 2009 ಮತ್ತು 2010 ಸಾಲಿನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಭುವಿ ಆರ್ ಸಿಬಿಯ ಪೆವಿಲಿಯನ್ ನಲ್ಲಿ ಕುಳಿತಿದ್ದರು. ಆ ಕಾಲಘಟ್ಟಕ್ಕೆ ಭುವಿ ಇನ್ನೂ ಉದಯೋನ್ಮಖ ಆಟಗಾರ ಮತ್ತು ಹೆಚ್ಚಾಗಿ ಸುದ್ದಿಗೂ ಗ್ರಾಸವಾಗಿರಲಿಲ್ಲ. ರಣಜಿ ಟ್ರೋಫಿಯಲ್ಲಿ ತೋರಿದ್ದ ಉತ್ತಮ ಪ್ರದರ್ಶನದ ಆಧಾರದ ಮೇರೆಗೆ ಭುವಿಯನ್ನು ಆರ್ ಸಿಬಿ ಫ್ರಾಂಚೈಸಿಗಳು ಖರೀದಿ ಮಾಡಿದ್ದರು. ಆದರೆ ಭುವಿಗೆ ಮಾತ್ರ ಆಡುವ 11 ಮಂದಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ದೊರೆಯಲಿಲ್ಲ. ಆ ಬಳಿಕ ಭುವಿ ತಮ್ಮ ಅದ್ಬುತ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. ಅಲ್ಲದೆ ಐಪಿಎಲ್ ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈಗಲೂ ಐಪಿಎಲ್ ನಲ್ಲಿ ಭುವಿ ಭಾರಿ ಬೇಡಿಕೆ ಇರುವ ಆಟಗಾರರಾಗಿದ್ದಾರೆ. ಆರ್ ಸಿಬಿ ಪಾಲಿಗಂತೂ ಇಂದಿಗೂ ಭುವಿ ಆಯ್ಕೆ ಮತ್ತು ಅವರನ್ನು ಆಡಿಸದೇ ಇರುವ ಕುರಿತು ಖಂಡಿತಾ ವಿಷಾಧವಿರುತ್ತದೆ.

4.ಸ್ಟೀವ್ ಸ್ಮಿತ್
ಇತ್ತೀಚೆಗೆ ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಆಸಿಸ್ ಕ್ರಿಕಟ್ ನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮಾಜಿ ನಾಯರ ಸ್ಟೀವ್ ಸ್ಮಿತ್ ಕೂಡ ಆರ್ ಸಿಬಿ ಪರ ಆಡಬೇಕಿತ್ತು. ಚೆಂಡು ವಿರೂಪಗೊಳಿಸುವುದಕ್ಕೂ ಮುನ್ನ ಸ್ಟೀವ್ ಸ್ಮಿತ್ ಕ್ರಿಕೆಟ್ ಲೋಕದ ಪ್ರಭಾವಿ ಆಟಗಾರರಲ್ಲಿ ಒಬ್ಬರಾಗಿದ್ದರು. 2010ರಲ್ಲಿ ಆರ್ ಸಿಬಿ ತಂಡ ಸ್ಟೀವ್ ಸ್ಮಿತ್ ರನ್ನು ದುಬಾರಿ ಮೊತ್ತಕ್ಕೆ ಅಲ್ಲದೇ ಇದ್ದರೂ ಮಧ್ಯಮ ಪ್ರಮಾಣದ ಮೊತ್ತಕ್ಕೆ ಖರೀದಿ ಮಾಡಿತ್ತು. ಆ ಕಾಲ ಘಟ್ಟಕ್ಕೆ ಸ್ಮಿತ್ ಆಸಿಸ್ ತಂಡದ ಯುವ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿದ್ದರು. ಅಷ್ಟೇನೂ ಜನಪ್ರಿಯರೂ ಕೂಡ ಆಗಿರಲಿಲ್ಲ. ಆದರೆ ಆ ಕಾಲಘಟ್ಟಕ್ಕೆ ಸ್ಮಿತ್ ಗಿಂತಲೂ ಬಲಿಷ್ಚ ಆಟಗಾರರು ಆರ್ ಸಿಬಿಯಲ್ಲಿ ಇದ್ದುದರಿಂದಲೋ ಏನೋ ಸ್ಮಿತ್ ಗೆ ಆರ್ ಸಿಬಿ ಪರ ಆಡುವ ಆವಕಾಶವೇ ಇಲ್ಲದಂತಾಗಿತ್ತು. ಆ ಬಳಿಕ ನಡೆದ ಸೀಸನ್ ಗಳಲ್ಲಿ ಸ್ಮಿತ್ ಪುಣೆ, ರಾಜಸ್ಥಾನ ತಂಡಗಳನ್ನು ಪ್ರತಿನಿಧಿಸಿದ್ದಾರೆ.

Comments are closed.