ರಾಷ್ಟ್ರೀಯ

ಸೊಳ್ಳೆಯಿಂದ ಕಚ್ಚಿಸಿಕೊಂಡರೂ ಬಿಜೆಪಿ ನಾಯಕರು ಹಳ್ಳಿಗಳಿಗೆ ತೆರಳುತ್ತಾರೆ: ಉ.ಪ್ರ. ಸಚಿವೆ

Pinterest LinkedIn Tumblr


ಲಖನೌ: ಸೊಳ್ಳೆಯಿಂದ ಕಚ್ಚಿಸಿಕೊಂಡರು ಲೆಕ್ಕಿಸದ ಬಿಜೆಪಿ ನಾಯಕರು ಗ್ರಾಮವಾಸ್ತವ್ಯ ಹಾಗೂ ಸಭೆ ನಡೆಸುವ ಮೂಲಕ ಜನಸಾಮಾನ್ಯರ ಕಷ್ಟ ಕಾರ್ಪಣ್ಯ ಆಲಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವೆ ಅನುಪಮಾ ಜೈಸ್ವಾಲ್ ಹೇಳಿದ್ದಾರೆ.

ಸಚಿವರ ಗ್ರಾಮವಾಸ್ಥವ್ಯ ಹಾಗೂ ದಲಿತರ ಮನೆಯಲ್ಲಿ ಆಹಾರ ಸೇವನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಗ್ರಾಮೀಣ ಪ್ರದೇಶಕ್ಕೆ ತೆರಳಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿರುವ ಏಕೈಕ ಸರಕಾರ ನಮ್ಮದು. ಇದು ಬಿಜೆಪಿ ನಾಯಕರಿಗೆ ರಾಜ್ಯದ ಜನರೆಡೆಗಿರುವ ಬದ್ಧತೆಯನ್ನು ತೋರಿಸುತ್ತದೆ, ಎಂದಿದ್ದಾರೆ.

ಗ್ರಾಮಸ್ಥರ ಸೇವೆ ಸಾಕಷ್ಟು ಸಂತಸ ಮೂಡಿಸುತ್ತದೆ. ಎರಡು ಗ್ರಾಮಗಳಿಗೆ ಭೇಟಿ ನೀಡಬೇಕೆಂದು ಪಕ್ಷದ ವರಿಷ್ಠರು ಸೂಚಿಸದ್ದರು. ಆದರೆ, ನಾನು ನಾಲ್ಕು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಇನ್ನೂ ಮೂರು ಗ್ರಾಮಗಳಿಗೆ ಭೇಟಿ ನೀಡಬೇಕೆಂದು ನಿರ್ಧರಿಸಿದ್ದೇನೆ. ಹೆಚ್ಚು ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಬೇಕೆಂದು ಹೇಳಿದರೆ, ಖುಷಿಯಿಂದ ಆ ಕೆಲಸ ಮಾಡುತ್ತೇನೆ, ಎಂದಿದ್ದಾರೆ ಜೈಸ್ವಾಲ್.

ಶಬರಿ (ದಲಿತೆ) ನೀಡಿದ ಭೋಜನವನ್ನು ಶ್ರೀರಾಮ ಸ್ವೀಕರಿಸಿ ಆಶೀರ್ವದಿಸಿದಂತೆ ಬಿಜೆಪಿ ನಾಯಕರು ಕೂಡ ದಲಿತರ ಮನೆಯಲ್ಲಿ ಆಹಾರ ಸೇವಿಸಿ ಅವರನ್ನು ಆಶೀರ್ವದಿಸಬೇಕೆಂದು ಉತ್ತರ ಪ್ರದೇಶ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಜೈಸ್ವಾಲ್ ಈ ಹೇಳಿಕೆ ನೀಡಿದ್ದಾರೆ.

Comments are closed.