ಕರ್ನಾಟಕ

ನೋಡ್ತಾ ಇರಿ, ಸಮೀಕ್ಷೆಗಳು ಉಲ್ಟಾ ಆಗಲಿವೆ!

Pinterest LinkedIn Tumblr

ರವಿ ಮಾಳೇನಹಳ್ಳಿ ಬೆಂಗಳೂರು

ನೋಡ್ತಾ ಇರಿ. ಎಲ್ಲ ಸಮೀಕ್ಷೆಗಳು ಉಲ್ಟಾ ಆಗಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬರುತ್ತದೆ. ರಾಜ್ಯಾದ್ಯಂತ ನಮ್ಮ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, ರಾಷ್ಟ್ರೀಯ ಪಕ್ಷ ಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಕಕ್ಕೆ ಸರಿಯಲಿವೆ ಎಂಬ ವಿಶ್ವಾಸವನ್ನು ಮಾಜಿ ಮುಖ್ಯ ಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ರಾಜಕೀಯ ಲೆಕ್ಕಾಚಾರಗಳು ಮತ್ತು ಜೆಡಿಎಸ್ ಪಕ್ಷದ ಸಾಧನೆ ವಿವರಿಸುತ್ತ ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ಪಕ್ಷ ಯಾವ ರೀತಿ ಸಾಧನೆ ಮಾಡಲಿದೆ?
ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ವಾತಾವರಣ ಚೆನ್ನಾಗಿದೆ. ಕೆಲವರು ಜೆಡಿಎಸ್ ಕೆಲವು ಜಿಲ್ಲೆಗಳಿಗೆ ಸೀಮಿತ ಎಂದು ಹೇಳುತ್ತಿದ್ದಾರೆ. ಆದರೆ, ರಾಜ್ಯದೆಲ್ಲೆಡೆ ನಮ್ಮ ಪಕ್ಷಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮೂಲಕ ನಾವು ದಾಖಲೆಯ ಸಾಧನೆ ಯನ್ನು ಮಾಡಲಿದ್ದೇವೆ. ಸಭೆಗಳಲ್ಲಿ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ನಾಯಕರುಗಳಿಗಿಂತ ಹೆಚ್ಚಿನ ಜನಾಕರ್ಷಣೆ ನಮ್ಮ ಕಡೆಗಾಗು ತ್ತಿದೆ.

ಜನ ಜೆಡಿಎಸ್‌ಗೆ ಏಕೆ ಮತ ಹಾಕಬೇಕು?
ಅಭಿವೃದ್ಧಿ ದೃಷ್ಟಿಯಿಂದ ಜನ ಜೆಡಿಎಸ್‌ಗೆ ಮತ ಹಾಕಬೇಕು. ಸಾಲ ಮನ್ನಾ ಸೇರಿದಂತೆ ರೈತರ ಹಲವಾರು ಸಮಸ್ಯೆಗಳಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರದ ಅವಧಿಯಲ್ಲಿ ಜನ ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಜೆಡಿಎಸ್ ಬೆಂಬಲ ನೀಡಬೇಕು.

ಸಿದ್ದರಾಮಯ್ಯ ಅವರನ್ನು ಸೋಲಿಸಲು ಯಾವ ಅಂಡರ್ ಕರೆಂಟ್ ಇದೆ?
ಪ್ರಮುಖವಾಗಿ ಸಾಲಮನ್ನಾದ್ದೇ ಕರೆಂಟ್ ಇದೆ. ಅಲ್ಲದೆ, ಸಿದ್ದರಾಮಯ್ಯ ಅವರ ಮಾತನಾಡುವ ಶೈಲಿ ಹಾಗೂ ಬಾಡಿ ಲಾಂಗ್ವೇಜೇ ಅವರಿಗೆ ಶತ್ರುವಾಗುತ್ತದೆ. ನಾವೇನು ಅವರನ್ನು ಹೀಯಾಳಿಸಬೇಕಿಲ್ಲ. ಅವರ ನಡವಳಿಕೆ ವಿರುದ್ಧವೇ ಜನ ಕಾಂಗ್ರೆಸ್ ಮುಗಿಸುತ್ತಾರೆ. ಚಾಮುಂಡೇಶ್ವರಿಯಲ್ಲಿ ಸೋಲಿಸಲು ಸ್ಟ್ರಾಟಜಿನೇ ಬೇಕಿಲ್ಲ. ಸಿದ್ದಾರಾಮಯ್ಯ ಅವರು ಅಲ್ಲಿಗೆ ಹೋಗಿರುವುದೇಕೆ, ವರುಣಾ ಬಿಟ್ಟು ಚಾಮುಂಡೇಶ್ವರಿ ಮೇಲೆ ಏಕೆ ಮಮತೆ ಬಂತು. ಇದೆಲ್ಲವನ್ನೂ ಜನ ಇದನ್ನು ಯೋಚಿಸುತ್ತಾರೆ.

ಚನ್ನಗಿರಿ: ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದೂ ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ನಾನಾ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದ ಅವರು, ಎರಡೂ ಪ್ರತಿಪಕ್ಷಗಳು ರಾಜ್ಯದಲ್ಲಿ ಅಧಿ ಕಾರಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳುತ್ತಿವೆ. ಆದರೆ, ಅವರಿಗೆ ವಾಸ್ತವ ಸ್ಥಿತಿಯೇ ಗೊತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿರುವ ಜನಪರ ಕಾರ್ಯಕ್ರಮಗಳನ್ನು ಜನ ಈ ಹಿನ್ನೆಲೆಯಲ್ಲಿ ಜನತೆ ಮತ್ತೆ ಐದು ವರ್ಷಗಳ ಕಾಲ ನಮಗೇ ಅಧಿಕಾರ ನೀಡುವುದು ಶತಃಸಿದ್ಧ ಎಂದರು.

ಜೆಡಿಎಸ್‌ಗೆ ಒಳ್ಳೆ ವಾತಾವರಣ ಇದೆ
ಸಮಾವೇಶಕ್ಕೆ ಸೇರುವ ಜನ ಮತಗಳಾಗುತ್ತವೆ. ಕಾರಣ ಮತವಾಗಿ ಪರಿವರ್ತನೆಯಾಗಿ ಪರಿವರ್ತಿಸುವ ಅಭ್ಯರ್ಥಿಗಳಿದ್ದಾರೆ. ಕಳೆದ ಬಾರಿ ಇಂತಹ ಅಭ್ಯರ್ಥಿಗಳಿರಲಿಲ್ಲ. ಈ ಬಾರಿ ಅಂತಹ ಅಭ್ಯರ್ಥಿಗಳಿದ್ದಾರೆ. ಎರಡು ಬಾರಿಯ ಚುನಾವಣೆ ಪ್ರತಿಕ್ರಿಯೆಗೂ ಈ ಬಾರಿಯ ಚುನಾವಣೆಗೆ ತುಂಬಾ ವ್ಯತ್ಯಾಸವಿದೆ. ನನ್ನ ಸಭೆಗೆ ಬರುವವರು ಅಭಿಮಾನದಿಂದ ಬರುತ್ತಾರೆ. ಆದರೆ, ಕಾಂಗ್ರೆಸ್, ಸೇರುವ ಜನರನ್ನು ದುಡ್ಡು ಕೊಟ್ಟು ಕರೆಸುತ್ತಾರೆ. ಹೀಗಾಗಿ ನನ್ನ ಸಮಾವೇಶಕ್ಕೆ ಬರುವ ಜನರೇ ಬೇರೆ, ರಾಷ್ಟ್ರೀಯ ಪಕ್ಷಗಳ ಸಮಾ ವೇಶಗಳಿಗೆ ಸೇರುವ ಜನರೇ ಬೇರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆ ವಾತಾವರಣ ಇದೆ.

ನಮ್ಮದೇ ಅಧಿಕಾರ
ಈ ಹಿಂದೆಯೂ ನಮಗೆ 10-12 ಸ್ಥಾನಗಳು ಬರುತ್ತವೆ ಎಂದು ಹೇಳಿದ್ದವು. ಈಗಲೂ ಸರ್ವೇಗಳಲ್ಲಿ ಜೆಡಿಎಸ್‌ಗೆ 10, 12, 14 ಸ್ಥಾನ ಗಳಷ್ಟೇ ಬರಬಹುದು ಎಂದು ಭವಿಷ್ಯ ನುಡಿದಿದ್ದವು. ಚುನಾವಣೆ ಫಲಿತಾಂಶ ಬಂದಾಗ ಸಮೀಕ್ಷೆ ಮಾಡಿದವರು ಬೇಸ್ತು ಬೀಳ ಬೇಕಾಗುತ್ತದೆ.

ಒಳ ಒಪ್ಪಂದ ಇಲ್ಲ
ನಾವು ಜನರೆದುರು ಮಾಡಿಕೊಂಡಿರುವ ಕಮಿಟ್ ಮೆಂಟ್‌ಗಳನ್ನು ಈಡೇರಿಸುವತ್ತ ಗಮನಹರಿಸಿದ್ದೇವೆ. ಹೀಗಾಗಿ ನಮ್ಮ ಮುಂದೆ ಜನರಿದ್ದಾರೆಯೇ ಹೊರತು ಹೊಂದಾಣಿಕೆಯಲ್ಲ. ನಾವೇ ಸ್ವತಂತ್ರವಾಗಿ ಸರಕಾರ ರಚಿಸುವಷ್ಟು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಇರುವುದರಿಂದ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಅಥವಾ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ.

ಇಷ್ಟು ದಿನ ಒಕ್ಕಲಿಗರ ಮೇಲಿಲ್ಲದೆ ಮಮತೆ ಈಗ ಬಂತಾ? ಜಾತಿವಾದಿಯಲ್ಲ. ಆದರೆ, ಸ್ವಲ್ಪ ಒಕ್ಕಲಿಗರನ್ನು ಸೇರಿಸಿಕೊಂಡು ದಿನ ಪತ್ರಿಕೆಗಳಲ್ಲಿ ಒಕ್ಕಲಿಗರು ಸಿಎಂ ಪರ ಎಂದು ಹೇಳುತ್ತಿ ದ್ದಾರೆ. ಜಾತಿ ನಾಯಕರು ಭಾಷಣ ಮಾಡಿದ ತಕ್ಷಣ ಜನ ಇಂತಹವರಿಗೆ ಮತ ಹಾಕುವುದಿಲ್ಲ.

Comments are closed.