ಮೈಸೂರು: ದಲಿತ ಕಾಲೋನಿಯಲ್ಲಿ ರೋಡ್ ಶೋ ಹಮ್ಮಿಕೊಂಡ ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ ಸಿಎಂ ವಿಚಾರದಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಕಾರಣ ಅವರು ಪೇಚಿಗೆ ಸಿಲುಕಿದರು.
ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಅಶೋಕಪುರಂನಲ್ಲಿ ಪಕ್ಷದ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಪರವಾಗಿ ಭಾನುವಾರ ಮಲ್ಲಿಕಾರ್ಜುನ ಖರ್ಗೆ ಅವರು ರೋಡ್ ಶೋ ನಡೆಸಿ ಬಸವಲಿಂಗಪ್ಪ ವೃತ್ತದ ಬಳಿ ಭಾಷಣ ಮಾಡಲು ಮುಂದಾದ ಸಂದರ್ಭ ಕೆಲ ಸಾರ್ವಜನಿಕರು ಪ್ರಶ್ನೆಗಳ ಸುರಿಮಳೆಗರೆದರು.
ನೀವು ಸಿಎಂ ಆಗಬೇಕು. ಹಾಗಾದರೆ ಮಾತ್ರ ಕಾಂಗ್ರೆಸ್ಗೆ ಮತ ಹಾಕುತ್ತೇವೆ. ಸಿದ್ದರಾಮಯ್ಯ ಸಿಎಂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ವಿಚಲಿತರಾದ ಖರ್ಗೆ ‘‘ ಯಾರನ್ನೇ ಆಗಲಿ ಸಿಎಂ ಮಾಡುವುದು ಪಕ್ಷದ ಹೈಕಮಾಂಡ್ ವಿಚಾರವಾಗಿದೆ. ಈ ಬಗ್ಗೆ ಹಾದಿ-ಬೀದಿಯಲ್ಲಿ ಚರ್ಚೆ ಮಾಡಲು ಆಗುವುದಿಲ್ಲ. ಅಂಬೇಡ್ಕರ್ ಅವರು ವಿವೇಚನೆ ಬಳಸಿ ಮತ ಚಲಾವಣೆ ಮಾಡಲು ಹೇಳಿದ್ದಾರೆ. ನಾನು ಇಂಥದ್ದೇ ಪಕ್ಷಕ್ಕೆ , ಇಂತದ್ದೇ ವ್ಯಕ್ತಿಗೆ ಮತ ಹಾಕಿ ಎಂದು ಹೇಳುವುದಿಲ್ಲ’’ ಎಂದರು.
ಇದು ಪಕ್ಷದ ಅಭ್ಯರ್ಥಿ ಸೋಮಶೇಖರ್ ಅವರಿಗೆ ಮುಜುಗರ ಉಂಟು ಮಾಡಿತು.
Comments are closed.