ರಾಷ್ಟ್ರೀಯ

ಮುಧೋಳ ನಾಯಿಯಷ್ಟು ನಿಯತ್ತು, ದೇಶಭಕ್ತಿ ಕಾಂಗ್ರೆಸ್ಸಿಗರಿಗೆ ಇಲ್ಲ: ನರೇಂದ್ರ ಮೋದಿ

Pinterest LinkedIn Tumblr


ಬಾಗಲಕೋಟ: ದೇಶಭಕ್ತಿಯನ್ನು ಅನುಮಾನದಿಂದ ನೋಡುವ ಕಾಂಗ್ರೆಸ್ಸಿಗರಿಗೆ ಮುಧೋಳ ನಾಯಿಯಷ್ಟೂ ನಿಯತ್ತು, ದೇಶಭಕ್ತಿಯಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿದರು.

ಜಿಲ್ಲೆಯ ಜಮಖಂಡಿಯಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮೋದಿ ಮಾತನಾಡಿದರು.

ನಿಮ್ಮ ಪೂರ್ವಜರು, ಮಹಾತ್ಮಾ ಗಾಂಧಿ ಯವರಿಂದ ದೇಶಭಕ್ತಿ ಕಲಿಯದಿದ್ದರೂ ಕಾಂಗ್ರೆಸ್ ನವರು ಮುಧೋಳ ನಾಯಿಗಳಿಂದಾದರೂ ದೇಶಭಕ್ತಿ ಕಲಿಯಬೇಕು. ನಾಯಿಗಳಿಂದಲೂ ಕಾಂಗ್ರೆಸ್ ನವರು ದೇಶಭಕ್ತಿ ಕಲಿಯುತ್ತಾರೆ ಎಂಬ ವಿಶ್ವಾಸ ನನಗಿಲ್ಲ ಎಂದರು.

ಸೇನೆಯಲ್ಲೂ ಈಗಲೂ ಮುಧೋಳ ತಳಿಯ ನಾಯಿಯ ಪ್ರತ್ಯೇಕ ತಂಡವೇ ಇದೆ. ರಾಷ್ಟ ರಕ್ಷಣೆಯಲ್ಲಿ ಬಾಗಲಕೋಟೆಯ ಕೊಡುಗೆ ಅಪಾರ. ಇಲ್ಲಿನ ಮೂಲದ ಮುಧೋಳ ನಾಯಿಗಳು ಕೂಡ ರಾಷ್ಟ್ರ ರಕ್ಷಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಮೋದಿ ತಿಳಿಸಿದರು.

Comments are closed.