Uncategorized

ಇಸ್ಲಾಂನಲ್ಲಿ ಪುರುಷರಿಗೆ ಒಂದು ಮದುವೆ ಆಗುವ ಅನುಮತಿಯೂ ಇಲ್ಲ

Pinterest LinkedIn Tumblr


ಬಾರಾಕಂಬಿ: ಇಸ್ಲಾಂ ಧರ್ಮದಲ್ಲಿ ಪುರುಷರಿಗೆ ಒಂದು ಮದುವೆ ಆಗುವ ಅವಕಾಶವೂ ಇಲ್ಲ, ಎಂದು ಶಿಯಾ ಧರ್ಮಗುರು ಕಲ್ಬೆ ಜಾವಾದ್ ಹೇಳಿದ್ದಾರೆ.

ಬಾರಾಕಂಬಿಯಲ್ಲಿನ ಮೀರ್ ಮಸೂಮ್ ಅಲ್ ಇಮಾಮ್‌ಬಾಡಾ ಕಟರಾದಲ್ಲಿ ಶಿಯಾ ಸಮುದಾಯದವರನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಜಾವಾದ್, ನಮ್ಮ ಧರ್ಮದಲ್ಲಿ ಪುರುಷರಿಗೆ ಒಂದೇ ಒಂದು ಮದುವೆಯಾಗುವ ಅನುಮತಿ ಇಲ್ಲ. ಒಬ್ಬ ಪುರುಷ ನಾಲ್ಕು ಮಹಿಳೆಯರೊಂದಿಗೆ ಮದುವೆಯಾಗುವುದಿಲ್ಲ, ವಾಸ್ತವವೇನೆಂದರೆ ನಾಲ್ಕು ಮಹಿಳೆಯರು ಒಬ್ಬ ಪುರುಷನೊಂದಿಗೆ ವಿವಾಹವಾಗುತ್ತಾರೆ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ.

ಮೊದಲು ಮಹಿಳೆಯರಿಂದ ನಿನ್ನನ್ನು ವಿವಾಹವಾಗುತ್ತೇನೆ ( ತುಮ್ ಸೇ ನಿಕಾಹ್ ಕರತೀ ಹುಂ) ಎಂದು ಹೇಳಿಸಲಾಗುತ್ತದೆ, ಬಳಿಕ ಪುರುಷ ಒಪ್ಪಿಗೆ ಇದೆ (ಕಬುಲ್ ಹೈ) ಎಂದು ಹೇಳುತ್ತಾನೆ. ಮಹಿಳೆಯರಿಗೆ ಇಸ್ಲಾಂ ಧರ್ಮದಲ್ಲಿ ಕೊಟ್ಟಿರುವಷ್ಟು ಸ್ವಾತಂತ್ರ್ಯವನ್ನು ಬೇರೆ ಯಾವ ಧರ್ಮದಲ್ಲಿಯೂ ನೀಡಿಲ್ಲ. ಅರಿವಿನ ಕೊರತೆಯಿಂದ ಜನರು ನಮ್ಮ ಧರ್ಮದ ವಿರುದ್ದ ಆರೋಪ ಮಾಡುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಯಾವುದೇ ಒಂದು ವಿಷಯದ ಬಗ್ಗೆ ಸಂಪೂರ್ಣ ತಿಳುವಳಿಕೆ ಹೊಂದುವ ಮುನ್ನ ಇದು ತಪ್ಪು ಎಂದು ಬೆರಳು ತೋರಿಸಬಾರದು, ಎಂದವರು ಸಲಹೆ ನೀಡಿದ್ದಾರೆ.

Comments are closed.