ಕರಾವಳಿ

ಶಿವಾಜಿ, ಹನುಮ ನಮಗೆ ಆದರ್ಶ, ಟಿಪ್ಪು ಸುಲ್ತಾನ್ ಕಾಂಗ್ರೆಸಿಗರ ಆದರ್ಶ: ತ್ರಾಸಿಯಲ್ಲಿ ಯೋಗಿ ಆದಿತ್ಯನಾಥ್

Pinterest LinkedIn Tumblr

ಕುಂದಾಪುರ: ಕರ್ನಾಟಕದಲ್ಲಿ ಹನುಮ ಜಯಂತಿ, ಶಿವಾಜಿ ಜಯಂತಿಗೆ ಅವಕಾಶವಿಲ್ಲ. ಆದರೆ ಟಿಪ್ಪು ಜಯಂತಿ ಆಚರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಇರುವ ಉತ್ಸಾಹ ಬೇರೆ ಯಾವ ವಿಚಾರದಲ್ಲೂ ಇಲ್ಲ. ಶಿವಾಜಿ, ಹನುಮ ನಮಗೆ ಆದರ್ಶ. ಟಿಪ್ಪು ಸುಲ್ತಾನ್ ಕಾಂಗ್ರೆಸಿಗರ ಆದರ್ಶ. ಕಾಂಗ್ರೆಸ್ ಜಿಹಾದಿ ತತ್ವಗಳಿಗೆ ಆಶ್ರಯ ನೀಡುತ್ತಿದೆ. ಕರ್ನಾಟಕ ಜಿಹಾದಿಗಳ ಅಡ್ಡವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ದ ಹರಿಹಾಯ್ದರು.

ಬೈಂದೂರು ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಚುನಾವಣಾ ಪ್ರಚಾರಕ್ಕಾಗಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಅವರು ತ್ರಾಸಿಯಲ್ಲಿ ನಡೆದ ಬೃಹತ್ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಕರಾವಳಿಯ ಯುವಕರಿಗೆ ಸುರಕ್ಷೆ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಕರಾವಳಿಯಲ್ಲಿ ಅಭಿವೃದ್ಧಿ ಮಾಡುವ ಬದಲು ಯುವಕರ ಹತ್ಯೆ ಮಾಡಲಾಗುತ್ತಿದೆ. ಬಂದರು ಅಭಿವೃದ್ಧಿ ಮಾಡಲು ಸರ್ಕಾರಕ್ಕೆ ಆಸಕ್ತಿಯಿಲ್ಲ. ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಅವರು ದೂರಿದರು.

ನಾನು ರಾಜ್ಯಕ್ಕೆ ಬಂದರೆ ನಿಮಗೇನು ಕಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ ಯೋಗಿ ಆದಿತ್ಯನಾಥ್, ಇಲ್ಲಿನ ರೈತರು, ಯುವಕರು ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ನಾನು ಕರ್ನಾಟಕಕ್ಕೆ ಬರುತ್ತೇನೆ. ಬಿಜೆಪಿಯ ಜನಪರ ಕೆಲಸಗಳನ್ನು ಜನತೆಗೆ ತಿಳಿಸುತ್ತೇನೆ. ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಸಿದ್ದರಾಮಯ್ಯ ಯಾಕೆ ಸಾಲಮನ್ನಾ ಮಾಡಿಲ್ಲ. ಸಿದ್ದರಾಮಯ್ಯ ಮಾಡದ ಕೆಲಸ ನಾನು ಮಾಡಿ ತೋರಿಸಿದ್ದೇನೆ ಎಂದು ತಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟರು.

ಉತ್ತರ ಪ್ರದೇಶದಲ್ಲಿ 12 ಲಕ್ಷ ಬಡವರಿಗೆ ವಸತಿ ನೀಡಿದ್ದೇವೆ. ವಿದ್ಯುತ್, ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಎಲ್.ಪಿ.ಜಿ ಸಂಪರ್ಕ ನೀಡೋದರಲ್ಲೂ ನಾವು ಕರ್ನಾಟಕ್ಕಿಂತ ಮುಂದಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಯಾಕೆ ಜನರಿಗೆ ತಲುಪಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ ಅವರು, ವಿಕಾಸ ಸಿದ್ದರಾಮಯ್ಯನವರ ಅಜೆಂಡಾ ಅಲ್ಲ. ಯುವ ಸಮುದಾಯ, ರೈತರು, ಅವರ ಅಜೆಂಡಾ ಅಲ್ಲ. ಕರ್ನಾಟಕವನ್ನು ಕಾಂಗ್ರೆಸ್‌ನ ಎಟಿಎಂ ಮಾಡುವುದು ಅವರ ಅಜೆಂಡಾ. ಬಿಜೆಪಿ ಕಾರ್ಯಕರ್ತರ ಕೊಲೆ ಅವರ ಅಜೆಂಡಾ. ಜಿಹಾದಿ ತತ್ವ ಅವರ ಅಜೆಂಡಾ ಎಂದು ಅವರು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

Comments are closed.