ಆರೋಗ್ಯ

ಮೀನು ತಿಂದು ಕೊಬ್ಬು ಕರಗಿಸಿ !

Pinterest LinkedIn Tumblr

ಮಾಂಸಹಾರಿಗಳಲ್ಲಿ ಕೆಲವರಿಗೆ ಮೀನು ತುಂಬಾ ಪ್ರಿಯವಾದ ಆಹಾರ. ಮೀನಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿ ಎಂದು ಅಧ್ಯಯನದಿಂದ ಸಾಬೀತಾಗಿದೆ.

ವಾರದಲ್ಲಿ ನಾಲ್ಕು ಬಾರಿ ಕೊಬ್ಬಿನ ಮೀನುಗಳ ಸೇವಿಸುವುದರಿಂದ ದೇಹದಲ್ಲಿ ಆರೋಗ್ಯಕರವಾದ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ.

ದೇಹದಲ್ಲಿ ಕಂಡುಬರುವ ಹೈ-ಡೆನ್ಸಿಟಿ ಲಿಪೊ ಪ್ರೋಟೀನ್ (ಎಚ್​ಡಿಎಲ್) ಎಂಬ ಉತ್ತಮ ಕೊಲೆಸ್ಟ್ರಾಲ್ ಕಣಗಳನ್ನು ಕೊಬ್ಬಿನ ಮೀನುಗಳ ಸೇವನೆಯಿಂದ ಹೆಚ್ಚಿಸಬಹದು. ಅಲ್ಲದೆ ಚಯಾಪಚಯ ಪ್ರಕ್ರಿಯೆಯನ್ನು ಚುರುಕಾಗಿಸಬಹದು ಎಂದು ಅಧ್ಯಯನ ಹೇಳುತ್ತದೆ.

ಇದಲ್ಲದೆ ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲವು ಹಾನಿಕಾರಕ ಇಂಟರ್​ಮೀಡಿಯೇಟ್-ಡೆನ್ಸಿಟಿ ಲಿಪೊ ಪ್ರೋಟೀನ್ (ಐಡಿಎಲ್) ಕೊಲೆಸ್ಟ್ರಾಲ್ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಎಲ್​​ಡಿಎಲ್​ ಲಿಪೊ ಪ್ರೋಟೀನ್ (ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್) ಮೇಲೆ ದೀರ್ಘ ಸಮಯದವರೆಗೆ ಪರಿಣಾಮ ಬೀರಲು ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಪ್ರಯೋಜನಕಾರಿದೆ ಎಂದು ಈ ಹಿಂದೆ ನಡೆಸಲಾಗಿದ್ದ ಅಧ್ಯಯನದಿಂದ ಸಾಬೀತಾಗಿತ್ತು.

40 ಮತ್ತು 72ರ ವಯಸ್ಸಿನ ಒಳಗಿನ 100 ಮಂದಿ ಫಿನ್​ಲ್ಯಾಂಡ್ ಜನರನ್ನು ಬಳಸಿ 12 ವಾರಗಳ ಕಾಲ ಈ ಅಧ್ಯಯನ ನಡೆಸಲಾಗಿದೆ. ಈ ನೂರು ಮಂದಿಯನ್ನು 4 ಗುಂಪುಗಳಾಗಿ ವಿಭಜಿಸಿ ನಡೆಸಿದ ಈ ಸಂಶೋಧನೆಯಲ್ಲಿ ಕೊಬ್ಬಿನ ಮೀನು ಸೇವೆಸಿದ ಜನರಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿದ್ದು, ಹಾಗೆಯೇ ಕೆಟ್ಟ ಕೊಲೆಸ್ಟಾಲ್ ಮಟ್ಟದಲ್ಲಿ ಇಳಿಕೆ ಆಗಿರುವುದು ಕಂಡು ಬಂದಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

Comments are closed.