ಕರ್ನಾಟಕ

ಕಾಂಗ್ರೆಸ್ ಎಲ್ಲರನ್ನೂ ವಿಭಜನೆ ಮಾಡಿ, ಸಮುದಾಯಗಳ ನಡುವೆ ಕಿಚ್ಚನ್ನು ಹೆಚ್ಚಿಸುತ್ತಿದೆ: ಮೋದಿ ಕಿಡಿ

Pinterest LinkedIn Tumblr

ವಿಜಯಪುರ: ಬಸವ ನಾಡು ವಿಜಯಪುರದ ಬೃಹತ್ ವೇದಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣವನ್ನು ಆರಂಭಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ವಿಜಯಪುರದ ಜನರಿಗೆ ಕನ್ನಡದಲ್ಲಿಯೇ ಶುಭಾಶಯಗಳನ್ನು ಕೋರಿ ಭಾಷಣವನ್ನು ಆರಂಭಿಸಿದ ಮೋದಿ ಎಂದಿನಂತೆ ಆ ಭಾಗದ ಮಹನೀಯರನ್ನು ನೆನೆದು ಪ್ರಣಾಮ ಸಲ್ಲಿಸಿದರು.

ಕರ್ನಾಟಕ ರಾಜ್ಯದಲ್ಲಿ ಬಹುಮತ ಬರುವುದಿಲ್ಲ ಎಂದು ಎಸಿ ರೂಮಿನಲ್ಲಿ ಕುಳಿತ ಜನರು ಮಾತನಾಡುತ್ತಾರೆ. ಆ ಮಾತುಗಳನ್ನು ನಂಬಬೇಡಿ. ಇಲ್ಲಿಗೆ ಬಂದಿರುವ ನೀವೇ ಸಾಕ್ಷಿ. ಒಂದೇ ಪಕ್ಷಕ್ಕೆ ಬಹುಮತ ಬರುತ್ತದೆ ಎಂಬುದು ಗೊತ್ತಾಗುತ್ತದೆ. ಅದು ಸುಳ್ಳು, ಕರ್ನಾಟಕದಲ್ಲಿ ಸ್ಪಷ್ಟ ಸರ್ಕಾರ ಬರುತ್ತದೆ. ಇಲ್ಲಿನ ಜನ ಬದಲಾವಣೆ ಬಯಸಿದ್ದಾರೆ. ಇದಕ್ಕೆ ನೀವೇ ಸಾಕ್ಷಿ ಎಂದು ಹೇಳಿದ್ದಾರೆ.

ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷವನ್ನು ಕೇವಲ ಅಧಿಕಾರದಿಂದ ಮಾತ್ರವೇ ಕೆಳಗಿಳಿಸುವುದಿಲ್ಲ. ಬದಲಿಗೆ 5 ವರ್ಷಗಳ ಕಠಿಣ ಶಿಕ್ಷೆಯನ್ನೂ ನೀಡಲಿದೆ. ವಿಜಯಪುರ ಭಗವಾನ್ ಬಸವೇಶ್ವರರ ಜನ್ಮಭೂಮಿ, ಯಾರನ್ನೂ ಜಾತಿ, ಧರ್ಮದ ಆಧಾರದ ಮೇಲೆ ಬೇರೆ ಮಾಡಬೇಡಿ ಎಂಬ ಸಂದೇಶವನ್ನು ನೀಡಿದೆ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಬಸವಣ್ಣ ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಎಲ್ಲರನ್ನೂ ವಿಭಜನೆ ಮಾಡಿ, ಸಮುದಾಯಗಳ ನಡುವೆ ಕಿಚ್ಚನ್ನು ಹೆಚ್ಚಿಸುತ್ತಿದೆ. ಜಾತಿ, ಧರ್ಮ, ಮತಗಳ ಆಧಾರದ ಮೇಲೆ ವಿಭಜನೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ವಿಜಯಪುರ ಜನತೆ ಸ್ಪಷ್ಟ ಸಂದೇಶವನ್ನು ರವಾನಿಸಬೇಕು. ಇಲ್ಲಿನ ಜನರು ಇಂತಹ ಸರ್ಕಾರವನ್ನು ಕಿತ್ತೊಗೆದು, ಜಾತಿ ಮತ್ತು ಮತಗಳ ಆಧಾರದ ಮೇಲೆ ಒಡೆಯುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದ್ದಾರೆ.

Comments are closed.