ರಾಷ್ಟ್ರೀಯ

ಗಾಯಗೊಂಡ ನಾಗರಹಾವಿಗೆ ಸ್ಪೈನಲ್ ಕಾರ್ಡ್ ಸರ್ಜರಿ

Pinterest LinkedIn Tumblr


ಜನರ ಕಲ್ಲೇಟಿನಿಂದ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಹಾವೊಂದಕ್ಕೆ ಸ್ಪೈನಲ್ ಕಾರ್ಡ್ ಸರ್ಜರಿ ನಡೆಸಿದ ಹೃದಯಸ್ಪರ್ಶಿ ಪ್ರಸಂಗ ಆಂಧ್ರಪ್ರದೇಶದಲ್ಲಿ ನಡೆದಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರಂ ಗ್ರಾಮದ ಬ್ರಹ್ಮಾನಂದ ರಾವ ಎಂಬ ರೈತನ ಮನೆ ಬಳಿ ನಾಗರಹಾವೊಂದು ಓಡಾಡುತ್ತಿತ್ತು. ಅದನ್ನು ನೋಡಿದ ರಾವ್ ಮನೆಯವರು ಸ್ನೇಕ್ ಸೇವರ್ ಸೊಸೈಟಿಗೆ ಕರೆ ಮಾಡಿ ಸ್ಥಳಕ್ಕೆ ಬಂದು ಹಾವನ್ನು ಕೊಂಡೊಯ್ಯುವಂತೆ ಹೇಳಿದ್ದರು. ಆದರೆ ಹಾವನ್ನು ಕಂಡು ಭಯಗೊಂಡ ಜನರು ಅದಕ್ಕೆ ಕಲ್ಲು ಹೊಡೆದಿದ್ದಾರೆ. ಉರಗ ರಕ್ಷಕರ ತಂಡ ಅಲ್ಲಿಗೆ ತಲುಪುವವರೆಗೆ ಗಂಭೀರವಾಗಿ ಗಾಯಗೊಂಡ ಹಾವು ಅರೆಜೀವವಾಗಿತ್ತು.

ಹಾವಿನ ಪರಿಸ್ಥಿತಿ ನೋಡಲಾಗದೇ ವ್ಯಥೆ ಪಟ್ಟ ಸೊಸೈಟಿ ಅಧ್ಯಕ್ಷ ಕ್ರಾಂತಿ ಚಾದಲವಾಡಾ ಹಾವನ್ನು ಹತ್ತಿರದ ಪಶುಚಿಕಿತ್ಸಾಲಯಕ್ಕೆ ಕೊಂಡೊಯ್ದರು. ತಕ್ಷಣ ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬೆನ್ನಿಗೆ 8 ಹೊಲಿಗೆ ಹಾಕಿದ್ದು, ಹಾವು ಬದುಕುಳಿಯಬಹುದುದೆಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಗಾಯಗೊಂಡ ನಾಗರಹಾವಿಗೆ ಸ್ಪೈನಲ್ ಕಾರ್ಡ್ ಸರ್ಜರಿ

ವನ್ಯಜೀವಿಗಳ ರಕ್ಷಣೆಗಾಗಿ ಹುಟ್ಟಿಕೊಂಡಿರುವ ಸ್ನೇಕ್ ಸೇವರ್ ಸೊಸೈಟಿ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಹಕಾರದೊಂದಿಗೆ ಕೆಲಸ ಮಾಡುತ್ತಿದೆ. ಹಾವಿನಂತಹ ಸುಂದರ ಸೃಷ್ಟಿಯ ಸಾವಿಗೆ ಕಾರಣವಾಗುತ್ತಿರುವ ಮೂಢನಂಬಿಕೆಗಳು ಮತ್ತು ಜನರಲ್ಲಿರುವ ಅನಗತ್ಯ ಭಯವನ್ನು ಹೋಗಲಾಡಿಸುವುದೇ ನನ್ನ ಬದುಕಿನ ಗುರಿ ಎನ್ನುತ್ತಾರೆ ಕ್ರಾಂತಿ.

Comments are closed.