ಕರ್ನಾಟಕ

ಕಾಂಗ್ರೆಸ್ ಜಾತಿವಾದ, ಕೋಮುವಾದ, ಅಪರಾಧ, ಗುತ್ತಿಗೆದಾರಿಕೆ, ಭ್ರಷ್ಟಾಚಾರವೆಂಬ ಮೂಲವಾದದಿಂದ ಬಳಲುತ್ತಿದೆ; ಪ್ರಧಾನಿ ಮೋದಿ

Pinterest LinkedIn Tumblr

ಕೋಲಾರ; ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷ 6 ರೋಗಗಳಿಂದ ಬಳಲುತ್ತಿದ್ದು. ಅದರ ವೈರಸ್’ನ್ನು ಎಲ್ಲೆಡೆ ಹರಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.

ಚಿನ್ನದ ನಾಡು ಕೋಲಾರದ ಬಂಗಾರಪೇಟೆಯಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ 6 ರೋಗಗಳಿಂದ ಬಳುತ್ತಿದ್ದು, ಎಲ್ಲೆಡೆ ತನ್ನ ವೈರಸ್ ನ್ನು ಹರಡುತ್ತಿದೆ. ಸಂಸ್ಕೃತಿ, ಜಾತಿವಾದ, ಕೋಮುವಾದ, ಅಪರಾಧ, ಗುತ್ತಿಗೆದಾರಿಕೆ, ಭ್ರಷ್ಟಾಚಾರವೆಂಬ ಮೂಲವಾದದಿಂದ ಕಾಂಗ್ರೆಸ್ ಬಳಲುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು, ಕೋಲಾರ ರಾಜ್ಯಕ್ಕೆ ಕೀರ್ತಿ ತರುವ ಜಿಲ್ಲೆಗಳಾಗಿದ್ದು, ಅವುಗಳ ಕೀರ್ತಿಯನ್ನು ಕಾಂಗ್ರೆಸ್ ಮಣ್ಣುಪಾಲು ಮಾಡುತ್ತಿದೆ.

ಮಹಾರಾಷ್ಟ್ರ, ಗೋವಾ, ಉತ್ತರಪ್ರದೇಷ ಮಧ್ಯಪ್ರದೇಶ, ರಾಜಸ್ತಾನ, ಅಸ್ಸಾಂ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆಯುತ್ತಿದ್ದಾರೆ. ಈ ಬಾರಿ ಕರ್ನಾಟಕದ ಸರದಿಯಾಗಿದೆ. ಜನರಿಗೆ ಕಾಂಗ್ರೆಸ್ ಮೇಲೆ ಭಾರೀ ಆಕ್ರೋಶವಿದೆ. ಕಾಂಗ್ರೆಸ್ ಹೈ ಕಮಾಂಡ್ ದೆಹಲಿಯಲ್ಲಿದೆ. ಆದರೆ, ನಮ್ಮ ಹೈ ಕಮಾಂಡ್ ನೀವು. ಈ ಹೈ ಕಮಾಂಡ್ ಹೇಳಿದರೆ ನಾನೂ ಏನನ್ನೂ ಬೇಕಾದರೂ ಮಾಡುವುದಕ್ಕೆ ಸಿದ್ಧವಿದ್ದೇವೆಂದು ಹೇಳಿದ್ದಾರೆ.

ಇದೇ ವೇಳೆ ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿಯವರು, ಕೆಲವರು ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದ್ದಾರೆ. ಆದರೆ, ಅದು ಕೋಲಾರದ ಮಣ್ಣಿನಿಂದ ಮಾಡಿದ ಚಿನ್ನದ್ದಲ್ಲ. ಭ್ರಷ್ಟಾಚಾರದ ಹಣದಿಂದ ಮಾಡಿದ್ದು. ಚಿನ್ನತ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಜನರಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ.

60 ವರ್ಷ ಅಧಿಕಾರ ನಡೆಸಿದರೂ ಗ್ರಾಮದ ಜನರಿಗೆ ಶೌಚಾಲಯವನ್ನು ನಿರ್ಮಿಸಲು ಅವರಿಗೆ ಸಾಧ್ಯವಾಗಲಿಲ್ಲ. ಸರ್ಕಾರದ 4 ವರ್ಷದ ಅವಧಿಯಲ್ಲಿ ಗ್ರಾಮದಲ್ಲಿ ಶೌಚಾಲಯದ ಕ್ರಾಂತಿ ಮಾಡಿದರೆ. ಮೋದಿ ಶ್ರೀಮಂತರಿಗಾಗಿ ಕೆಲಸ ಮಾಡುತ್ತಾರೆಂದು ಆರೋಪ ಮಾಡುತ್ತಾರೆ.

ನಿನ್ನೆಯಷ್ಟೇ ವ್ಯಕ್ತಿಯೊಬ್ಬರು ಪ್ರಮುಖ ಘೋಷಣೆಯೊಂದನ್ನು ಮಾಡಿದ್ದರು. ತನ್ನನ್ನು ತಾನು ಪ್ರಧಾನಮಂತ್ರಿ ಎಂದು ಘೋಷಣೆ ಮಾಡಿಕೊಂಡಿದ್ದರು. ಇದು ಅವರಲ್ಲಿರುವ ಅಹಂಕಾರವನ್ನು ತೋರಿಸುತ್ತದೆ. ಎಲ್ಲೆಲ್ಲಿ ಕಾಂಗ್ರೆಸ್ ಗೆ ಅವಕಾಶ ಸಿಗುತ್ತಿದೆಯೋ ಅಲ್ಲಿ ಕೆಟ್ಟ ಆಡಳಿತ ನೀಡುತ್ತಿದ್ದು, ನಾಮ್ ದಾರ್ ಗಳ ಪರ ಕೆಲಸ ಮಾಡುವ ಕಾಂಗ್ರೆಸ್, ಜನಸಾಮಾನ್ಯರ ಪರ ಏನು ಮಾಡಿದೆ ಪ್ರಶ್ನೆ ಮಾಡಿದ್ದಾರೆ.

2019ರಲ್ಲಿ ಮೋದಿಯನ್ನು ತೊಲಗಿಸಲು ದೊಡ್ಡಮೈತ್ರಿ ನಡೆಯುತ್ತಿದೆ. ಈ ಮೈತ್ರಿಯಲ್ಲಿ ಹಲವು ದೊಡ್ಡ ದೊಡ್ಡ ನಾಯಕರು ಇದ್ದಾರೆ. ಆದರೆ, ಮೈತ್ರಿಕೂಟದ ಎಲ್ಲಾ ನಾಯಕರನ್ನು ಕತ್ತಲಲ್ಲಿ ನಿಲ್ಲಿಸಿ ತನ್ನನ್ನು ತಾನು ಪ್ರಧಾನಿ ಎಂದು ಘೋಷಣೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂಗೆ ಗ್ರಾಮ ಪಂಚಾಯಿತಿಯಿಂದ ಸಂಸತ್ತಿನ ವರೆಗೂ ಕಾಂಗ್ರೆಸ್ ಧ್ವಜ ಹಾರಾಡುತ್ತಿತ್ತು. ಆದರೆ, ಪ್ರಜಾಪ್ರಭುತ್ವಕ್ಕೆ ಅವರ ಗೌರವ ನೀಡಲಿಲ್ಲ. ಆದ್ದರಿಂದ ಈಗ 40 ಸೀಟಿಗೆ ಬಂದು ಕುಳಿತಿದ್ದಾರೆ. ಇದು ಜನರು ಮಾಡಿದ ಆಶೀರ್ವಾದ ಕಾಂಗ್ರೆಸ್ ಬಡವರ ಪಕ್ಷವಲ್ಲ, ಶ್ರಮಿಕರ ಪಕ್ಷವೂ ಅಲ್ಲ. ದಿಲ್ ವಾಲಾ (ಹೃದಯವಂತರ) ಪಕ್ಷದಲ್ಲಿ, ಅದು ಡೀಲ್ ಮಾಡುವ ಪಕ್ಷ. ಎಲ್ಲದರಲ್ಲೂ ಅದು ಡೀಲ್ ಮಾಡುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಟಿಕೆಟ್ ಹಂಚಿಕೆ ಮಾಡುವುದಿಲ್ಲ. ಮಾರಾಟ ಮಾಡಲಾಗುತ್ತದೆ. ಈ ಮಾತನ್ನು ನಾನು ಹೇಳುತ್ತಿಲ್ಲ, ಚಿಕ್ಕಬಳ್ಳಾಪುರದಿಂದ ಸಂಸತ್ತಿಗೆ ಆಯ್ಕೆಯಾಗಿ ಬಂದ ಹಿರಿಯ ನಾಯಕ ವೀರಪ್ಪ ಮೊಯ್ಲಿಯವರೇ ಹೇಳಿದ್ದಾರೆ.

ಟ್ವಿಟರ್ ನಲ್ಲಿ ವೀರಪ್ಪ ಮೊಯ್ಲಿಯವರು ಈ ಮಾತನ್ನು ಹೇಳಿದ್ದರು. ಕಾಂಗ್ರೆಸ್ ಟಿಕೆಟ್ ಮಾರಾಟವಾಗುತ್ತಿದೆ. ವೀರಪ್ಪ ಮೊಯ್ಲಿ ಅವರು ಸಾಮಾನ್ಯರಲ್ಲ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು. ಅವರೇ ಇದನ್ನು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ನಿಜಲಿಂಗಪ್ಪ, ದೇವರಾಜ್ ಅರಸ್ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿಸಿದೆ. ಈಗ ವೀರಪ್ಪ ಮೊಯ್ಲಿಯವರ ಸರದಿ. ಮೊಯ್ಲಿಯವರ ಬಾಯಿ ಮುಚ್ಚಿಸಿದ ಕಾಂಗ್ರೆಸ್, ಮಹಾಕಾವ್ಯ ಬರೆಯುವ ಕಾರ್ಯವನ್ನೂ ನೀಡಿತು. ಮೊಯ್ಲಿ ಬಾಯಿ ಬಂದ್ ಮಾಡಿದರೂ ನಾವು ಸುಮ್ಮನಿರುವುದಿಲ್ಲ. ಕಾಂಗ್ರೆಸ್ ಬಣ್ಣ ಬಯಲು ಮಾಡುತ್ತೇವೆ.

ಕಾಂಗ್ರೆಸ್ ಪಕ್ಷದ ಸಚಿವರ ಮಮನೆ ಮೇಲೆ ನಡೆದ ಸಂದರ್ಭದಲ್ಲಿ ಸಿಕ್ಕ ಸಂಪತ್ತು, ಈ ರಾಜ್ಯದ ರೈತರದ್ದು, ಸಾಮಾನ್ಯ ಜನರದ್ದು. ಇದು ರಾಜ್ಯದ ಪ್ರತೀಯೊಬ್ಬ ಜನರಿಗೂ ತಿಳಿದಿರುವ ವಿಚಾರ. ಕೋಲಾರದ ಹೆಸರು ಕೆಯಿಂದ ಆರಂಭವಾಗುತ್ತದೆ. ಕೆ ಎಂದರೆ ಕಿಂಗ್ (ರಾಜ). ಕೋಲಾರ ಎಂದರೆ ಕಿಂಗ್ ಆಫ್ ಮ್ಯಾಂಗೋ (ಮಾವಿನ ಹಣ್ಣಿನ ರಾಜ), ಕಿಂಗ್ ಆಫ್ ಗೋಲ್ಡ್ (ಚಿನ್ನದ ರಾಜ), ಕಿಂಗ್ ಆಫ್ ಸಿಲ್ಕ್ (ರೇಷ್ಮೆಯ ರಾಜ), ಕಿಂಗ್ ಆಫ್ ಮಿಲ್ಕ್ (ಹಾಲಿನ ರಾಜ). ಕೋಲಾರದ ಜನರು ಕುಡಿಯುವ ನೀರು ಕೇಳಲು ಮುಖ್ಯಮಂತ್ರಿಗಳ ಬಳಿ ಹೋಗಿದ್ದರು. ಆದರೆ, ಜನರ ಸಮಸ್ಯೆಗೆ ಸ್ಪಂದನೆಗಳು ಸಿಗದೆ, ಲಾಠಿ ಚಾರ್ಜ್ ಮಾಡಲಾಯಿತು. ಈ ಮೂಲಕ ಸರ್ಕಾರ ರೈತರಿಗೆ ಅವಮಾನ ಮಾಡಿದೆ.

ಕಾಂಗ್ರೆಸ್ ಪಕ್ಷ ವಂಶಪಾರಂಪರ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹೊಸ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಅದು ಸುಳ್ಳು ಹೇಳುವುದು, ಪದೇ ಪದೇ ಸುಳ್ಳು ಹೇಳುವುದು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸುಳ್ಳು ಹೇಳುವುದು. ಕಾಂಗ್ರೆಸ್ ಪಕ್ಷ ಪಿಪಿಪಿ ಗಳಿಗೆ ಸೀಮಿತವಾಗಿದೆ. ಅವರ ಪ್ರಕಾರ ಪಿಪಿಪಿ ಎಂದರೆ ಪಂಜಾಬ್, ಪಾಂಡಿಚೇರಿ, ಪರಿವಾರ ಎಂದು ಎಂದು ತಿಳಿಸಿದ್ದಾರೆ.

ಹೊಸ ನಾಯಕರು ಬೆಳೆದರೆ ಇವರ ಕುಟುಂಬ ಬೆಳೆಯುವುದಿಲ್ಲ ಎಂಬ ಆತಂಕ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ. ಆಧ್ದರಿಂದ ಇಲ್ಲಿನ ನಾಯಕರು ತಮ್ಮ ಕುಟುಂಬದವರಿಗೇ ಟಿಕೆಟ್ ಕೊಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮೀಸಲಾತಿ ವಿಚಾರದಲ್ಲಿ ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹೇಳುವ ಸುಳ್ಳುಗಳನ್ನು ನಂಬಬೇಡಿ. ದಲಿತಪರ ಕಾರ್ಯಗಳಿಗೆ ಬಿಜೆಪಿ ನೀಡಿದಷ್ಟು ಕೊಡುಗೆಯನ್ನು ಬೇರಾವ ಪಕ್ಷವೂ ನೀಡಿಲ್ಲ.ದಲಿತರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಹೇಳಿತ್ತು. ಆದರೆ, ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆಯೇ ಅವರನ್ನು ಬದಿಗೆ ಸರಿಸಲಾಯಿತು. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಡವರಿಗೆ, ದಲಿತರಿಗೆ, ರೈತರಿಗೆ ಉತ್ತಮ ಭರವಸೆಗಳನ್ನು ನೀಡಿದ್ದೇನೆ. ಇದನ್ನು ಮತದಾರರ ಮನೆ ಮನೆಗೆ ತಲುಪಿಸಿ, ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ರಚಿಸಲು ಸಹಕರಿಸಿ ಎಂದು ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.

Comments are closed.