ಅಂತರಾಷ್ಟ್ರೀಯ

ಬ್ಯಾಂಕ್’ಗಳಿಗೆ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯರಿಗೆ ಬಿಗ್ ಶಾಕ್ !

Pinterest LinkedIn Tumblr

ಲಂಡನ್‌: ಭಾರತೀಯ ಬ್ಯಾಂಕ್‌ಗಳು ದಾಖಲಿಸಿದ್ದ ಪ್ರಕರಣಗಳಿಂದಾಗಿ ಉದ್ಯಮಿ ವಿಜಯ ಮಲ್ಯ ಅವರಿಗೆ 10,000 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ.

ಸುಸ್ತಿ ಸಾಲ ಪ್ರಕರಣದಲ್ಲಿ ಮಾಜಿ ಮದ್ಯದ ದೊರೆ ವಿಜಯ್‌ ಮಲ್ಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಭಾರತೀಯ ಬ್ಯಾಂಕ್‌ಗಳಿಗೆ ಲಂಡನ್‌ ಕೋರ್ಟ್‌ನಲ್ಲಿ ಜಯ ದೊರೆತಿದೆ. ಮಲ್ಯ ಅವರಿಂದ ಸುಮಾರು 1.55 ಶತಕೋಟಿ ಡಾಲರ್‌ (ಸುಮಾರು 10 ಸಾವಿರ ಕೋಟಿ ರೂ. ) ವಸೂಲಿ ಮಾಡಿ ಕೊಡುವಂತೆ ಕೋರಿ 13 ಭಾರತೀಯ ಬ್ಯಾಂಕ್‌ಗಳ ಒಕ್ಕೂಟ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಮಲ್ಯ ಅವರ ಆಸ್ತಿಗಳ ಮುಟ್ಟುಗೋಲಿಗೆ ಭಾರತೀಯ ಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿದ್ದ ಮಲ್ಯ ಅವರ ಮನವಿಯನ್ನು ಇಲ್ಲಿನ ಹೈಕೋರ್ಟ್‌ ನ್ಯಾಯಾಧೀಶರಾದ ಆಂಡ್ರ್ಯೂ ಹೆನ್‌ಶಾ ಅವರು ತಳ್ಳಿಹಾಕಿದ್ದಾರೆ.

ಇದರೊಂದಿಗೆ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿರುವ ಆಸ್ತಿಗಳನ್ನು ಮಲ್ಯ ಮಾರಾಟ ಮಾಡದಂತೆ ತಡೆಯುವ ಭಾರತೀಯ ಬ್ಯಾಂಕ್‌ಗಳ ಪ್ರಯತ್ನಕ್ಕೆ ಯಶ ದೊರೆತಂತಾಗಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಮಲ್ಯ ಅವುಗಳನ್ನು ಮಾರಾಟ ಮಾಡದಂತೆ ತಡೆಯಬೇಕೆಂದು ಭಾರತದ 13 ಬ್ಯಾಂಕ್‌ಗಳು ಇಂಗ್ಲೆಂಡ್‌ ಹೈಕೋರ್ಟ್‌ನ ವಾಣಿಜ್ಯ ವ್ಯಾಜ್ಯಗಳ ಪೀಠಕ್ಕೆ ಮನವಿ ಸಲ್ಲಿಸಿದ್ದವು.

ಭಾರತೀಯ ಸ್ಟೇಟ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಕಾರ್ಪೊರೇಷನ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯುಕೊ ಬ್ಯಾಂಕ್‌, ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ಇತ್ಯಾದಿ ಬ್ಯಾಂಕ್‌ಗಳು ಅರ್ಜಿದಾರರ ಪಟ್ಟಿಯಲ್ಲಿವೆ.

Comments are closed.