ದಿನಾ ಅರ್ಧ ಗಂಟೆ ವಾಕಿಂಗ್ ಮಾಡುವುದು ಶರೀರದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ವಾಕಿಂಗ್ ಮಾಡಲು ಕೆಲವೊಂದು ಕ್ರಮಗಳಿವೆ. ನಡೆಯುವಾಗ ಆ ಕ್ರಮಗಳನ್ನು ಪಾಲಿಸಿದರೆ ಮಾತ್ರ ವ್ಯಾಯಾಮದ ಪ್ರಯೋಜನಗಳನ್ನು ಪಡೆಯಲು ಸಾಧ್ಯ.
ಹೆಚ್ಚಿನವರು ವಾಕಿಂಗ್ ಮಾಡುವ ಕೆಲವೊಂದು ಮಿಸ್ಟೇಕ್ಸ್ ಮಾಡುತ್ತಾರೆ. ನೀವು ಈ ರೀತಿಯ ಮಿಸ್ಟೇಕ್ಸ್ ಮಾಡುತ್ತಿದ್ದಾರೆ ನಾಳೆಯಿಂದಲೇ ನಿಮ್ಮ ವಾಕಿಂಗ್ ಕ್ರಮದಲ್ಲಿ ಬದಲಾವಣೆ ತನ್ನಿ:
ಮಿಸ್ಟೇಕ್ಸ್ ಒಂದು: ನಿಮ್ಮ ಕೈಗಳು ಚಲಿಸದೆ ಇರುವುದು
ನಡೆಯುವ ವ್ಯಾಯಾಮವೆಂದರೆ ಮೆಲ್ಲನೆ ನಡೆಯುವುದಿಲ್ಲ. ಸ್ವಲ್ಪ ವೇಗವಾಗಿ ನಡೆಯಬೇಕು, ಹಾಗೇ ನಡೆಯುವಾಗ ನಮ್ಮ ಎರಡು ಕೈಗಳನ್ನು ಬೀಸಿ ನಡೆಯಬೇಕು. ಫೋನಿನಲ್ಲಿ ಮಾತನಾಡುತ್ತಾ ನಿಧಾನಕ್ಕೆ ನಡೆದರೆ ವಾಕಿಂಗ್ ಪ್ರಯೋಜನಕಾರಿಯಾಗುವುದಿಲ್ಲ ಎಂಬುವುದು ನೆನಪಿರಲಿ.
ಮಿಸ್ಟೇಕ್ಸ್ 2: ನಡೆಯಬೇಕಾದ ರಸ್ತೆಯ ಆಯ್ಕೆ ಸರಿಯಾಗಿ ಮಾಡದಿರುವುದು
ನೀವು ಎಷ್ಟು ದೂರ ನಡೆದಿರಿ ಎನ್ನುವುದಕ್ಕಿಂತ ಹೇಗೆ ನಡೆದಿರಿ ಎನ್ನುವುದು ಮುಖ್ಯವಾಗಿರುತ್ತದೆ. ಕಿರಿದಾದ ರಸ್ತೆಯಾದರೂ ಸರಿ, ಆದರೆ ನಡೆಯುವಾಗ ವೇಗವಾಗಿ ನಡೆಯಿರಿ.
ಮಿಸ್ಟೇಕ್ಸ್ 3: ಸರಿಯಾದ ಶೂ ಬಳಸದಿರುವುದು
ವಾಕಿಂಗ್ ಮಾಡುವಾಗ ಕಂಫರ್ಟ್ ಆದ ಶೂ ಧರಿಸಿ. ಚಪ್ಪಲಿ ಅಥವಾ ಸ್ವಲ್ಪ ಹೈ ಹೀಲ್ ಇರುವ ಚಪ್ಪಲಿ ಧರಿಸಿ ನಡೆಯುವುದರಿಂದ ಸೊಂಟಕ್ಕೆ ಹಾನಿಯಾಗುತ್ತದೆ.
Comments are closed.