ಕರಾವಳಿ

ರಿಕ್ಷಾ ಮಾಲಕರು ಹಾಗೂ ಚಾಲಕರಿಗೆ ವಿಶೇಷ ಸವಲತು ನೀಡುವ ಬಗ್ಗೆ ಶ್ರಮಿಸುವೆ : ಡಿ.ವೇದವ್ಯಾಸ್ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಪೋರ್ಟ್ ವಾರ್ಡ್ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಂಗಳೂರು ನಗರದ ರಿಕ್ಷಾ ಮಾಲಕರು ಹಾಗೂ ಚಾಲಕರು ರಾತ್ರಿ ಹಗಲು ನೋಡದೆ ದುಡಿಯುತ್ತಾರೆ , ಇನ್ನೂ ಹೆಚ್ಚು ವ್ಯವಸ್ಥಿತ ಅಧಿಕೃತ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ , ರಿಕ್ಷಾ ಚಾಲಕರಿಗೆ ವಿಶೇಷ ವಿಮಾ ಯೋಜನೆ , ಕುಟುಂಭಸ್ಥರಿಗೆ ವಿಶೇಷ ಸವಲತು ನೀಡುವ ಬಗ್ಗೆ ಬರುವ ಬಿ ಜೆ ಪಿ ರಾಜ್ಯ ಸರಕಾರದ ಮೇಲೆ ಒತ್ತಡ ತಂದು ಕಾರ್ಯಗತ ಗೊಳಿಸಲು ಶ್ರಮಿಸುವೆ, ವಿವಿಧ ಜಾತಿ ಧರ್ಮಕ್ಕೆ ಸೇರಿದ್ದರೂ ಅದನ್ನು ಪಕ್ಕಕ್ಕಿಟ್ಟು ಒಂದೇ ಕುಟುಂಬದಂತೆ ಸಹಬಾಳ್ವೆಯಿಂದ ಇರುವುದು ನೋಡಿದರೆ ಸಂತಸವಾಗುತ್ತದೆ. ಅದರಲ್ಲೂ “ನಾವೆಲ್ಲರೂ ಇಲ್ಲಿ ಅಣ್ಣ ತಮ್ಮಂದಿರಂತೆ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಬದುಕು ಸಾಗಿಸುತ್ತಿದ್ದೇವೆ. ಇದಕ್ಕೆ ಭಂಗ ತಂದು ಒಡೆದು ಆಳುವವರನ್ನು ನಾವು ಸಹಿಸುವುದಿಲ್ಲ. “ಹಮ್ ಚಲೇ ಸಾಥ್ ಸಾಥ್”, “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಎಂಬ ಮಾತುಗಳನ್ನು ಹೇಳುವ ಮೂಲಕ ಇಲ್ಲಿನ ಮಿತ್ರರು ನಮ್ಮನ್ನು ಬೆಂಬಲಿಸಿದ್ದು ಸಂತೋಷದ ಸಂಗತಿ ಎಂದು ವೇದವ್ಯಾಸ್ ಕಾಮತ್ ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ಅಶ್ರಫ್ ಹರೇಕಳ, ಭಾಸ್ಕರ ಚಂದ್ರ ಶೆಟ್ಟಿ, ನಿತಿನ್ ಕುಮಾರ್, ಹಮೀದ್ ಕುದ್ರೋಳಿ, ಶ್ರೀನಿವಾಸ್ ಶೇಟ್, ಅಜೀಜ್ ಬೈಕಂಪಾಡಿ, ವಸಂತ್ ಜೆ ಪೂಜಾರಿ, ಅನಿಲ್ ಕುಮಾರ್, ಸುರೇಂದ್ರ ಪಾಂಗಲ್, ರಿಯಾಝ್ ಹೇಮಚಂದ್ರ ಸಾಲ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.