ಕರ್ನಾಟಕ

ಇಂದಿರಾ ಕ್ಯಾಂಟೀನ್ ನಲ್ಲಿ 10,000 ತಟ್ಟೆ-1.2 ಲಕ್ಷ ಸ್ಪೂನ್ ಕಳವು

Pinterest LinkedIn Tumblr


ಬೆಂಗಳೂರು: ಕರ್ನಾಟಕ ಸರ್ಕಾರ ಹಸಿವು ಮುಕ್ತ ಸಮಾಜ ಸೃಷ್ಟಿಸುವ ದೃಷ್ಟಿಯಿಂದ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಕಳೆದ ಆಗಸ್ಟ್ ನಿಂದ ಈವರೆಗೆ ಕ್ಯಾಂಟೀನ್ಗಳಿಂದ 10,000 ತಟ್ಟೆಗಳು ಹಾಗೂ 1.2 ಲಕ್ಷ ಸ್ಪೂನ್ (ಚಮಚ) ಗಳು ಕಳವಾಗಿವೆ! ಇವುಗಳ ಮೌಲ್ಯ ಸುಮಾರು 20 ಲಕ್ಷ ರೂ.! ಇದರಿಂದಾಗಿ ಈಗ ಕ್ಯಾಂಟೀನ್ಗಳ ಸ್ಪೂನ್ಗಳನ್ನು ಕೊಡುವುದನ್ನೇ ನಿಲ್ಲಿಸಿವೆ!

ಇತ್ತೀಚೆಗೆ ಕ್ಯಾಂಟೀನ್ ಗುತ್ತಿಗೆದಾರರು ಬಿಬಿಎಂಪಿಗೆ ಪತ್ರ ಈ ಪಿಡುಗನ್ನು ನಿಯಂತ್ರಿಸುವಂತೆ ಕೋರಿದ್ದಾರೆ. ಆದರೆ ಅವರ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಪಾಲಿಕೆ ‘ನಿಮಗೆ ಸಿಸಿಟಿವಿ ಕ್ಯಾಮೆರಾ ಮತ್ತು ಸೆಕ್ಯುರಿಟಿಗಾರ್ಡ್ ಗಳನ್ನು ಕೊಟ್ಟಿದ್ದೇವೆ. ಅದಕ್ಕಿಂತ ಹೆಚ್ಚಾಗಿ ಏನೂ ಮಾಡಲು ಸಾಧ್ಯವಿಲ್ಲ‘ ಎಂದು ಹೇಳಿ ಕೈ ತೊಳೆದುಕೊಂಡಿದೆ.

ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಒದಗಿಸುವ ಗುತ್ತಿಗೆಯನ್ನು ಚೆಫ್ಟಾಕ್ ಮತ್ತು ರಿವಾಡ್ಸರ್ ಎಂಬ ಸಂಸ್ಥೆಗಳು ವಹಿಸಿಕೊಂಡಿವೆ.
ಚೆಫ್ಟಾಕ್ ಸಂಸ್ಥೆಯ ಎಂ.ಡಿ. ಗೋವಿಂದ ಪೂಜಾರಿ ಎಂಬುವರು ‘ಈವರೆಗೆ 80,000 ಸ್ಪೂನ್ಗಳು ಕಳವಾಗಿವೆ. ಕ್ಯಾಂಟೀನ್ ಆರಂಭಿಸಿದಾಗ ನಮಗೆ 400 ಸ್ಪೂನ್ಗಳನ್ನು ಕೊಟ್ಟಿತ್ತು. ಕೇವಲ 15 ದಿನಗಲಲ್ಲಿ ಅರ್ಧದಷ್ಟು ಕಳವಾದವು. ಬರುಬರುತ್ತಾ ಸರಿಹೋಗುತ್ತದೆ ಎಂದುಕೊಂಡೆವು. ಆದರೆ ಉಳಿದವೂ ನಾಪತ್ತೆಯಾಗಿವೆ. ನಮ್ಮ ಜೇಬಿನಿಂದ ಖರ್ಚು ಮಾಡಿ ಸ್ಪೂನ್ ಗಳನ್ನು ಖರೀದಿಸಬೇಕಾಯಿತು. ಪ್ರತಿ ಕ್ಯಾಂಟೀನ್ ಗೆ 300 ಸ್ಪೂನ್ ಖರೀದಿಸಿದೆವು. ಈಗ ಅವು ಇಲ್ಲವಾಗಿವೆ, ಒಂದು ಸ್ಪೂನಿನ ಬೆಲೆ 15 ರೂ. ಎಂದರು.

Comments are closed.