ರಾಷ್ಟ್ರೀಯ

ತನ್ನ ನಾಲಿಗೆಯನ್ನು ಕತ್ತರಿಸಿ ದುರ್ಗಾದೇವಿಗೆ ಅರ್ಪಿಸಿದ ಮಹಿಳೆ !

Pinterest LinkedIn Tumblr

ಮೊರೆನಾ: ಮಧ್ಯ ಪ್ರದೇಶದಲ್ಲಿ 45 ವರ್ಷದ ಮಹಿಳೆ ತನ್ನ ನಾಲಿಗೆಯನ್ನು ಕತ್ತರಿಸಿ ದುರ್ಗಾದೇವಿಗೆ ಅರ್ಪಿಸಿದ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ದುರ್ಗಾದೇವಿ ಭಕ್ತೆಯಾಗಿದ್ದ ಗುಡ್ಡಿ ತೊಮರ್ ಎಂಬ ಮಹಿಳೆ ನಿನ್ನೆ ತನ್ನ ನಾಲಿಗೆಯನ್ನು ಕತ್ತರಿಸಿ ತರ್ಸಮಾ ಗ್ರಾಮದ ಬಿಜಸೇನ್ ಮಾತಾ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸಿದ್ದಾಳೆ. ಬಳಿಕ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂದು ಪೊರ್ಸ ಪೊಲೀಸ್ ಠಾಣೆ ಅಧಿಕಾರಿ ಅತುಲ್ ಸಿಂಗ್ ಅವರು ಹೇಳಿದ್ದಾರೆ.

ದೇವಸ್ಥಾನದಲ್ಲಿದ್ದ ಕೆಲವು ಜನ ಆಕೆಯನ್ನು ಕೂಡಲೇ ಮೊರೆನಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಸಿಂಗ್ ತಿಳಿಸಿದ್ದಾರೆ.

ಮಹಿಳೆ ಸ್ವತಃ ತನ್ನ ನಂಬಿಕೆ ಮತ್ತು ವಿಶ್ವಾಸದ ಮೇಲೆ ನಾಲಿಗೆ ಕತ್ತರಿಸಿಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ.

ನನ್ನ ಪತ್ನಿ ಮದುವೆಯಾದ ದಿನದಿಂದಲೂ ನಿತ್ಯ ಬೆಳಗ್ಗೆ ಬಿಜಸೇನ್ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಅದೇ ರೀತಿ ನಿನ್ನೆ ಸಹ ದೇವಸ್ಥಾನಕ್ಕೆ ಹೋಗಿದ್ದು, ಪ್ರಾರ್ಥನೆ ಬಳಿಕ ದಿಢೀರ್ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಮಹಿಳೆ ಪತಿ ರವಿ ತೊಮರ್ ಅವರು ಹೇಳಿದ್ದಾರೆ.

Comments are closed.