ಕರಾವಳಿ

ಪ್ರಜ್ವಲ್ ಯುವಕ ಮಂಡಲದ ವಾರ್ಷಿಕೋತ್ಸವ – ಸಾಧಕರಿಗೆ ಸನ್ಮಾನ: ಮಕ್ಕಳಿಗೆ ಪುಸ್ತಕ ವಿತರಣೆ

Pinterest LinkedIn Tumblr

ಮಂಗಳೂರು : ನಗರದ ಸೂಟರ್ ಪೇಟೆಯಲ್ಲಿರುವ ಪ್ರಜ್ವಲ್ ಯುವಕ ಮಂಡಲ ಕಳೆದ 20 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಇದರ 13ನೇ ವಾರ್ಷಿಕೋತ್ಸವ ಹಾಗೂ ಮಕ್ಕಳಿಗೆ ಪುಸ್ತಕ ವಿತರಣಾ ಸಮಾರಂಭ ಇತ್ತೀಚಿಗೆ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ರಂಗವೇದಿಕೆಯಲ್ಲಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಾಂಚನ ಹೊಂಡ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಶ್ರೀ ಪ್ರಸಾದ್ ರಾಜ್ ಕಾಂಚನ್ ಅವರು, ” ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ. ಶಿಕ್ಷಣದ ಮೂಲಕ ಅಧಿಕಾರ ಹಾಗೂ ಸಾಮಾಜಿಕ ಸ್ಥಾನಮಾನ ಗಳಿಸಬಹುದು. ಈ ನೆಲೆಯಲ್ಲಿ ಪ್ರಜ್ವಲ್ ಯುವಕ ಮಂಡಲ ನಿರಂತರ 13 ವರ್ಷಗಳ ಕಾಲ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಚೋಟ ಮಂಗಳೂರು ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಮಗದ ಇವರು ವಹಿಸಿ , ಇಂದು ಮಕ್ಕಳಿಗೆ ಶಿಕ್ಷಣ ಅಗತ್ಯ. ಮಕ್ಕಳ ಶಿಕ್ಷಣಕ್ಕಾಗಿ ಯುವ ಸಂಘಟನೆಗಳು ಹೆಚ್ಚು ಪ್ರೋತ್ಸಾಹ ನೀಡಿದಾಗ ಮಾತ್ರ ಸಾಮಾಜಿಕ ಅಸಮಾನತೆ ಹೋಗಲಾಡಿಸ ಬಹುದು ಎಂದು ಹೇಳಿದರು.

ಶ್ರೀ ಕೋರ್ದಬ್ಬು ದೇವಸ್ಥಾನ ಸೂಟರ್ ಪೇಟೆ ಇದರ ಗುರಿಕಾರರಾದ ಶ್ರೀ ಎಸ್ ರಾಘವೇಂದ್ರ, ನಿವೃತ್ತ ಉಪ ತಹಶೀಲ್ದಾರರಾದ ಶ್ರೀ ಪಿ.ಬಾಬು, ಜಾನಪದ ವಿದ್ವಾಂಸ ಶ್ರೀ ಕೆ. ಕೆ.ಪೇಜಾವರ, ಕ್ರೀಡಾ ಅಂಕಣಕಾರ ಶ್ರೀ ಎಸ್. ಜಗದೀಶ್ಚಂದ್ರ ಅಂಚನ್, ಪುಡ್ ಫೌಂಡ್ ಕುವೈಟ್ ಇದರ ಅಸಿಸ್ಟೆಂಟ್ ಮೆನೇಜರ್ ಎಲ್ವೀಸ್ ನೊರೋನ್ಹ ಇವರು ಮುಖ್ಯ ಅತಿಥಿಗಳಾಗಿದ್ದರು.

ಯುವಕ ಮಂಡಲದ ಅಧ್ಯಕ್ಷ ರಾದ ಶ್ರೀ ಅನಿಲ್ ಪೆರೀಸ್ , ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ ಕುಮಾರ್ ಹಾಗೂ ಪದಾಧಿಕಾರಿಗಳು
ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಿಟ್ಟೆಲ್ ಮೆಮೋರಿಯಲ್ ಜೂನಿಯರ್ ಕಾಲೇಜು ಗೋರಿಗುಡ್ಡೆ ಇದರ ಪ್ರಾಂಶುಪಾಲರಾದ ಶ್ರೀ ಎ .ವಿಠಲ ಅವರನ್ನು ಸನ್ಮಾನಿಸಲಾಯಿತು . ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ನಂತರ ರಂಗುರಂಗಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಸೃಜನ್ ಪೇಜಾವರ ನಿರೂಪಿಸಿದರು.

Comments are closed.