ಕರಾವಳಿ

ಕಣ್ಣುಗಳ ಅಂದ ಹೆಚ್ಚಿಸಲು ಸುಲಭ ಸಲಹೆ

Pinterest LinkedIn Tumblr

ಮುಖ ಸುಂದರವಾಗಿ ಕಾಣಲು ಕಣ್ಣುಗಲುಮಹತ್ವದ ಪಾತ್ರ ವಹಿಸುತ್ತವೆ. ಕಣ್ಣುಗಳೇ ನಮ್ಮ ಭಾವನೆಯಯನ್ನು ವ್ಯಕ್ತಪಡಿಸುತ್ತದೆ ಎಂದು ಹೇಳುವುದು ಇದಕೆಂದೇ. ಇತ್ತೀಚಿನ ದಿನಗಳಲ್ಲಿ ಫೋನ್ ಹಾಗು ಇತರ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ಕಣ್ಣುಗಳು ಬೇಗ ಸುಕ್ಕುಗಟ್ಟಿದಂತೆ ಕಾಣಿಸುತ್ತವೆ. ನಿಮ್ಮ ಕಣ್ಣುಗಳ ಅರೋಗ್ಯ ಚೆನ್ನಾಗಿದ್ದರೆ ನಿಮ್ಮ ಮುಖ ಕೂಡ ಅಂದವಾಗಿ ಕಾಣಿಸುತ್ತದೆ.

ಕಣ್ಣುಗಳ ಅಂದ ಹೆಚ್ಚಿಸಲು ಸಲಹೆಗಳು ಇಲ್ಲಿವೆ

ಸವತೆ ಕಾಯಿ
ದಿನವೂ ನಾವು ಕಂಪ್ಯೂಟರ್, ಫೋನ್ ,ಟಿವಿ,ಗಳನ್ನು ಹೆಚ್ಚು ನೋಡಿ ನಮ್ಮ ಕಣ್ಣುಗಳು ದಣಿದಿರುತ್ತದೆ.ಅದರಿಂದ ಮುಖ ಬಳಲಿದಂತೆ ಕಾಣುತ್ತದೆ. ನಾವು ಹೆಚ್ಚು ಇಲೆಕ್ಟ್ರಾನಿಕ್ ಉಪಕರಣಗಳನ್ನು ಉಪಯೋಗಿಸಿದಷ್ಟು ಕಣ್ಣಿನ ಸುತ್ತಲೂ ಕಪ್ಪು ಬಣ್ಣ ಬರಬಹುದು ಅಥವಾ ಕಣ್ಣಿಗಳು ಬೇಗನೆ ಸುಕ್ಕುಗಟ್ಟಬಹುದು. ಸವತೇ ಕಾಯಿ ಕಣ್ಣುಗಳ ಅಂದ ಹೆಚ್ಚಿಸಲು ತುಂಬಾ ಉಪಕಾರಿಯಾದ ತರಕಾರಿ. ಸವತೆ ಕಾಯಿಯನ್ನು ಫ್ರಿಡ್ಜ್ ನಲ್ಲಿಟ್ಟು ಅದನ್ನು ಚೆನ್ನಾಗಿ ತೊಳೆದು ತಣ್ಣಗಾದ ಮೇಲೆ ಅಡ್ಡವಾಗಿ ಕತ್ತರಿಸಿ. ಮಲಗುವ ಮುನ್ನ ಅಥವಾ ಮನೆಯಳ್ಳಿ ಬಿದಿದ್ದಾಗ ಮಲಗುವ ವೇಳೆ ಆ ಕತ್ತರಿಸಿದ ಸವತೇ ಕಾಯಿಯನ್ನು ಕಣ್ಣುಗಳಮೇಲೆ ಇತ್ತು ಅರ್ಧಗಂಟೆಗೂ ಹೆಚ್ಚುಕಾಲ ಬಿಡಿ. ಬೆಚ್ಚಗಿನ ಅಥವಾ ತಣ್ಣನೆ ನೀರಿನಿಂದ ಕಣ್ಣಿಗಳನ್ನು ಸ್ವಚ್ಛಗೊಳಿಸಿ. ಇದು ಕಣ್ಣುಗಳಇಗೆ ಚೈತನ್ಯವನ್ನು ನೀಡುತ್ತದೆ ಹಾಗು ಬಳಲಿಕೆಯನ್ನು ಕಮ್ಮಿ ಮಾಡುತ್ತದೆ.

ಹಾಲಿನ ಉಪಯೋಗಗಳು
ನಾವು ಬಿಸಿಲಿನಲ್ಲಿ ಹೆಚ್ಚು ಹೊತ್ತು ಇದ್ದಾಗ ನಮ್ಮ ಕಣ್ಣಿನ ಸುತ್ತಲೂ ಕಪ್ಪು ಕಲೆಗಳಾಗಬಹುದು, ಇದು ಬಿಸಿಲಿನಲ್ಲದೆ ಇದ್ದರೂ ಆಗಬಹುದು ಆ ಕಪ್ಪು ಡಾರ್ಕ್ ಸರ್ಕಲ್ ಅನ್ನು ಹೋಗಲಾಡಿಸಲು ಹಾಲನ್ನು ಬಳಸಬಹುದು.ಹೇಗೆಂದರೆ ತೆಳುವಾದ ಹತ್ತಿಯನ್ನು ತೆಗೆದುಕೊಂಡು ಹಸಿ ಹಾಲಿನಲ್ಲಿ ಅದ್ದಿ ಅದರಿಂದ ಕಣ್ಣಿನ ಸುತ್ತಲೂ ನಯವಾಗಿ ಮಸ್ಸಾಜ್ ಮಾಡಿ ಕೊಳ್ಳಬೇಕು ಹೀಗೆ ಮಾಡಿದರೆ ಕಣ್ಣಿನ ಸುತ್ತಲೂ ಇರುವ ಡಾರ್ಕ್ ಸರ್ಕಲ್ ಕ್ರಮೇಣ ಕಡಿಮೆಯಾಗುತ್ತದೆ.

ಕಣ್ಣಿನ ಆರೋಗ್ಯ ಚೆನ್ನಾಗಿಡಲು ಆಹಾರಗಳನ್ನು ಈ ಸೇವಿಸಿ
ಕ್ಯಾರೆಟ್ ಅಥವಾ ಕ್ಯಾರೆಟ್ ಜ್ಯೂಸ್
ದ್ರಾಕ್ಷಿ
ಮೊಟ್ಟೆಗಳು

Comments are closed.