ಕರಾವಳಿ

ಯಾವ ಡ್ರಿಂಕ್ ಕುಡಿದರೇ ಯಾವ ರೀತಿಯ ಪ್ರಯೋಜನ ದೇಹಕ್ಕೆ ಗೋತ್ತೆ..?

Pinterest LinkedIn Tumblr

ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಎಲ್ಲರಿಗೂ ತಿಳಿದ ವಿಷಯವೇ. ಆದರೂ ಸಹ ಹಲವಾರು ಮಂದಿ ಮದ್ಯಪಾನ ಮಾಡುವ ಅಭ್ಯಾಸವನ್ನು ತ್ಯಜಿಸುವುದಿಲ್ಲ. ಕೆಲವರು ಆಲ್ಕೋಹಾಲನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ, ಇನ್ನು ಕೆಲವರು ಯಾವಾಗಲೂ ಅದೇ ಕೆಲಸದಲ್ಲಿರುತ್ತಾರೆ. ಯಾವುದು ಏನೇ ಆಗಲಿ…ಬೀರ್,ವಿಸ್ಕೀ,ವೋಡ್ಕಾ,ವೈನ್,ಬ್ರಾಂದೀ…ಹೀಗೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು ಮಿತವಾಗಿ ಸೇವಿಸಿದರೆ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತವೆಂದು ವಿಜ್ಞಾನಿಗಳು ಹೇಳುತ್ತಾರೆ. ಇಷ್ಟಕ್ಕೂ ಯಾವ ಡ್ರಿಂಕ್ ಕುಡಿದರೇ ಯಾವ ರೀತಿಯ ಪ್ರಯೋಜನ ಉಂಟಾಗುತ್ತದೆಂದು ತಿಳಿಯೋಣ…

ವಿಸ್ಕೀ…
ವಾರದಲ್ಲಿ ಒಂದೆರಡು ಪೆಗ್ಗುಗಳಷ್ಟು ವಿಸ್ಕೀ ಕುಡಿದರೆ…ಕ್ಯಾನ್ಸರ್ ಬರುವ ಅವಕಾಶಗಳು ಕಡಿಮೆಯಾಗುತ್ತವಂತೆ. ಹೃದಯದ ಸಮಸ್ಯೆಗಳೂ ಬರುವುದಿಲ್ಲ. ಶರೀರದ ತೂಕ ನಿಯಂತ್ರಣದಲಿರುತ್ತದೆ. ದೆಮೊಂತಿಯಾ, ಆಲ್ಜೀಮರ್ಸ್ ಮೊದಲಾದ ವ್ಯಾಧಿಗಳು ಬರುವುದಿಲ್ಲವಂತೆ. ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದಂತೆ.

ವೋಡ್ಕಾ…
ವೋಡ್ಯಾ ಕುಡಿಯುವುದರಿಂದ ಮಾನಸಿಕ ಒತ್ತಡ, ಆತಂಕ ದೂರವಾಗುತ್ತವಂತೆ. ಡಿಪ್ರೆಷನ್ ಕಡಿಮೆಯಾಗುತ್ತದೆ, ಬಾಯಿಯ ದುರ್ವಾಸನೆ ದೂರವಾಗುತ್ತದೆ. ಕೂದಲ ಸಮಸ್ಯೆ ದೂರವಾಗಿ ಕೂದಲು ಸೊಂಪಾಗಿ ಬೆಳೆಯುತ್ತವೆ. ತಲೆ ಹೊಟ್ಟು ಕಡಿಮೆಯಾಗುತ್ತದೆ. ಶರೀರದ ಭಾರ ಕಡಿಮೆಯಾಗುತ್ತದೆ.ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹಲ್ಲು ನೋವು ವಾಸಿಯಾಗುತ್ತದೆ.

ರೆಡ್ ವೈನ್…
ರೆಡ್ ವೈನ್ ಕುಡಿದರೆ… ಶರೀರದಲ್ಲಿ ಹಾರ್ಮೋನ್ ಗಳ ಅಸಮತೋಲನ ಕಡಿಮೆಯಾಗುತ್ತದೆ. ಎಲ್ಲಾ ಅವಯವಗಳೂ ಸರಿಯಾಗಿ ಕೆಲಸಮಾಡುತ್ತವೆ. ಚಯಾಪಚಯ ಕ್ರಿಯೆ ನಿಯಂತ್ರಣದಲ್ಲಿರುತ್ತದೆ. ಹೃದಯದ ತೊಂದರೆಗಳು ಹತ್ತಿರ ಸುಳಿಯುವುದಿಲ್ಲ. ಆಯುಷ್ಯ ಹೆಚ್ಚುತ್ತದೆ. ಇತರರಿಗೆ ಹೋಲಿಸಿದಲ್ಲಿ ರೆಡ್ ವೈನ್ ಕುಡಿಯುವವರ ಆಯುಷ್ಯ ಶೇ. 34 ಅಧಿಕವಾಗಿರುತ್ತದೆ.

ಟೆಕಿಲಾ…
ಇದನ್ನು ಸೇವಿಸಿದರೆ ಹೃದಯದ ತೊಂದರೆಗಳು ಬರುವುದಿಲ್ಲ. ಜೀರ್ಣ ಸಂಬಂಧೀ ಸಮಸ್ಯೆಗಳು ತೊಲಗುತ್ತವೆ. ಗ್ಯಾಸ್,ಅಸಿಡಿಟಿ, ಮಲಬದ್ಧತೆ ದೂರವಾಗುತ್ತವೆ. ಜೀರ್ಣಾಂಗಗಳು ಶುದ್ಧವಾಗುತ್ತವೆ. ಆತಂಕ, ಸಿಡಿಮಿಡಿಗೊಳ್ಳುವುದು ಕಡಿಮೆಯಾಗುತ್ತವೆ. ಆದರೆ, ಇದನ್ನು ವಾರಕ್ಕೆ ಒಂದು ಪೆಗ್ ಮಾತ್ರ ಕುಡಿಯಬೇಕು. ಹೆಚ್ಚು ಕುಡಿದರೆ, ಅನಾರೋಗ್ಯ ಉಂಟಾಗುತ್ತದೆ.

ಬ್ರಾಂದೀ…
ಬ್ರಾಂದೀ ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ. ನಿದ್ರಾಹೀನತೆಯಿಂದ ನರಳುತ್ತಿರುವವರು ಒಂದು ಪೆಗ್ ಬ್ರಾಂದೀ ಕುಡಿದು ಮಲಗಿಕೊಂಡರೆ ಒಳ್ಳೆಯ ನಿದ್ದೆ ಬರುತ್ತದೆ.ಶರೀರದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸೋಂಕು ನಿವಾರಣೆಯಾಗುತ್ತದೆ. ಕೆಮ್ಮು ,ನೆಗಡಿ ಕಡಿಮೆಯಾಗುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಕುಡಿದರೆ ದ್ವಿಗುಣ ಲಾಭಗಳಾಗುತ್ತವೆ.

ಬೀರ್…
ಬೀರ್ ಕುಡಿದರೆ, ಕೂದಲು ಆರೋಗ್ಯಕರವಾಗಿರುತ್ತದೆ. ಕೂದಲು ಒತ್ತಾಗಿ ಬೆಳೆಯುತ್ತವೆ. ಹೊಳೆಯುತ್ತಿರುತ್ತವೆ. ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಮಿದುಳು ಚುರುಕಾಗುತ್ತದೆ. ಮಧುಮೇಹ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಮೂತ್ರಪಿಂಡಗಳಿಗೆ ಬಹಳ ಉತ್ತಮ. ಶರೀರಕ್ಕೆ ವಿಟಮಿನ್ ಗಳು ದೊರೆಯುತ್ತವೆ.

ಷಾಂಪೇನ್…
ಷಾಂಪೇನ್ ಕುಡಿಯುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಚರ್ಮ ಸಮಸ್ಯೆಗಳು ನಿವಾರನೆಯಗುತ್ತವೆ. ಚರ್ಮ ಮೃದುವಾಗಿ, ಕಾಂತಿಯುತವಾಗುತ್ತದೆ. ಮೊಡವೆ, ಮಚ್ಚೆಗಳು ನಿರಿಗೆಗಳು ಮಾಯವಾಗುತ್ತವೆ. ತೂಕ ಕಡಿಮೆಯಾಗುತ್ತದೆ. ಹೃದಯ ಚೆನ್ನಾಗಿ ಕೆಲಸ ಮಾಡುತ್ತದೆ. ಹಲ್ಲುಗಳ ಸಮಸ್ಯೆ ನಿವಾರಣೆಯಾಗುತ್ತದೆ.

ವೈಟ್ ವೈನ್…
ವೈಟ್ ವೈನ್ ಕುಡಿಯುವುದರಿಂದ ಶ್ವಾಸಕೋಶಗಳು ಶುಭ್ರವಾಗುತ್ತವೆ. ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಶಕ್ತಿ ಹೆಚ್ಚುತ್ತದೆ. ದಿನವಿಡೀ ಲವಲವಿಕೆಯಿಂದ ಇರುತ್ತಾರೆ. ಶರೀರದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸ್ತ್ರೀಯರಲ್ಲಿ, ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಹೃದಯ ಸಂಬಂಧೀ ಖಾಯಿಲೆಗಳು ಬರುವುದಿಲ್ಲ. ರಕ್ತ ಪ್ರಸಾರ ಸುಗಮವಾಗುತ್ತದೆ. ಚರ್ಮದ ನಿರಿಗೆಗಳು ಕಡಿಮೆಯಾಗುತ್ತವೆ.

Comments are closed.