ಮನೋರಂಜನೆ

ಬಾತ್‌ಟಬ್‌ನಲ್ಲಿ ಮುಳುಗಿ ಮೃತಪಟ್ಟ ಬಾಲಿವುಡ್ ನಟಿ ಶ್ರೀದೇವಿ: ತನಿಖೆಗೆ ಆದೇಶಿಸಿದ ಅರ್ಜಿ ವಜಾ

Pinterest LinkedIn Tumblr


ನವದೆಹಲಿ: ಫೆಬ್ರವರಿಯಲ್ಲಿ ನಟಿ ಶ್ರೀದೇವಿ ಸಾವಿನ ಕುರಿತು ಉನ್ನತ ತನಿಖೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿದ್ದ ಪೀಠ, ನಟಿ ಶ್ರೀದೇವಿ ಸಾವಿನ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡಬಾರದು ಎಂದು ಅರ್ಜಿದಾರರಿಗೆ ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ ಅರ್ಜಿ ತಿರಸ್ಕೃತಗೊಂಡ ನಂತರ ಸುನೀಲ್‌ ಸಿಂಗ್‌ ಎಂಬ ಫಿಲ್ಮ್‌ ಮೇಕರ್‌ ಸುಪ್ರೀಂ ಕೋರ್ಟ್‌ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

54 ವರ್ಷದ ನಟಿ ಶ್ರೀದೇವಿ ತಮ್ಮ ಸಂಬಂಧಿಕರೊಬ್ಬರ ಮದುವೆ ಸಮಾರಂಭಕ್ಕೆಂದು ದುಬೈಗೆ ತೆರಳಿದ್ದಾಗ ಲಕ್ಸುರಿ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದರು. ಶ್ರೀದೇವಿ ಪ್ರಜ್ಞೆ ಕಳೆದುಕೊಂಡ ನಂತರ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದ್ದರು ಎಂದು ದುಬೈನ ಫೋರೆನ್ಸಿಕ್‌ ವರದಿಯಲ್ಲಿ ಹೇಳಲಾಗಿತ್ತು.

ಅರ್ಜಿದಾರರ ಪರ ವಕೀಲ ವಿಕಾಸ್‌ ಸಿಂಗ್‌, ಶ್ರೀದೇವಿ ಹೆಸರಿನಲ್ಲಿ ಒಮನ್‌ನಲ್ಲಿ 240 ಕೋಟಿ ರೂ. ಇನ್ಸುರೆನ್ಸ್‌ ಪಾಲಿಸಿ ಇತ್ತು. ಅದು ಯುಎಇನಲ್ಲಿ ಮೃತಪಟ್ಟರೆ ಮಾತ್ರ ಹಣ ಬಿಡುಗಡೆಯಾಗುತ್ತದೆ ಎಂಬ ನಿಯಮವಿತ್ತು. ಹೀಗಾಗಿ ಶ್ರೀದೇವಿ ಅವರ ಸಾವನ್ನು ತನಿಖೆಗೆ ಆದೇಶಿಸಬೇಕು ಎಂದು ಕೋರ್ಟ್‌ಗೆ ತಿಳಿಸಿದ್ದರು.

ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ, ಈ ಸಂಬಂಧ ಈಗಾಗಲೇ ಇದೇ ರೀತಿಯ ಎರಡು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Comments are closed.