ಕರ್ನಾಟಕ

ರಾಜ್ಯ ವಿಧಾನಸಭಾ ಚುನಾವಣೆ: ಸಕಲ ರೀತಿಯ ಭದ್ರತೆ; ಐಜಿಪಿ ನೀಲಮಣಿ

Pinterest LinkedIn Tumblr


ಬೆಂಗಳೂರು: ಚುನಾವಣೆಯ ಭದ್ರತೆಗೆ ಎಲ್ಲಾ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸುರಕ್ಷತೆಗೆ ಅಗತ್ಯ ಭದ್ರತಾ ಸಿಬಂದಿಗಳನ್ನು ನಿಯೋಜಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ ಎಂದು ಡಿಜಿ ಮತ್ತು ಐಜಿಪಿ ನೀಲಮಣಿ ಎನ್‌ ರಾಜು ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಚುನಾವಣೆಗೆ ಜನವರಿಯಿಂದಲೇ ಸಿದ್ದತೆ ಮಾಡಿಕೊಂಡಿದ್ದು, ಹಲವು ಬಾರಿ ಸಭೆಗಳನ್ನು ನಡೆಸಿದ್ದೇವೆ. ಅಧಿಸೂಚನೆಗೂ ಮುನ್ನ ಸಭೆಗಳನ್ನು ನಡೆಸಿದ್ದೇವೆ ಎಂದರು.

ಭದ್ರತೆಗೆ ರಾಜ್ಯದ ಪೊಲೀಸರ ಜೊತೆಗೆ ಕೇಂದ್ರದ ತುಕಡಿಗಳು,585 ಕೇಂದ್ರ ಮೀಸಲು ಪಡೆ ತುಕಡಿಗಳು,ಛತ್ತೀಸ್‌ಘಡ, ಗೋವಾ,ಮಹಾರಾಷ್ಟ್ರದ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ತಮಿಳು ನಾಡು ಪೊಲೀಸರನ್ನು ಭದ್ರತೆಗೆ ಬಳಿಕೊಳ್ಳುತ್ತಿದ್ದೇವೆ. 22 ಸಾವಿರ ಗೃಹ ರಕ್ಷಕ ದಳದ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 82,157 ಸಿಬಂದಿಗಳು ಬೂತ್‌ಗಳ ಭದ್ರತೆಗೆ ನಿಯೋಜಿಸಿದ್ದೇವೆ. ಕಾರಾಗೃಹ, ಅಗ್ನಿ ಶಾಮಕ ದಳದ ಸಿಬಂದಿಗಳೂ ಭದ್ರತೆ ಗಾಗಿ ಕೆಲಸ ನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಲೋಕಾಯುಕ್ತ ಇಲಾಖೆಯನ್ನು ಭದ್ರತೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದರು.

ಗಡಿ ಭಾಗಗಳಲ್ಲಿ ಗಡಿ ರಾಜ್ಯಗಳ ಪೊಲೀಸರ ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ. ಸ್ಕ್ವಾಡ್‌ ರೂಂಗಳ ಸುರಕ್ಷತೆಗೆ ಕೇಂದ್ರ ಮೀಸಲು ಪಡೆಯನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಸಾವಿರ ಸಿಐಎಸ್‌ಎಫ್ ಸಿಬಂದಿಗಳು ಭದ್ರತೆಗೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಸೇರಿ 1 ಲಕ್ಷಕ್ಕೂ ಹೆಚ್ಚು ಸಿಬಂದಿ ಭದ್ರತಾ ಕರ್ತವ್ಯದಲ್ಲಿದ್ದಾರೆ. ಅರೆಸೇನಾ ಪಡೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

Comments are closed.