ಮುಂಬೈ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯಲ್ಲೂ ರಾಹುಲ್‌ ಘನತೆ: ಶಿವಸೇನೆ

Pinterest LinkedIn Tumblr


ಮುಂಬಯಿ: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಪ್ರಚಾರದ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಯಲ್ಲೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಘನತೆ ಕಾಪಾಡಿಕೊಂಡಿದ್ದಾರೆ ಎಂದು ಶಿವಸೇನೆ ಶ್ಲಾಘಿಸಿದೆ.

ಇದೇ ವೇಳೆ, ಪ್ರಧಾನಿಯಾಗುವ ಇಚ್ಚೆ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ ಹೇಳಿಕೆ ಬಗ್ಗೆ ಬಿಜೆಪಿ ವ್ಯಂಗ್ಯದ ಬಗ್ಗೆ ಶಿವಸೇನೆ ಕಿಡಿಕಾರಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಬಿಜೆಪಿಗೆ ಸವಾಲೊಡ್ಡಬಲ್ಲರು ಎಂಬ ವಿಶ್ವಾಸವನ್ನು ಶಿವಸೇನೆ ವ್ಯಕ್ತಪಡಿಸಿದೆ.

ಪಕ್ಷ ದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ”2019ರಲ್ಲಿ ಪಕ್ಷ ಬಹುಮತ ಗಳಿಸಿದರೆ ನಾನೇ ಪ್ರಧಾನಿ ಎಂಬುದಾಗಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊರಹಾಕಿರುವ ರಾಹುಲ್‌ ಗಾಂಧಿ ಹೇಳಿಕೆಯನ್ನು ಟೀಕಿಸುವ ಬದಲು ಬಿಜೆಪಿ ಸ್ವಾಗತಿಸಬೇಕಿತ್ತು,” ಎಂದು ಪ್ರತಿಪಾದಿಸಿದೆ.

”ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದಿದ್ದರೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯನ್ನು ಸೋಲಿಸುವುದಾಗಿ ಹೇಳಬೇಕಾಗಿತ್ತು. ಅಷ್ಟೇ ಅಲ್ಲದೆ, ರಾಹುಲ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೇ ಎಂಬುದನ್ನು ತೀರ್ಮಾನಿಸುವುದು ಜನರೇ ಹೊರತು ಬಿಜೆಪಿಯಲ್ಲ,” ಎಂದೂ ಶಿವಸೇನೆ ಟಾಂಗ್‌ ನೀಡಿದೆ.

”2014ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಕ್ಕೆ ಹೋಲಿಸಿದರೆ, ರಾಹುಲ್‌ ಗಾಂಧಿ ಈಗ ಸಾಕಷ್ಟು ಬದಲಾಗಿದ್ದಾರೆ. ಈಗ ಅವರೊಬ್ಬ ದೃಢ ಮನಸ್ಸಿನ ನಾಯಕನಾಗಿ ಹೊರಹೊಮ್ಮಿದ್ದು, ಈ ಅಂಶ ಕಳದ ವರ್ಷದ ನಡೆದ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ,” ಎಂದೂ ಸಂಪಾದಕೀಯ ಶ್ಲಾಘಿಸಿದೆ.

Comments are closed.