ರಾಷ್ಟ್ರೀಯ

ಮಹಾಪಂಚಾಯತ್ ನಿಂದ ವಿಚಾರಣೆಯ ಹಂತದಲ್ಲಿದ್ದ ಪ್ರಕರಣವೊಂದು ಇತ್ಯರ್ಥ

Pinterest LinkedIn Tumblr


ಫರೀದಾಬಾದ್‌: ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದ ಪ್ರಕರಣವೊಂದನ್ನು ಮಹಾಪಂಚಾಯತ್ ಒಂದು ರಾಜಿ ಪಂಚಾಯಿತಿ ನಡೆಸಿ ಇತ್ಯರ್ಥಗೊಳಿಸಿದೆ. ಮಧ್ಯಪ್ರದೇಶದ ಉತವಾಡ್‌ ಗ್ರಾಮದಲ್ಲಿ 2016ರ ಮೇ 25ರಂದು ನಡೆದಿದ್ದ ನಾಲ್ವರ ಕೊಲೆ ಪ್ರಕರಣ ಕುರಿತು 84 ಗ್ರಾಮಗಳ ಸರಪಂಚರು ಸಭೆ ಸೇರಿ ಪ್ರಕರಣ ಇತ್ಯರ್ಥಪಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಅಂತಿಮವಾಗಿ ಕೊಲೆ ಆರೋಪಿಗಳು ಕೊಲೆಯಾದ ನಾಲ್ವರ ಕುಟುಂಬಕ್ಕೆ 1 ಕೋಟಿ 60 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪಂಚಾಯಿತಿ ನಿರ್ಧಾರ ಕೈಗೊಂಡಿದೆ.

ಪಂಚಾಯಿತಿಯ ನಿರ್ಧಾರ ಕೈಗೊಳ್ಳುವಲ್ಲಿ ಮಾಜಿ ಶಾಸಕ ಅಜ್ಮತ್ ಖಾನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಉಭಯ ಕಡೆಯವರನ್ನು ಕರೆಸಿ, ಸರಪಂಚರು ರಾಜಿ ತೀರ್ಮಾನ ಕೈಗೊಂಡಿದ್ದಾರೆ. ಈ ನಿರ್ಧಾರಕ್ಕೆ ಎರಡೂ ಕಡೆಯವರು ಒಪ್ಪಿದ್ದಾರೆ ಎನ್ನಲಾಗಿದೆ.

ಆದರೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮೇ 24ರಂದು ನಡೆಯಲಿತ್ತು. ಅದಕ್ಕೂ ಮೊದಲೇ ಪಂಚಾಯಿತಿ ನಡೆಸಿ, ರಾಜಿ ತೀರ್ಮಾನ ನಡೆಸಿರುವ ಮಹಾಪಂಚಾಯಿತಿಯ ಕ್ರಮ ವಿವಾದಕ್ಕೆ ಕಾರಣವಾಗಿದೆ.

ಪರಿಹಾರದ ಮೊತ್ತವಾಗಿ ಪಡೆಯಲಾಗುವ 1 ಕೋಟಿ 60 ಲಕ್ಷ ರೂ. ಅನ್ನು ಕೊಲೆಗೀಡಾದ ದೀನು, ರಝಾಕ್, ಹಮೀದ್‌ ಮತ್ತು ವಾಸಿಂ ಅವರ ಕುಟುಂಬಕ್ಕೆ ನೀಡಲಾಗುತ್ತದೆ. ಆದರೂ ಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಅವರಿಗೆ ಏನು ಹೇಳಬೇಕೆಂದು ಪಂಚಾಯಿತಿ ಸೂಚನೆ ನೀಡಲಿದೆ. ಅಲ್ಲದೆ ಪಂಚಾಯಿತಿ ತೀರ್ಮಾನ ಕೈಗೊಂಡಿದೆ ಎಂದು ಪ್ರಕರಣವನ್ನು ನ್ಯಾಯಲಯ ಕೈಬಿಡುವಂತಿಲ್ಲ. ಹೀಗಾಗಿ ಮುಂದಿನ ವಿಚಾರಣೆ ಕುತೂಹಲ ಮೂಡಿಸಿದೆ.

Comments are closed.