ಕರ್ನಾಟಕ

ಅಜ್ಜಿಯ ಸಹಾಯಕ್ಕೆ ಬಂದಿದ್ದ ಯುವಕನಿಂದ ಕಾಂಗ್ರೆಸ್‌ಗೆ ಬದಲು ಜೆಡಿಎಸ್‌ಗೆ ಮತ

Pinterest LinkedIn Tumblr


ಮಂಡ್ಯ: ಜಿಲ್ಲೆಯಲ್ಲಿ ಅಜ್ಜಿಯ ಸಹಾಯಕ್ಕೆಂದು ಮತದಾನ ಮಾಡಲು ಬಂದಿದ್ದ ಯುವಕ ಅಜ್ಜಿ ಹೇಳಿದ್ದನ್ನು ಬಿಟ್ಟು ಬೇರೆ ಪಕ್ಷಕ್ಕೆ ಮತ ಚಲಾಯಿಸಿ ಮೋಸ ಮಾಡಿದ್ದಾನೆ. ಅಜ್ಜಿ ಕಾಂಗ್ರೆಸ್‌ಗೆ ಓಟು ಹಾಕು ಅಂದ್ರೆ ಯುವಕ ಜೆಡಿಎಸ್‌ಗೆ ಮತ ಚಲಾವಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ಸಾದೊಳಲು ಗ್ರಾಮದಲ್ಲಿ ಅಜ್ಜಿಯ ಮತವನ್ನು ಜೆಡಿಎಸ್‌ಗೆ ಯುವಕ ಮತ ಹಾಕಿದ್ದಾನೆ. ತಾನು ಮಾಡಿದ ಮೋಸದ ಓಟನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದಾನೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಮದ್ದೂರು ಕ್ಷೇತ್ರದ ಕೈ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೆಲ್ಫಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.