ಕರ್ನಾಟಕ

ಜೆಡಿಎಸ್​ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪತ್ನಿ ಆಕ್ಷೇಪ: ಮತಯಂತ್ರದ ಸ್ಥಳ ಬದಲಾವಣೆ

Pinterest LinkedIn Tumblr


ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪತ್ನಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತಯಂತ್ರ ಇಟ್ಟಿದ್ದ ಸ್ಥಳವೇ ಬದಲಾಯಿತು.

ಗುಂಗ್ರಾಲ್​ ಛತ್ರದ ಮತಗಟ್ಟೆಗೆ ಆಗಮಿಸಿದ ಜಿಟಿಡಿ ಪತ್ನಿ ಲಲಿತಾ ಮತಯಂತ್ರ ಇಟ್ಟ ಜಾಗ ಸರಿಯಿಲ್ಲ ಎಂದು ಸಿಬ್ಬಂದಿ ಬಳಿ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಜಾಗ ಬದಲಿಸಿದ ನಂತರ ಅವರು ಮತದಾನ ಮಾಡಿದರು.

ಆ್ಯಂಬುಲೆನ್ಸ್​ನಲ್ಲಿ ಬಂದ ಅಭ್ಯರ್ಥಿ

ಕೆ.ಆರ್​.ನಗರ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್​ ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಹಾಕಿದರು. ಗುರುವಾರ ರಾತ್ರಿ ಪ್ರಚಾರ ಮುಗಿಸಿ ಹೋಗುವಾಗ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಅವರು ಆ್ಯಂಬುಲೆನ್ಸ್​ನಲ್ಲಿ ಬಂದು ವೋಟು ಹಾಕಿದರು.

ಮತದಾನ ಬಹಿಷ್ಕಾರ

ಹುಣಸೂರು ತಾಲೂಕಿನ ಹರೀನಹಳ್ಳಿ ಗ್ರಾಮದಲ್ಲಿ ವಿದ್ಯುತ್​ ಸ್ಪರ್ಶದಿಂದ ಮೃತಪಟ್ಟ ಯುವತಿ ಪರಿಹಾರ ನೀಡಲು ಒತ್ತಾಯಿಸಿ ಮತದಾನವನ್ನೇ ಬಹಿಷ್ಕಾರ ಮಾಡಿದ್ದಾರೆ. ಶುಕ್ರವಾರ ಸುರಿದ ಮಳೆಯಿಂದ ಮನೆಯೆದುರು ಇದ್ದ ವಿದ್ಯುತ್​ ಕಂಬದಿಂದ ವಿದ್ಯುತ್​ ಅವಘಡ ಉಂಟಾಗಿ ಪಲ್ಲವಿ (16) ಮೃತಪಟ್ಟಿದ್ದಳು. ಆಕೆಗೆ ತಂದೆಯೂ ಇಲ್ಲ. ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿದ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.

Comments are closed.