ಕರಾವಳಿ

ಉಡುಪಿ ಜಿಲ್ಲೆಯಲ್ಲಿ 78.57% ಮತದಾನ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ!

Pinterest LinkedIn Tumblr

ಉಡುಪಿ: ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಮತದಾರ ಅತಿ ಉತ್ಸಾಹದಿಂದ ಮತದಾನ ಮಾಡಿದ್ದು‌ ಕಂಡು ಬಂದಿದೆ. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜಿಲ್ಲೆಯಲ್ಲಿ ಶೇಕಡವಾರು 78.57% ರಷ್ಟು‌ ಮತದಾನ ನಡೆದಿದೆ. ಕುಂದಾಪುರ ಕ್ಷೇತ್ರದಲ್ಲಿ 79.05%, ಬೈಂದೂರು- 77.76%, ಉಡುಪಿ-77.38%, ಕಾಪು-76.79%, ಕಾರ್ಕಳ-77.85% ಮತದಾನ ನಡೆದಿದೆ.

ಇಡೀ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಸುವಲ್ಲಿ ಚುನಾವಣಾ ಅಯೋಗ ಯಶಸ್ವಿಯಾಗಿದೆ. ಬೆಳ್ಳಗ್ಗಿನಿಂದಲೂ ಮತದಾರು ಸರತಿ‌ಸಾಲಿನಿಂದ ಮತ ಚಾಲಾಯಿಸಿದ್ದಾರೆ. ಒಂದೆರಡು ಕಡೆಗಳಲ್ಲಿ ಮತ ಯಂತ್ರದಲ್ಲಿ ದೋಷ ಕಂಡು ಬಂದ ಕಾರಣ ಸರತಿ ಸಾಲಲ್ಲಿ ನಿಂತಿದ್ದ ಮತದಾರರು ಒಂದಷ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಚುನಾವಣಾ ಅಧಿಕಾರಿಗಳು ತಕ್ಷಣ ಮತ ಯಂತ್ರಗಳನ್ನ‌ ಬದಲಿಸಿ ಮತದಾನ ಪ್ರಕ್ರಿಯೆ ಸುಗಮವಾಗುವಂತೆ ಅನುವು ಮಾಡಿಕೊಟ್ಟರು.

ಇನ್ನೂ ಜಿಲ್ಲೆಯ ಅತೀ ಸೂಕ್ಷ್ಮ ಮತಗಟ್ಟೆಗಳಾದ ನಕ್ಸಲ್ ಪೀಡಿತ ಪ್ರದೇಶದಲ್ಲೂ ಜನ ನಿರ್ಭಯವಾಗಿ ಬಂದು ಮತದಾನ ನಡೆಸಿದರು. ನಕ್ಸಲ್ ಪೀಡಿತ ಭಾಗದಲ್ಲಿ ಚುನಾವಾಣ ಆಯೋಗ ಬಿಗಿ ಪೊಲೀಸ್ ಬಂದೂಬಸ್ತ್ ಎರ್ಪಡಿಸಿದ್ದು,ವಿಶೇಷ ಅರೆಸೇನಾ ತುಕಡಿಗಳನ್ನು ನಿಯೋಜಿಸಿತ್ತು. ಹೀಗಾಗಿ ಹಳ್ಳಿಗಾಡಿನ ಜನ ನಿರ್ಭೀತರಾಗಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು.

ವಿಶೇಷವಾಗಿ ಮತಗಟ್ಟೆಗೆ ಆಗಮಿಸುವ ವಿಕಲಚೇತರರಿಗೆ ವೀಲ್ ಚೇರ್ ಗಳ ವೆವಸ್ಥೆಯನ್ನ ಮಾಡಿದ್ದು,ವಿಕಲಚೇತನರು ವೀಲ್ ಚೇರ್ ನಲ್ಲಿ ಬಂದು ಮತ ಚಾಲಾಯಿಸಿದರು. ಮಹಿಳೆಯರ ಅನೂಕುಲಕ್ಕೆ ವಿಶೇಷವಾಗಿ ನಿರ್ಮಿಸಲಾದ ಪಿಂಕ್ ಬೂತ್ ಗಳು ಈ ಬಾರಿ ಯಶಸ್ವಿಯಾಗಿವೆ .

ಒಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ.ಜಿಲ್ಲಾಡಳಿತ ಹಾಗೂ ಚುನಾವಣಾ ಅಯೋಗದ ಮತದಾನ ಜಾಗೃತಿ ಕಾರ್ಯಕ್ರಮ ಅತ್ಯಂತ ಯಶಸ್ವಿ ಕೂಡ ಅಗಿದೆ ಶೇಕಡಾವಾರು‌ ಮತದಾನವೇ ಸಾರಿ‌ ಹೇಳುತ್ತಿದೆ. ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ ಅತಿ ಜಾಣ್ಮೆಯಿಂದ ಮತ ಯಂತ್ರದ ಗುಂಡಿಯ ಮೂಲಕ‌ ಒತ್ತಿದ್ದು ಯಾರ ಭವಿಷ್ಯ ಎನಾಗಲಿದೆ… ಅನ್ನೋದು ಮತ ಎಣಿಕೆ ದಿನ ಬಹಿರಂಗವಾಗಲಿದೆ.

Comments are closed.