ಕರ್ನಾಟಕ

ಬಿಜೆಪಿ ಅಭ್ಯರ್ಥಿಯ ಬೆಂಬಲಿಗರಿಂದ ಫ‌ಲಿತಾಂಶ ಪ್ರಕಟಕ್ಕೂ ಮೊದಲೇ ವಿಜಯೋತ್ಸವ!

Pinterest LinkedIn Tumblr


ಕಲಬುರಗಿ: ಚುನಾವಣೆ ಮುಗಿದ್ದಿದ್ದು ಮತದಾರರ ತೀರ್ಪು ಇವಿಎಂನೊಳಗೆ ಭದ್ರವಾಗಿದ್ದು ಮಂಗಳವಾರ ಹೊರ ಬೀಳಲಿದೆ. ಆದರೆ ಅಳಂದ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತದಾನ ಮುಗಿಯುತ್ತಿದ್ದಂತೆ ವಿಜಯೋತ್ಸವ ಆರಂಭಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುಭಾಷ್‌ ಗುತ್ತೇದಾರ್‌ ಅವರು ಗೆದ್ದೆ ಗೆಲ್ಲುತ್ತಾರೆ ಎನ್ನುವ ಅಮಿತ ಉತ್ಸಾಹದಲ್ಲಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಕೇಕೆ ಹಾಕಿ ಸಂಭ್ರಮಿಸಿದ್ದಾರೆ.

ಅಳಂದದಲ್ಲಿ ಉತ್ತಮ ಪ್ರಮಾಣದ ಮತಾದನವಾಗಿದ್ದು ಹೆಚ್ಚಿನ ಮತದಾರರು ಬಿಜೆಪಿ ಪರ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಖಚಿತ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Comments are closed.