ರಾಷ್ಟ್ರೀಯ

ಆಮಂತ್ರಣ ಪತ್ರಿಕೆ ಹಂಚಿದ ಬಳಿಕ ಬರುತ್ತಿರುವ ಫೋನ್‌ ಕರೆಗಳಿಗೆ ಪೊಲೀಸರಿಗೆ ದೂರು ನೀಡಿದ ವರ! 

Pinterest LinkedIn Tumblr


ನೆಂಟರಿಷ್ಟರಿಗೆ ಮದುವೆಯ ಆಮಂತ್ರಣ ಪತ್ರ ಹಂಚಿ ಆದ ಬಳಿಕ ಅವರು ವಧು ಅಥವಾ ವರನಿಗೆ ಯಾವ ಕಾರಣಕ್ಕೆ ಫೋನ್‌ ಕರೆ ಮಾಡಬಹುದು? ಅಭಿನಂದನೆ ಹೇಳಲು ಅಥವಾ ವಿಳಾಸ ಖಚಿತಪಡಿಸಿಕೊಳ್ಳಲು ಕರೆ ಮಾಡುತ್ತಾರೆ. ಆದರೆ ಕೇರಳದ ಕಲ್ಲಿಕೋಟೆಯ ವರ ವಿಭೀಶ್‌ ಆಮಂತ್ರಣ ಪತ್ರಿಕೆ ಹಂಚಿದ ಬಳಿಕ ಬರುತ್ತಿರುವ ಫೋನ್‌ ಕರೆಗಳಿಂದ ರೋಸಿ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಂದಹಾಗೆ ಈ ಕರೆಗಳು ಯಾಕಾಗಿ ಬರುತ್ತವೆ ಗೊತ್ತಾ? ವಧುವಿನ ವಿಚಿತ್ರ ಹೆಸರಿನ ಅರ್ಥ ತಿಳಿದುಕೊಳ್ಳಲು. ಪತ್ರಿಕೆಯಲ್ಲಿ ವಧುವಿನ ಹೆಸರು “ಧ್ಯಾನೂ ರ್ಹನಾಗಿತಿ'(dhyanoo rhagithy) ಎಂದಿದೆ. ಆದರೆ ಇಷ್ಟೆಲ್ಲಾ ಎಡವಟ್ಟುಗಳಿಗೆ ಕಾರಣ ವಿಭೀಶ್‌ ಅವರೇ.

ಆಮಂತ್ರಣ ಪತ್ರಿಕೆ ಮೇಲೆ “ವಧುವಿನ ಹೆಸರನ್ನು ಸರಿಯಾಗಿ ಉಚ್ಚರಿಸಿದವರಿಗೆ ಮಾತ್ರ ಮದುವೆಗೆ ಆಮಂತ್ರಣ’ ಎಂದು ಬರೆಯಲಾಗಿತ್ತು. ಅದನ್ನು ಅವರು ನೆಂಟರಿಷ್ಟರಿಗೆ ವಾಟ್ಸ್‌ಆ್ಯಪ್‌ ಮೂಲಕ ಹಂಚಿದ್ದರು. ಇದು ಕೇರಳದಾದ್ಯಂತ ವೈರಲ್‌ ಆಗಿ, ಪತ್ರಿಕೆ ಮೇಲೆ ಅಚ್ಚು ಮಾಡಲಾಗಿದ್ದ ಅವರ ಮತ್ತು ಅವರ ತಂದೆಯ ಮೊಬೈಲ್‌ಗೆ 3 ದಿನಗಳಿಂದ ಪುರುಸೊತ್ತಿಲ್ಲದಂತೆ ಕರೆಗಳು ಬರುತ್ತಿವೆ.

Comments are closed.