ಮನೋರಂಜನೆ

ಮಗಳಿಗೆ ಕಿಸ್ ಕೊಟ್ಟದ್ದಕ್ಕೆ ಐಶ್ವರ್ಯ ರೈ ವಿರುದ್ಧ ಕಿಡಿಕಾರಿದ ನೆಟ್ಟಿಗರು !

Pinterest LinkedIn Tumblr

ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಮ್‌ ಅಕೌಂಟ್ ಓಪನ್‌ ಮಾಡಿದ ಐಶ್ವರ್ಯ ರೈ ಬಚ್ಚನ್‌ ಕಾನ್‌ ಚಲನ ಚಿತ್ರೋತ್ಸವದಲ್ಲಿ ಕೆಲವೊಂದು ಫೋಟೋಗಳನ್ನು ಪೋಸ್ಟ್‌ ಮಾಡಿದ್ದರು.

ಅವುಗಳಲ್ಲಿ ಮಗಳು ಆರಾಧ್ಯಾ ಜತೆಗಿನ ಫೋಟೋಗಳನ್ನೂ ಹಂಚಿಕೊಂಡಿದ್ದರು. ತಾಯಿಂದಿರ ದಿನದಂದು ಮಕ್ಕಳಿಗೆ ಮುತ್ತಿಕ್ಕುತ್ತಿರುವ ಫೋಟೋ ಪೋಸ್ಟ್‌ ಮಾಡಿ “LOVE YOUUNCONDITIONALLY Happiest Mama in the World” ಎಂದು ಪೋಸ್ಟ್ ಮಾಡಿದ್ದರು.

ಈ ಫೋಟೋ ನೋಡಿ ಐಶ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರೆ ಮತ್ತೆ ಕೆಲ ನೆಟ್ಟರಿಗರು ಐಶ್ವರ್ಯ ಮಗಳನ್ನು ಚುಂಬಿಸಿರುವ ರೀತಿಯನ್ನು ಆಕ್ಷೇಪಿಸಿ ಟ್ರೋಲ್‌ ಮಾಡಿದ್ದಾರೆ.

ಈ ಟ್ರೋಲ್‌ ಪರ-ವಿರೋಧ ಚರ್ಚೆಗಳು ಇಂಟರ್‌ನೆಟ್‌ನಲ್ಲಿ ಸಕತ್‌ ಸದ್ದು ಮಾಡುತ್ತಿದೆ. ಮಗುವನ್ನು ಸ್ನಾನ ಮಾಡಿಸುವುದು, ಅದನ್ನು ಅಪ್ಪಿಕೊಂಡು ಮಲಗುವುದು, ಸ್ತನಪಾನ ಮಾಡುವುದು ಇವೆಲ್ಲಾ ತಾಯಿ ಮಾಡಬಹುದು, ಆದರೆ ತನ್ನ ಮಗುವನ್ನು ಚುಂಬಿಸಬಾರದೆ? ಎಂದು ಕೆಲವರು ಕೇಳಿದರೆ ತಾಯಿ ಹಾಗೂ ಮಗಳ ಸಂಬಂಧವನ್ನು ಈ ರೀತಿ ಟೀಕಿಸುವುದು ತಪ್ಪು ಎಂದು ಟ್ರೋಲ್‌ ಮಾಡಿದವರಿಗೆ ಪ್ರತ್ಯುತ್ತರ ನೀಡಿದ್ದಾರೆ ಐಶ್ ಅಭಿಮಾನಿಗಳು.

Comments are closed.