ಕರ್ನಾಟಕ

ರಾಜ್ಯದಂತೆ ಗೋವಾದಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡಲು ಕಾಂಗ್ರೆಸ್‌ ಆಗ್ರಹ!

Pinterest LinkedIn Tumblr


ಪಣಜಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕಲ್ಪಿಸಿರುವಂತೆಯೇ ಗೋವಾದಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಗೋವಾ ರಾಜ್ಯಪಾಲರು ಅವಕಾಶ ಕಲ್ಪಿಸುವಂತೆ ಗೋವಾ ಕಾಂಗ್ರೆಸ್‌ ಆಗ್ರಹಿಸಿದೆ.

ಗೋವಾದಲ್ಲಿ ಕಾಂಗ್ರೆಸ್‌ 16 ಶಾಸಕರ ಬಲ ಹೊಂದಿದ್ದು, ಕರ್ನಾಟಕದಲ್ಲಿ ಬಿಜೆಪಿ ನಡೆಸಿರುವ ತಂತ್ರವನ್ನೇ ಅನುಸರಿಸಲು ಕಾಂಗ್ರೆಸ್‌ ಮುಂದಾಗಿದೆ. ತನ್ನ 16 ಶಾಸಕರ ಬೆಂಬಲವಿರುವ ಪತ್ರವನ್ನು ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾರವರಿಗೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ಶುಕ್ರವಾರ ಈ ಕುರಿತಂತೆ ಗೋವಾ ಕಾಂಗ್ರೆಸ್‌, ರಾಜ್ಯಪಾಲರ ಬಳಿ ಮನವಿ ಮಾಡಲಿದೆ ಎನ್ನಲಾಗಿದೆ. ಗೋವಾದಲ್ಲಿ 40 ಸ್ಥಾನಗಳ ಪೈಕಿ ಬಿಜೆಪಿ ಕೇವಲ 14 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಆದರೆ, ಗೋವಾ ಫಾರ್‌ವರ್ಡ್‌, ಮಹಾರಾಷ್ಟ್ರವಾ ದಿ ಗೋಮಾಂತಕ ಪಕ್ಷ ಹಾಗೂ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ಸ್ಥಾಪಿಸಿತ್ತು. ಗೋವಾ ಮಾತ್ರ ವಲ್ಲದೆ ಮಣಿಪುರ ಹಾಗೂ ಮೇಘಾಲಯದಲ್ಲಿಯೂ ಕಾಂಗ್ರೆಸ್‌ ಇದೇ ತಂತ್ರ
ಅನುಸರಿಸುವ ಸಾಧ್ಯತೆಯಿದೆ.

Comments are closed.