ಕರ್ನಾಟಕ

ವಿಶ್ವಾಸ ಮತಯಾಚನೆಗೆ ಕ್ಷಣಗಣನೆ ಆರಂಭ; ಕಾಂಗ್ರೆಸ್ಸಿನ ಇಬ್ಬರು ಶಾಸಕರು ಕಲಾಪಕ್ಕೆ ಗೈರು

Pinterest LinkedIn Tumblr

ಬೆಂಗಳೂರು; ಭಾರೀ ಹೈಡ್ರಾಮಗಳಿಗೆ ಸಾಕ್ಷಿಯಾಗಿರುವ ಕರ್ನಾಟಕದಲ್ಲಿನ ಹೊಸ ಸರ್ಕಾರ ರಚನೆಯ ಕಸರತ್ತು ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಅಂದುಕೊಂಡಂತೆಯೇ ವಿಧಾನಮಂಡಲ ಅಧಿವೇಶನಕ್ಕೆ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಅವರು ಗೈರು ಹಾಜರಾಗಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಆನಂದ್ ಸಿಂಗ್ ಅವರು ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಾರೆಂಬ ವದಂತಿಗಳು ಹಬ್ಬಿವೆ. ಇದೀಗ ಅಧಿವೇಶನಕ್ಕ ಆನಂದ್ ಸಿಂಗ್ ಅವರು ಗೈರು ಹಾಜರಾಗಿರುವುದು ಈ ಸುದ್ದಿಗಳಿಗೆ ಇಂಬು ನೀಡುವಂತಾಗಿದೆ.

ಆನಂದ್ ಸಿಂಗ್ ಜೊತೆಗೆ ಕಾಂಗ್ರೆಸ್’ನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕೂಡ ಸದನಕ್ಕೆ ಗೈರು ಹಾಜರಪಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಎರಡು ಸಂಖ್ಯೆ ಕಡಿಮೆಯಾಗುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. 117 ಸಂಖ್ಯಾಬಲವಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಇಬ್ಬರ ಗೈರು ಹಾಜರಿನಿಂದಾಗಿ 115ಕ್ಕೆ ಇಳಿಯಲಿದೆ. ಇದರಂತೆ ಬಹುಮತ ಸಾಬೀತಿಗೆ 110 ಮ್ಯಾಜಿಕ್ ನಂಬರ್ ಆಗಲಿದೆ.

Comments are closed.